ಬ್ರೇಕಿಂಗ್ ನ್ಯೂಸ್
03-12-21 06:31 pm HK Desk news ಕರ್ನಾಟಕ
ಚಿಕ್ಕಬಳ್ಳಾಪುರ, ಡಿ.3: ಪ್ರಧಾನಿ ಮೋದಿಯನ್ನು ರಾಕ್ಷಸನಿಗೆ ಹೋಲಿಸಿ ಮಾಜಿ ಸ್ಪೀಕರ್, ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಚಿಂತಾಮಣಿಯಲ್ಲಿ ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ರಮೇಶ್ ಕುಮಾರ್ ಉದ್ರೇಕದ ಭಾಷಣ ಮಾಡಿದ್ದಾರೆ. ತೆಲುಗಿನಲ್ಲಿ ಭಾಷೆಯಲ್ಲಿ ಆವೇಶದಿಂದ ಮಾತನಾಡಿದ ರಮೇಶ್ ಕುಮಾರ್, ಈ ದೇಶವನ್ನು ಒಬ್ಬ ರಾಕ್ಷಸನ ಕೈಗೆ ಕೊಟ್ಟಿದ್ದೇವೆ. ಮೋದಿಯ ಕೈಗೆ ಸಿಕ್ಕಿ ಭಾರತ ದೇಶ ನಲುಗಿ ಹೋಗಿದೆ ಎಂದು ಆರೋಪಿಸಿದ್ದಾರೆ.
ನೋಟ್ ಬ್ಯಾನ್ ಮಾಡಿ ಕೂಲಿ ಕಾರ್ಮಿಕರು, ಫುಟ್ ಪಾತ್ ಮೇಲೆ ಇರುವರು ಚಿಲ್ಲರೆ ಹಣ ಸಿಗದೆ ಸತ್ತುಹೋದರು. ಹಲವಾರು ಜನ ಬೀದಿಗೆ ಬಂದರು. ಜನರು ಹಸಿವಿನಿಂದ ಸಾಯುವ ಸ್ಥಿತಿಗೆ ಬಂದಿತ್ತು.
ಈ ಬಗ್ಗೆ ನಾವು ಪ್ರಶ್ನೆ ಮಾಡಿದರೆ ಟಿವಿಗಳ ಮುಂದೆ ಮೇಕಪ್ ಹಾಕಿಕೊಂಡು ಬಂದುಬಿಡ್ತಾರೆ. ಭಾರತ್ ಮಾತಾಕೀ ಅಂತ ಘೋಷಣೆ ಕೂಗಿ ಮರುಳು ಮಾಡ್ತಾರೆ. ಭಾರತವನ್ನು ಏನು ಇವರಿಗೆ ಗುತ್ತಿಗೆ ಕೊಟ್ಟಿದ್ದೇವಾ ಎಂದು ರಮೇಶ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.
ದೇಶದ ಎಲೆಕ್ಷನ್ ನಲ್ಲಿ ಗೆದ್ದು ಪ್ರಧಾನಿಯಾಗುವುದಕ್ಕೆ ಆಸ್ಪದ ಮಾಡಿಕೊಟ್ಟಿದ್ದು ಕಾಂಗ್ರೆಸ್. ಈ ದೇಶದಲ್ಲಿ ಇಷ್ಟೆಲ್ಲಾ ಅಭಿವೃದ್ಧಿ ಕಾರ್ಯ, ಜನರಿಗೆ ನೆಮ್ಮದಿಯ ಬದುಕು ಕೊಟ್ಟಿದ್ದು ಕಾಂಗ್ರೆಸ್. ಆದರೆ ಇವರು ಕಾಂಗ್ರೆಸ್ ಏನೂ ಮಾಡೇ ಇಲ್ಲ ಎನ್ನುತ್ತಿದ್ದಾರೆ. ನನಗೆ ಎಷ್ಟು ಆಯಸ್ಸು ಇದೆಯೋ ಗೊತ್ತಿಲ್ಲ. ಆದರೆ ಇಲ್ಲಿಂದ ಕಣ್ಣು ಮುಚ್ಚುವ ಒಳಗೆ ಬಿಜೆಪಿ ಪೂರ್ತಿ ಸರ್ವನಾಶ ಆಗಬೇಕು ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ ಕುಮಾರ್ ಶಾಪ ಹಾಕಿದ್ದಾರೆ.
ಚಿಂತಾಮಣಿ ತಾಲೂಕಿನಲ್ಲಿ ತೆಲುಗು ಭಾಷಿಗರು ಹೆಚ್ಚಿರುವ ಕಾರಣ ಸ್ಥಳೀಯರಿಗೆ ಅರ್ಥ ಆಗುವಂತೆ ರಮೇಶ್ ಕುಮಾರ್ ಕನ್ನಡ ಬಿಟ್ಟು ತೆಲುಗಿನಲ್ಲಿಯೇ ಭಾಷಣ ಮಾಡಿದ್ದಾರೆ.
We have given our nation to India to Demon Modi slams Congress leader Ramesh Kumar. He spoke during a election campaign at Chintamani.
07-02-25 11:00 pm
Bangalore Correspondent
ಮುಡಾ ಹಗರಣ ; ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ ರಿಲೀಫ...
07-02-25 08:09 pm
Microfinance Karnataka, Governor, Siddaramai...
07-02-25 04:22 pm
National aerobic Championship Karnataka: ಜಮ್ಮ...
06-02-25 07:55 pm
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
08-02-25 02:23 pm
HK News Desk
BJP Delhi, AAP, Live result, Election: 27 ವರ್...
08-02-25 12:14 pm
Mahakumbh accident, Jaipur: ಜೈಪುರದಲ್ಲಿ ಭೀಕರ ರ...
07-02-25 05:27 pm
Zamfara school fire accident: SHOCKING; ತರಗತ...
07-02-25 05:23 pm
Telangana, student suicide: ಪ್ರಾಂಶುಪಾಲರು ಬೈದರ...
06-02-25 05:37 pm
08-02-25 01:08 pm
Mangalore Correspondent
Covid 19 death, Karnataka CM Siddaramaiah: ಕೋ...
07-02-25 10:13 pm
Brijesh Chowta, DK MP, Piyush Goyal: ದ.ಕ.ದಲ್ಲ...
07-02-25 08:24 pm
Belthangady, House, Evil spirit: ಬೆಳ್ತಂಗಡಿ ;...
07-02-25 03:12 pm
Mangalore airport: ಮಂಗಳೂರು ಏರ್ಪೋರ್ಟ್ ರನ್ ವೇ ವ...
06-02-25 10:16 pm
08-02-25 06:21 pm
HK News Desk
Mangalore Mayor raid, slaughterhouse Kudroli:...
08-02-25 04:36 pm
Bidar murder crime: ಬೀದರ್ ; ಮನೆಮಂದಿ ನೋಡಿದ ಹುಡ...
08-02-25 01:00 pm
Mangalore court, Crime: ಕುಡಿದ ಮತ್ತಿನಲ್ಲಿ ಪತ್ನ...
07-02-25 11:55 am
Mangalore crime, blackmail Temple priest: ಅರ್...
06-02-25 09:32 pm