ಬ್ರೇಕಿಂಗ್ ನ್ಯೂಸ್
08-10-21 04:55 pm Headline Karnataka News Network ಕರ್ನಾಟಕ
ಬೆಂಗಳೂರು, ಅ.8 : ಉತ್ತರ ಪ್ರದೇಶದ ಲಖೀಮ್ ಪುರ್ ಖೇರಿಯಲ್ಲಿ ರೈತರ ಮೇಲೆ ಬಿಜೆಪಿ ಕಾರ್ಯಕರ್ತರು ಜೀಪು ಹರಿಸಿದ ಘಟನೆಯನ್ನು ಅಣಕಿಸಿ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬಿಜೆಪಿ ನಾಯಕರನ್ನು ಕೆಣಕುವ ರೀತಿ ಹೇಳಿಕೆ ನೀಡಿದ್ದಾರೆ.
ದೇಶದ ಜನರಲ್ಲಿ ಒಂದು ಮನವಿ, ಬಿಜೆಪಿ ನಾಯಕರು ಯಾವುದೇ ಕಡೆ ರಸ್ತೆಯಲ್ಲಿ ವಾಹನಗಳಲ್ಲಿ ತೆರಳುತ್ತಿದ್ದರೆ, ಕೂಡಲೇ ಮೊಬೈಲ್ ನಲ್ಲಿ ಕ್ಯಾಮರಾ ತೆರೆದು ರೆಕಾರ್ಡ್ ಮಾಡಿ. ಬಿಜೆಪಿ ನಾಯಕರು ಎಲ್ಲಿ ಏನು ಮಾಡುತ್ತಾರೆಂದು ಹೇಳಕ್ಕೆ ಆಗುವುದಿಲ್ಲ. ಎಲ್ಲಿಯಾದ್ರೂ ಜನರ ಮೇಲೆ ಕಾರು ಹರಿಸಿ, ಸಾಯಿಸಿದರೆ ಆಗ ನಿಮ್ಮ ಕ್ಯಾಮರಾ ರೆಕಾರ್ಡ್ ದೊಡ್ಡ ಸಾಕ್ಷ್ಯವಾಗುತ್ತದೆ. ದೇಶಕ್ಕೆ ನಿಮ್ಮ ದೊಡ್ಡ ಕೊಡುಗೆಯಾಗುತ್ತದೆ ಎಂದು ಡಿಕೆ ಶಿವಕುಮಾರ್ ವಿಡಿಯೋ ಹೇಳಿಕೆಯನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಲಖೀಮ್ ಪುರ್ ಖೇರಿಯಲ್ಲಿ ಕೇಂದ್ರ ಸಚಿವನ ಮಗನ ಜೀಪು ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಅವರ ಮೇಲಿಂದ ಹರಿದು ನಾಲ್ವರು ರೈತರು ಸಾವನ್ನಪ್ಪಿದ್ದರು. ಈ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿರುವಾಗಲೇ ಅದನ್ನು ಅಣಕಿಸಿ, ಡಿಕೆಶಿ ಹೇಳಿಕೆ ನೀಡಿದ್ದಾರೆ.
ಇದಲ್ಲದೆ, ಬಿಜೆಪಿ ನಾಯಕರು ಕಾರಿನಲ್ಲಿ ನಿಮ್ಮ ಹತ್ತಿರದಿಂದ ಬರುತ್ತಾರಂದರೆ, ದಯವಿಟ್ಟು ದೂರವೇ ನಿಂತುಬಿಡಿ. ಈಗಿನ ದಿನಗಳಲ್ಲಿ ಬಿಜೆಪಿ ನಾಯಕರು ಜನರ ಮೇಲೆ ವಾಹನಗಳನ್ನು ಹರಿಸಿ ಕೊಲ್ಲುತ್ತಿದ್ದಾರೆ. ಹಾಗಾಗಿ, ಜನರು ಜಾಗ್ರತೆ ಇರುವಂತೆ ಕೇಳಿಕೊಳ್ಳುತ್ತೇನೆ. ಅಲ್ಲದೆ, ಯಾವಾಗಲೂ ಮೊಬೈಲ್ ಕ್ಯಾಮರಾ ಆನ್ ಮಾಡಿ, ಏನೇ ಆ ರೀತಿಯ ಘಟನೆಗಳಾದಲ್ಲಿ ಅದನ್ನು ರೆಕಾರ್ಡ್ ಮಾಡಿ ಎಂದು ಡಿಕೆಶಿ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ದಾರೆ.
Taking a swipe at the BJP, Karnataka Congress chief DK Shivakumar on Thursday, urged people to record videos whenever BJP leaders' cars passed them. Claiming that BJP leaders may 'decide to run over people' whenever they want, Shivakumar said that such videos will be a great service to the nation. His snide comments after BJP leader Ashish Mishra allegedly mowed down 4 farmers with his car in UP's Lakhimpur Kheri.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
15-09-25 04:57 pm
HK News Desk
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm