ಬ್ರೇಕಿಂಗ್ ನ್ಯೂಸ್
25-11-21 05:04 pm HK news Desk ಕರ್ನಾಟಕ
ಕಲಬುರ್ಗಿ, ನ.25: ಆದಾಯಕ್ಕಿಂತ ಹೆಚ್ಚು ಆಸ್ತಿ ಕೂಡಿಟ್ಟು ಎಸಿಬಿ ದಾಳಿಗೆ ಒಳಗಾದ ಲೋಕೋಪಯೋಗಿ ಇಲಾಖೆ ಜೂನಿಯರ್ ಇಂಜಿನಿಯರ್ ಶಾಂತಗೌಡ ಬಿರಾದಾರ ಜೈಲು ಸೇರಿದ್ದಾನೆ.
ಎಸಿಬಿ ದಾಳಿ ವೇಳೆ ನಕರಾ ಮಾಡಿ, ತನಿಖೆಗೆ ಸಹಕರಿಸದೇ ಹಣದ ಕಂತೆಗಳನ್ನು ಪೈಪ್ ಒಳಗೆ ತೂರಿದ್ದ ಶಾಂತಗೌಡನನ್ನು ಎಸಿಬಿ ಅಧಿಕಾರಿಗಳು ಬುಧವಾರ ರಾತ್ರಿಯೇ ಕೋರ್ಟಿಗೆ ಹಾಜರುಪಡಿಸಿದ್ದು ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಅದರಂತೆ, ಕಲಬುರಗಿ ಸೆಂಟ್ರಲ್ ಜೈಲಿಗೆ ಹಾಕಲಾಗಿದೆ.
ಎಸಿಬಿ ದಾಳಿ ವೇಳೆ ಶಾಂತಗೌಡ ಅಧಿಕಾರಿಗಳನ್ನೇ ಯಾಮಾರಿಸಿ ಹಣ ಬಚ್ಚಿಡುವ ತಂತ್ರ ಮಾಡಿದ್ದೇ ಬಂಧನಕ್ಕೆ ಕಾರಣವಾಗಿತ್ತು. ದಾಳಿ ಸಂದರ್ಭದಲ್ಲಿ ಹಣವನ್ನು ಬಚ್ಚಿಡಲು ತಂತ್ರ ಹೂಡಿದ್ದ ಕಾರಣಕ್ಕಾಗಿಯೇ ಎಸಿಬಿಯವರು ಬಂಧಿಸಿದ್ದಾರೆ ಎನ್ನಲಾಗುತ್ತಿದೆ.


ಇನ್ನು ಶಾಂತಗೌಡನ ಮನೆಯೊಳಗೆ ಪೈಪ್ ನಲ್ಲಿ ಹಣ ಬಚ್ಚಿಟ್ಟಿದ್ದು ಅಧಿಕಾರಿಗಳಿಗೆ ತಿಳಿದುಬಂದಿದ್ದೇ ರೋಚಕ ವಿಚಾರ ಎನ್ನುವ ಸಂಗತಿ ಹೊರಬಿದ್ದಿದೆ. ವಾಷಿಂಗ್ ಮಷಿನ್ ಇಟ್ಟಿದ್ದ ಬಾತ್ ರೂಮಿನಿಂದ ಅದರ ನೀರು ಹೊರಹೋಗಲು ಜೋಡಿಸಿದ್ದ ಪೈಪ್ ನಲ್ಲಿ ಹಣ ಇಡಲಾಗಿತ್ತು. ಎರಡು ತಿಂಗಳಿಂದ ವಾಷಿಂಗ್ ಮಷಿನ್ ಬಳಸಿರಲಿಲ್ಲ ಎನ್ನಲಾಗುತ್ತಿದ್ದು ಇದರಿಂದಾಗಿ ಪೈಪ್ ಶುಷ್ಕವಾಗಿತ್ತು. ಎಸಿಬಿ ದಾಳಿ ಮಾಡಿದ್ದು ತಿಳಿಯುತ್ತಲೇ ಮಗ ಮತ್ತು ಶಾಂತಗೌಡ ಸೇರಿಕೊಂಡು ಪೈಪ್ ನಲ್ಲಿ ಹಣ ತುಂಬಿಸಿದ್ದಾರೆ. ಹಣ ತುಂಬಿದ ಬಳಿಕ ಪ್ಲೇಟ್ ಬದಲು ಅದರ ಮೇಲೆ ಕಲ್ಲನ್ನು ಇಟ್ಟಿದ್ದ.
ಅಧಿಕಾರಿಗಳ ತಪಾಸಣೆ ವೇಳೆ ಪದೇ ಪದೇ ಟಾಯ್ಲೆಟ್ ಬಳಿಗೆ ಹೋಗಿ ಬರುತ್ತಿದ್ದ ಶಾಂತಗೌಡನ ಬಗ್ಗೆ ಸಂಶಯ ಉಂಟಾಗಿತ್ತು. ಮನೆಯ ಟಾಯ್ಲೇಟ್ ಬಳಿಯೇ ವಾಷಿಂಗ್ ಮೆಷಿನ್ ಇಡಲಾಗಿತ್ತು. ತನಿಖಾ ತಂಡ ಅಲ್ಲಿಗೆ ತೆರಳಿ ತಪಾಸಣೆಯನ್ನೂ ನಡೆಸಿದ್ದರು. ಆದರೆ, ತಂದೆ- ಮಗ ಅದೇ ಜಾಗದಲ್ಲಿ ಹೆಚ್ಚು ಓಡಾಡುತ್ತಿದ್ದರು. ಮನೆ ಹೊರಗೆ ಹೋಗಿದ್ದ ಪೈಪನ್ನೂ ನೋಡಿ ಬರುತ್ತಿದ್ದರು. ಅಧಿಕಾರಿಗಳು ಸಂಶಯ ಬಂದು ಪೈಪ್ ಮೇಲಿಟ್ಟಿದ್ದ ಕಲ್ಲು ತೆಗೆದು ನೋಡಿದಾಗ ಒಳಗೆ ನೋಟಿನ ಕಂತೆ ಕಾಣಿಸಿತ್ತು. ಬಳಿಕ ಪೈಪ್ ಕಟ್ ಮಾಡಿಸಿ ನೋಡಿದಾಗ 500 ಬೆಲೆಯ ಕಂತೆ ಕಂತೆ ನೋಟುಗಳು ಹೊರಬಂದಿದ್ದವು. ಒಂದು ಪೈಪಿನಲ್ಲಿಯೇ 13 ಲಕ್ಷ ನೋಟಿನ ರಾಶಿ ಸಿಕ್ಕಿತ್ತು.
ಇಂದು ಕೂಡ ಎಸಿಬಿ ಅಧಿಕಾರಿಗಳು ಶಾಂತಗೌಡನ ಬ್ಯಾಂಕ್ ಖಾತೆಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಎಸ್.ಬಿ.ಐ ಮತ್ತು ಕೆನರಾ ಬ್ಯಾಂಕ್ ನಲ್ಲಿ ಹಣ ಕೂಡಿಟ್ಟಿರುವ ಶಂಕೆಯಿದ್ದು ಅಧಿಕಾರಿಗಳು ಕಚೇರಿಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
JE Shantagouda Biradar arrested after ACB raid after wads of cash and gold ornaments came out inside a PVC pipe. A video of a raid by Karnataka's Anti-Corruption Bureau (ACB) is going viral on social media. The raid in question was conducted at the home of a Junior Engineer in the Public Works Department (PWD). ACB officers can be seen pulling out wads of cash and gold ornaments from inside a PVC pipe.
17-10-26 07:30 pm
HK News Staffer
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 11:04 pm
Mangaluru Staffer
ಎಂಆರ್ ಪಿಎಲ್ ದುರಂತ ; ಮೃತ ರಾಜೇಶ್ ಡಿಸಿಲ್ವ ಕುಟುಂಬ...
17-10-26 07:34 pm
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
19-10-26 12:40 am
HK News Staffer
Mangalore Crime, Bantwal Stabbing: ಬಂಟ್ವಾಳ ;...
18-10-26 09:45 pm
Kokkada Fight, Mangalore: ಕೊಕ್ಕಡ ; ಹೂವಿನ ವ್ಯಾ...
18-10-26 09:32 pm
Fr Cyprian Pinto Arrest, POCSO: ಬಾಲಕರಿಗೆ ಲೈಂಗ...
18-10-26 10:36 am
ಎಂಆರ್ ಪಿಎಲ್ ಘಟಕದಲ್ಲಿ ಸ್ಫೋಟ ಘಟನೆ ; ತೀವ್ರ ಗಾಯಗೊ...
17-10-26 11:09 am