ಬ್ರೇಕಿಂಗ್ ನ್ಯೂಸ್
            
                        14-10-21 05:05 pm Headline Karnataka News Network ಕರ್ನಾಟಕ
            ಬೆಂಗಳೂರು, ಅ.14: ಮತಾಂತರ ಚಟುವಟಿಕೆ ಹೆಚ್ಚುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ ರಾಜ್ಯದಲ್ಲಿ ಕ್ರಿಸ್ತಿಯನ್ ಮಿಶನರಿಗಳ ಬಗ್ಗೆ ಸರ್ವೇ ನಡೆಸಲು ರಾಜ್ಯ ಸರಕಾರ ಆದೇಶ ಮಾಡಿದೆ. ಅಧಿಕೃತ ಮತ್ತು ಅನಧಿಕೃತ ಮಿಶನರಿಗಳು ರಾಜ್ಯದಲ್ಲಿ ಎಷ್ಟಿವೆ, ಯಾವ ರೀತಿ ಕಾರ್ಯ ಎಸಗುತ್ತಿವೆ ಎನ್ನುವುದರ ಬಗ್ಗೆ ಸರ್ವೇ ಮಾಡಲು ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಮೂಲಕ ಆದೇಶ ಮಾಡಲಾಗಿದೆ.
ರಾಜ್ಯದಲ್ಲಿ ಮತಾಂತರ ಚಟುವಟಿಕೆ ಹೆಚ್ಚುತ್ತಿರುವ ಆರೋಪದ ಬಗ್ಗೆ ವಿಕಾಸಸೌಧದಲ್ಲಿ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಭೆ ನಡೆದಿದ್ದು, ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ಶಾಸಕರಾದ ಗೂಳಿಹಟ್ಟಿ ಶೇಖರ್, ಪುಟ್ಟರಂಗ ಶೆಟ್ಟಿ, ಬಿ.ಎಂ. ಫಾರೂಕ್, ವಿರೂಪಾಕ್ಷಪ್ಪ ಬಳ್ಳಾರಿ, ಅಶೋಕ್ ನಾಯ್ಕ್ ಸೇರಿದಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗ ಪಾಲ್ಗೊಂಡಿದ್ದರು.
ಕ್ರಿಸ್ತಿಯನ್ ಮಿಶನರಿಗಳಿಗೆ ರಾಜ್ಯ ಸರಕಾರದಿಂದ ಸಿಗುತ್ತಿರುವ ಸವಲತ್ತು ಮತ್ತು ಸೌಲಭ್ಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಅಲ್ಲದೆ, ಮಿಶನರಿಗಳ ಸಂಘಟನೆಗಳು ಸರಕಾರದಡಿ ರಿಜಿಸ್ಟರ್ ಆಗಿವೆಯಾ ಎನ್ನುವ ಬಗ್ಗೆಯೂ ಚರ್ಚೆ ನಡೆಯಿತು. ಮತಾಂತರ ಆಗಿರುವ ಜನರಿಗೆ ಸರಕಾರಿ ಸೌಲಭ್ಯ ಸಿಗದಂತೆ ಮಾಡಬೇಕು ಎಂದು ಅಲ್ಪಸಂಖ್ಯಾತ ಕಲ್ಯಾಣ ನಿಗಮದ ಸದಸ್ಯರು ಸಲಹೆ ಮಾಡಿದ್ದಾರೆ.
ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಮಾತನಾಡಿ, ಪ್ರಾಥಮಿಕ ಮಾಹಿತಿ ಪ್ರಕಾರ ರಾಜ್ಯದಲ್ಲಿ 40 ಶೇಕಡಾ ಚರ್ಚ್ ಗಳು ಅನಧಿಕೃತವಾಗಿ ಕಾರ್ಯಾಚರಿಸುತ್ತಿವೆ. ಈ ಬಗ್ಗೆ ಸರಿಯಾದ ವಿವರಗಳನ್ನು ಕಲೆ ಹಾಕಬೇಕು. ಅಲ್ಲದೆ, ಅನಧಿಕೃತ ಎಷ್ಟಿವೆ ಎಂಬ ಬಗ್ಗೆ ಮಾಹಿತಿ ಪಡೆದು ಕ್ರಮ ಜರುಗಿಸಬೇಕು ಎಂದು ಹೇಳಿದ್ದಾರೆ. ಈಗಾಗ್ಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವುದಾಗಿ ಹೇಳಿದ್ದಾರೆ. ಇತರ ರಾಜ್ಯಗಳಲ್ಲಿ ಈ ಬಗ್ಗೆ ಯಾವ ರೀತಿಯ ಕಾಯ್ದೆಗಳಿವೆ ಎಂಬ ಬಗ್ಗೆ ಅಧ್ಯಯನ ನಡೆಸಿ, ಸೂಕ್ತ ಕಾನೂನು ಜಾರಿಗೆ ತರುವುದಾಗಿ ಹೇಳಿದ್ದಾರೆಂದು ಶಾಸಕ ಗೂಳಿಹಟ್ಟಿ ತಿಳಿಸಿದ್ದಾರೆ.
ಶಾಸಕ ಗೂಳಿಹಟ್ಟಿ ಶೇಖರ್ ಇತ್ತೀಚೆಗೆ ವಿಧಾನಸಭೆ ಅಧಿವೇಶನದಲ್ಲಿಯೂ ಮತಾಂತರ ಚಟುವಟಿಕೆ ಬಗ್ಗೆ ಪ್ರಸ್ತಾಪಿಸಿದ್ದರು. ಅಲ್ಲದೆ, ತನ್ನ ತಾಯಿ ಕೂಡ ಮಿಶನರಿಗಳ ಆಮಿಷಕ್ಕೆ ಬಲಿಯಾಗಿ ಮತಾಂತರ ಆಗಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದವರ ವಿರುದ್ಧ ಮಿಶನರಿಗಳು ಸುಳ್ಳು ಕೇಸು ಹಾಕಿಸುತ್ತಿದ್ದಾರೆ ಎಂದು ಅಧಿವೇಶನದಲ್ಲಿ ಹೇಳಿದ್ದರು.
            
            
            The Backward Classes and Minorities Welfare Department in Karnataka has ordered the officers to conduct a survey of both official and non-official Christian missionaries functioning in the state, according to sources. The order is being issued in the backdrop of discussion of rampant religious conversions in the state. The decision was taken in the meeting held at Vikasa Soudha on Wednesday by the Backward Classes and Minorities Welfare Committee.
    
            
             03-11-25 05:17 pm
                        
            
                  
                Bangalore Correspondent    
            
                    
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             03-11-25 10:47 pm
                        
            
                  
                Mangalore Correspondent    
            
                    
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
    
            
             03-11-25 12:33 pm
                        
            
                  
                Mangalore Correspondent    
            
                    
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm