ಬ್ರೇಕಿಂಗ್ ನ್ಯೂಸ್
04-11-21 01:12 pm Headline Karnataka News Desk ಕರ್ನಾಟಕ
ಬೆಂಗಳೂರು, ನ.4: ರಾಜ್ಯ ಸರಕಾರವೂ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ತೆರಿಗೆಯನ್ನು ತಲಾ ಏಳು ರೂ. ಇಳಿಕೆ ಮಾಡಿದೆ. ನಿನ್ನೆ ರಾತ್ರಿ ಕೇಂದ್ರ ಸರಕಾರ ಪೆಟ್ರೋಲಿಗೆ ಐದು ರೂ. ಮತ್ತು ಡೀಸೆಲ್ ಗೆ ಹತ್ತು ರೂ. ತೆರಿಗೆ ಇಳಿಸಿತ್ತು.
ಇದರೊಂದಿಗೆ ರಾಜ್ಯದಲ್ಲಿ ಪೆಟ್ರೋಲ್ ಲೀಟರಿಗೆ 12 ರೂ. ಮತ್ತು ಡೀಸೆಲಿಗೆ 17 ರೂ. ಇಳಿಕೆಯಾಗಿದೆ. ಇದರಂತೆ, ರಾಜ್ಯದಲ್ಲಿ ಪೆಟ್ರೋಲ್ ದರ 98 ರೂ. ಮತ್ತು ಡೀಸೆಲ್ ದರ 85 ರೂ. ಆಸುಪಾಸು ಆಗಲಿದೆ.
ಇಳಿಕೆ ಆಗಿದ್ದು ಹೇಗೆ ?
ಕಳೆದ ಬಾರಿ, 2020ರ ಮೇ ತಿಂಗಳ ಲಾಕ್ಡೌನ್ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ವಿಪರೀತ ಇಳಿಕೆಯಾಗಿದ್ದ (ಬ್ಯಾರಲ್ ತೈಲಕ್ಕೆ 20 ಡಾಲರ್) ಕಾರಣ ಕೇಂದ್ರ ಸರಕಾರ ಅಬಕಾರಿ ಸುಂಕವನ್ನು ಪೆಟ್ರೋಲ್, ಡೀಸೆಲ್ ಮೇಲೆ ಕ್ರಮವಾಗಿ 12 ರೂ. ಮತ್ತು 17 ರೂ. ಹೆಚ್ಚಿಸಿತ್ತು. ಅದರ ಅನುಸಾರ ಅಂತಾರಾಷ್ಟ್ರೀಯ ಬೆಲೆಯೇರಿಕೆ ಅನುಸಾರ ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ನಿರ್ಧರಿಸುವ ತೈಲ ಕಂಪನಿಗಳ ನೀತಿಯಂತೆ ದರ ಇಳಿಸುವುದಕ್ಕೆ ಸರಕಾರ ಅಡ್ಡಗಾಲು ಹಾಕಿತ್ತು.
ಆಗ ಏರಿಸಿದ ವಿಪರೀತ ತೆರಿಗೆಯನ್ನು ಆನಂತರ ಇಳಿಸದೇ ಇದ್ದುದರಿಂದ ಆನಂತರದ ದಿನಗಳಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಿದಾಗ ಸಹಜವಾಗಿಯೇ ಬೆಲೆ ಏರಿಕೆಯಾಗಿತ್ತು. ಆಗ ಹೆಚ್ಚಿಸಿದ ತೆರಿಗೆಯನ್ನು ಸರಕಾರ ಈಗ ಇಳಿಕೆ ಮಾಡಿದೆ. ಅದರ ಜೊತೆಗೆ, ಆಯಾ ರಾಜ್ಯ ಸರಕಾರಗಳು ವ್ಯಾಟ್ ತೆರಿಗೆ ಇಳಿಸುವಂತೆ ಸಲಹೆ ಮಾಡಿತ್ತು. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯ ಸರಕಾರಗಳು ತಮ್ಮಲ್ಲಿ ತೆರಿಗೆ ಇಳಿಸಿದ್ದು ಜನರ ಮೇಲಿನ ಹೊರೆಯನ್ನು ತಗ್ಗಿಸಿದೆ.
After the Centre cut excise duty on petrol and diesel on Wednesday, the Karnataka government announced slashing their prices by an additional Rs 7 per litre.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm