ಬ್ರೇಕಿಂಗ್ ನ್ಯೂಸ್
24-10-21 03:11 pm Headline Karnataka News Network ಕರ್ನಾಟಕ
ಹಾವೇರಿ, ಅ.24 : ಹಾನಗಲ್ ಚುನಾವಣೆ ಪ್ರಚಾರಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಸಮಸ್ಯೆಗೀಡಾಗಿ ಶಿಗ್ಗಾವಿ ತಾಲೂಕಿನ ಹಳ್ಳಿಯೊಂದರಲ್ಲಿ ದಿಢೀರ್ ಲ್ಯಾಂಡ್ ಆಗಿದ್ದು ಅದರಲ್ಲಿ ಪ್ರಯಾಣಿಸುತ್ತಿದ್ದ ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಭಯಗೊಂಡು ತಬ್ಬಿಬ್ಬಾಗಿದ್ದಾರೆ.
ಸಿಗ್ನಲ್ ಹಾಗೂ ರೂಟ್ ಮ್ಯಾಪ್ ಸಮಸ್ಯೆಯಿಂದಾಗಿ ಪೈಲಟ್ ಎಡವಟ್ಟು ಮಾಡಿಕೊಂಡಿದ್ದು ಹುಬ್ಬಳ್ಳಿ ತಲುಪಲಾಗದೇ ಕಾಪ್ಟರನ್ನು ಅರ್ಧದಲ್ಲೇ ಇಳಿಸಿದ್ದಾರೆ. ಹುಬ್ಬಳ್ಳಿಗೆ ತೆರಳಬೇಕಿದ್ದ ಹೆಲಿಕಾಪ್ಟರ್ ದಾರಿ ಮದ್ಯೆಯೇ ಲ್ಯಾಂಡ್ ಆಗಿದ್ದು ಅದರಲ್ಲಿದ್ದವರನ್ನು ಭಯಕ್ಕೀಡು ಮಾಡಿತ್ತು.
ಶಿಗ್ಗಾವಿ ತಾಲೂಕು ಬಸವನಾಳ ಗ್ರಾಮದಲ್ಲಿ ಆಟದ ಮೈದಾನದಲ್ಲಿ ಹೆಲಿಕಾಪ್ಟರನ್ನು ಪೈಲಟ್ ಲ್ಯಾಂಡ್ ಮಾಡಿಸಿದ್ದಾರೆ. ಸಮಸ್ಯೆಯಿಂದ ಆಪತ್ತು ಎದುರಾಗುವ ಮೊದಲೇ ಕಾಪ್ಟರನ್ನು ಇಳಿಸಿದ್ದು ,ಶಾಸಕ ಭೈರತಿ ಸುರೇಶ್ ಅಪಾಯದಿಂದ ಪಾರಾಗಿದ್ದಾರೆ.
ಶಾಸಕ ಭೈರತಿ ಹಾನಗಲ್ ಚುನಾವಣೆ ಪ್ರಚಾರಕ್ಕೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ಆದರೆ, ಹಳ್ಳಿಯಲ್ಲಿ ದಿಢೀರ್ ಪ್ರತ್ಯಕ್ಷಗೊಂಡ ಹೆಲಿಕಾಪ್ಟರನ್ನು ನೋಡಿ ಜನ ಓಡೋಡಿ ಬಂದಿದ್ದಾರೆ. ಭಯದಿಂದ ಇದ್ದವರಿಗೆ ಧೈರ್ಯ ತುಂಬಿದ ಹಳ್ಳಿ ಜನರು ಅಲ್ಲಿಂದ ಟ್ಯಾಕ್ಸಿ ಮಾಡಿಕೊಂಡು ಶಾಸಕರು ಹಾನಗಲ್ ತೆರಳಲು ವ್ಯವಸ್ಥೆ ಮಾಡಿದ್ದಾರೆ. ಹಳ್ಳಿ ಜನರು ಶಾಸಕರನ್ನು ಶಾಲು ಹೊದಿಸಿ ಬರಮಾಡಿಕೊಂಡು ಜೊತೆಗೆ ನಿಂತು ಫೋಟೊ ತೆಗೆಸಿಕೊಂಡಿದ್ದಾರೆ.
The chopper of Bhyrathi Suresh that was heading for the Hangal election campaign made its landing in other village due to some technical issues
07-02-25 11:00 pm
Bangalore Correspondent
ಮುಡಾ ಹಗರಣ ; ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ ರಿಲೀಫ...
07-02-25 08:09 pm
Microfinance Karnataka, Governor, Siddaramai...
07-02-25 04:22 pm
National aerobic Championship Karnataka: ಜಮ್ಮ...
06-02-25 07:55 pm
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
08-02-25 02:23 pm
HK News Desk
BJP Delhi, AAP, Live result, Election: 27 ವರ್...
08-02-25 12:14 pm
Mahakumbh accident, Jaipur: ಜೈಪುರದಲ್ಲಿ ಭೀಕರ ರ...
07-02-25 05:27 pm
Zamfara school fire accident: SHOCKING; ತರಗತ...
07-02-25 05:23 pm
Telangana, student suicide: ಪ್ರಾಂಶುಪಾಲರು ಬೈದರ...
06-02-25 05:37 pm
08-02-25 10:46 pm
Mangalore Correspondent
Mines, Krishnaveni Mangalore, Dinesh gundrao;...
08-02-25 01:08 pm
Covid 19 death, Karnataka CM Siddaramaiah: ಕೋ...
07-02-25 10:13 pm
Brijesh Chowta, DK MP, Piyush Goyal: ದ.ಕ.ದಲ್ಲ...
07-02-25 08:24 pm
Belthangady, House, Evil spirit: ಬೆಳ್ತಂಗಡಿ ;...
07-02-25 03:12 pm
08-02-25 10:16 pm
Bangalore Correspondent
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm
Bidar murder crime: ಬೀದರ್ ; ಮನೆಮಂದಿ ನೋಡಿದ ಹುಡ...
08-02-25 01:00 pm
Mangalore court, Crime: ಕುಡಿದ ಮತ್ತಿನಲ್ಲಿ ಪತ್ನ...
07-02-25 11:55 am