ಬ್ರೇಕಿಂಗ್ ನ್ಯೂಸ್
15-10-21 03:22 pm Mangaluru Correspondent ಕರ್ನಾಟಕ
ಮಂಡ್ಯ, ಅ.15: ಈವರೆಗಿನ ಸರ್ಕಾರಗಳಲ್ಲಿ ಇವರಂಥ ಬೋಗಸ್ ಸರ್ಕಾರವನ್ನ ನಾನು ನೋಡಿಲ್ಲ. ಮೈಸೂರಿನಲ್ಲಿ ಲೈಟ್ಸ್ ಹಾಕ್ತಾರೆ, ಜನ ಬರಲಿ ನೋಡಲಿ ಅಂತಾರೆ. ಮೆರವಣಿಗೆ ಮಾತ್ರ ಕೋಟೆ ಒಳಗೆ. ಕೊರೊನಾ ಬರುತ್ತೆ ಅಂತಾ ಹೇಳಾರೆ.. ಹೀಗೆಂದು ರಾಜ್ಯ ಸರ್ಕಾರದ ವಿರುದ್ಧ ಖ್ಯಾತ ಇತಿಹಾಸ ತಜ್ಞ ನಂಜೇರಾಜು ಅರಸ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಲೈಟ್ಸ್ ಹಾಕ್ತಾರೆ, ಜನ ಬರಲಿ ನೋಡಲಿ ಅಂತಾರೆ. ಲಕ್ಷಾಂತರ ಜನರೂ ಸೇರ್ತಾರೆ. ಮೆರವಣಿಗೆ ಮಾತ್ರ ಕೋಟೆ ಒಳಗೆ ಮಾಡ್ತಾರೆ. ಕೊರೊನಾ ಬರುತ್ತೆ ಅಂತಾ ಮೆರವಣಿಗೆ ನಿಷೇಧ ಮಾಡ್ತಾರೆ.
ಇವರು ಸಭೆ ಸಮಾರಂಭ ಮಾಡಿದ್ರೆ ಕೊರೊನಾ ಬರೋದಿಲ್ಲ.. ಜನರು ದಸರಾಗೆ ಬಂದ್ರೆ ಮಾತ್ರ ಕೊರೊನಾ ಅಂತೆ..! ಇದೆಲ್ಲಾ ಸರ್ಕಾರದ ನಾಟಕ, ಸರ್ಕಾರ ಜಾತ್ಯಾತೀತ ಸರ್ಕಾರ ಅಂತ ಸಂವಿಧಾನದಲ್ಲೇ ಹೇಳಿಕೊಳ್ತೀವಿ. ಆದರೆ ಇವರು ಒಂದು ಧರ್ಮದ ಧಾರ್ಮಿಕ ಆಚರಣೆಯನ್ನು ಸರಕಾರದವ್ರೇ ಮಾಡುತ್ತಾರೆ.
ಕಾನೂನು ಪ್ರಕಾರ ಮಾಡುವಂತಿಲ್ಲ, ಚಾಮುಂಡಿಯನ್ನ ಹಿಂದು ದೇವರು ಅಂತ ನೀವೇ ಕರಿಯುತ್ತೀರಿ.. ಧಾರ್ಮಿಕ ಉತ್ಸವ ಮಾಡುವುದಕ್ಕೆ ಸರ್ಕಾರಕ್ಕೆ ಹಕ್ಕಿಲ್ಲ. ಆದರೂ ಮಾಡ್ತಿದ್ದಾರೆ, ಇದು ತಪ್ಪು, ಸರಳ ದಸರಾ ಅಂದ್ರೆ ಇದಲ್ಲ.
ಅರಮನೆಯಲ್ಲಿ ಕೊರೊನಾ ಬರಲ್ಲ, ಹೊರಗೆ ಕೊರೊನಾ ಬರುತ್ತೆ ಎನ್ನುವುದು ಮೂರ್ಖತನ. ಸಾವಿರಾರು ಜನ ಲೈಟಿಂಗ್ ನೋಡೋಕೆ ಹೋಗ್ತಿದ್ದಾರೆ. ಲೈಟ್ ಹಾಕಿದ್ದಿವಿ ನೋಡಿ ಬನ್ನಿಯಂತ ಸರ್ಕಾರವೇ ಕರೀತಿದ್ದಾರೆ. ಹೀಗೆ ಜನರು ಒಂದೇ ಕಡೆ ಸೇರಿದ್ರೆ ಕೊರೊನಾ ಬರಲ್ವಾ..? ಮೆರವಣಿಗೆ ಮಾಡಿದ್ರೆ ಮಾತ್ರನಾ ಕೊರೊನಾ ಬರೋದು ಅಂತ ನಂಜೇರಾಜ್ ಅರಸ್ ಕಿಡಿಕಾರಿದ್ದಾರೆ.
ಸರ್ಕಾರಕ್ಕೆ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇಲ್ಲ. ಯಾರು ಏನೋ ಹೇಳ್ತಾರೆ, ಹಾಗೆ ನಿರ್ಧಾರವನ್ನು ತೆಗೆದುಕೊಳ್ತಾರೆ. ದಸರಾ ಆಚರಣೆ ಮಾಡೋವಾಗಿದ್ರೆ, ಬನ್ನಿ ಮಂಟಪದ ವರೆಗೆ ಮೆರವಣಿಗೆಯಲ್ಲಿ ಆನೆ ತೆಗೆದುಕೊಂಡು ಹೋಗಬೇಕಿತ್ತು. ಎಲ್ಲದಕ್ಕೂ ವ್ಯವಸ್ಥೆ ಮಾಡಿ, ಎಲ್ಲದಕ್ಕೂ ಅವಕಾಶ ಮಾಡಿ ಇದು ಮಾತ್ರ ಯಾಕೆ ಮಾಡ್ತಿಲ್ಲ, ಇಷ್ಟಕ್ಕೆ ಮಾತ್ರ ಯಾಕೆ ಸೀಮಿತ ಮಾಡುದ್ರಿ. ಸರ್ಕಾರದ ಈ ಧೋರಣೆಯನ್ನು ನಾನು ಒಪ್ಪುವುದಿಲ್ಲ ಎಂದು ಮೈಸೂರಿನ ಇತಿಹಾಸದ ಬಗ್ಗೆ ನಿರರ್ಗಳವಾಗಿ ಮಾತನಾಡುವ, ಅದರ ಬಗ್ಗೆ ಅಧ್ಯಯನ ಮಾಡಿ ಖ್ಯಾತಿ ಗಳಿಸಿರುವ ನಂಜೇರಾಜ ಅರಸ್ ಸರಕಾರ ನಿರ್ಧಾರವನ್ನು ಟೀಕಿಸಿದ್ದಾರೆ.
Dasara 2021 Prof P V Nanjaraj Urs slams BJP Govt says is there no Corona in Procession
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
15-05-25 01:34 pm
Udupi Correspondent
Manjunath Bhandary, Kukke Temple, Mangalore:...
14-05-25 08:05 pm
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm