ಬ್ರೇಕಿಂಗ್ ನ್ಯೂಸ್
22-12-21 05:56 pm Giridhar Shetty, HK ಕರ್ನಾಟಕ
ಬೆಂಗಳೂರು, ಡಿ.22 : ಲವ್ ಜಿಹಾದ್ ಮತ್ತಿತರ ಪ್ರಕ್ರಿಯೆಗಳ ಮೂಲಕ ಬಲವಂತ, ಸುಳ್ಳು ನೆಪ ಅಥವಾ ಆಮಿಷವೊಡ್ಡಿ ಮತಾಂತರ ಮಾಡುವುದನ್ನು ತಪ್ಪಿಸಲು ಕರ್ನಾಟಕ ಸರಕಾರ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ವಿಧೇಯಕ-2021 ಕಾಯ್ದೆಯನ್ನು ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಿದೆ. ಕಾಯ್ದೆ ಜಾರಿಯಾಗಿ ಅನುಷ್ಠಾನಕ್ಕೆ ಬರುವುದಕ್ಕೂ ಮುನ್ನ ಅಧಿವೇಶನದಲ್ಲಿ ಚರ್ಚೆಯಾಗಿ, ರಾಜ್ಯಪಾಲರ ಅಂಕಿತ ಸಿಗಬೇಕಿದೆ. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಈಗಾಗ್ಲೇ ಮತಾಂತರ ನಿಷೇಧ ಕಾಯ್ದೆ ಬಗ್ಗೆ ತೀವ್ರ ಅಪಸ್ವರ ಎತ್ತಿದ್ದಾರೆ.
ಬಿಜೆಪಿ ಆಡಳಿತ ಇರುವ ಉತ್ತರ ಪ್ರದೇಶ, ಗುಜರಾತ್ ಮತ್ತು ಮಧ್ಯಪ್ರದೇಶ ಸರಕಾರಗಳು ಇದೇ ಮಾದರಿಯಲ್ಲಿ ಲವ್ ಜಿಹಾದ್, ಬಲವಂತದ ಮತಾಂತರ ಪ್ರಕ್ರಿಯೆ ಹತ್ತಿಕ್ಕುವ ಸಲುವಾಗಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದೆ. ಅಲ್ಲಿನ ಸರಕಾರಗಳ ಕಾಯ್ದೆ ರೂಪುರೇಷೆ ಅನುಸರಿಸಿ, ಕರ್ನಾಟಕದ ಬಿಜೆಪಿ ಸರಕಾರವೂ ಕಾಯ್ದೆ ಕರಡು ಪ್ರತಿ ತಯಾರಿಸಿದ್ದು ಬೆಳಗಾವಿ ಅಧಿವೇಶನದಲ್ಲಿ ಮಂಡನೆ ಮಾಡಿದೆ. ಕಾಯ್ದೆಯಲ್ಲಿ ಏನಿದೆ, ಮತಾಂತರ ಆಗಬೇಕಿದ್ದಲ್ಲಿ ಏನೆಲ್ಲ ಕಸರತ್ತು ಮಾಡಬೇಕಾಗುತ್ತದೆ, ಲವ್ ಜಿಹಾದ್ ತಡೆಯಲು ಹೇಗೆ ಸಾಧ್ಯ ಅನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲವಾದರೂ, ಗುಜರಾತ್, ಉತ್ತರ ಪ್ರದೇಶದಲ್ಲಿ ವಿವಾದಕ್ಕೆ ಒಳಗಾಗಿರುವ ಕಾಯ್ದೆಯ ಒಂದಷ್ಟು ಕುತೂಹಲಕಾರಿ ಅಂಶಗಳು ಹೊರಬಂದಿದ್ದು, ಚರ್ಚೆಗೀಡು ಮಾಡಿದೆ. ನೂತನ ಕಾಯ್ದೆಯ ಹತ್ತು ಅಂಶಗಳನ್ನು ಇಲ್ಲಿ ಕೊಡಲಾಗಿದೆ.
ಕಾಯ್ದೆ ಏನು ಹೇಳುತ್ತದೆ ?
1. ಕರ್ನಾಟಕ ಧಾರ್ಮಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 3ರ ಪ್ರಕಾರ, ಮತಾಂತರ ಮಾಡುವುದು ಅಥವಾ ಮತಾಂತರಕ್ಕೆ ಪ್ರಯತ್ನ ಪಡುವುದು, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃತ್ಯದಲ್ಲಿ ತೊಡಗಿಸುವುದು ಅಪರಾಧ. ಯಾವುದೇ ವ್ಯಕ್ತಿಯನ್ನು ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಬಲವಂತದಿಂದ, ಆಮಿಷವೊಡ್ಡಿ, ಸುಳ್ಳು ನೆವ ಹೇಳಿ, ತಪ್ಪಾಗಿ ಬಿಂಬಿಸಿ ಮತಾಂತರಿಸುವುದು, ಮದುವೆ ಆಮಿಷ ಒಡ್ಡುವುದು, ಮದುವೆಯಾಗಿ ಮತಾಂತರ ಮಾಡುವುದು ಅಪರಾಧವಾಗುತ್ತದೆ. ಮತಾಂತರಕ್ಕೆ ಪ್ರಚೋದನೆ ನೀಡುವುದು ಅಥವಾ ಸಂಚು ರೂಪಿಸುವುದು ಕೂಡ ವಿಧೇಯಕದ ಪ್ರಕಾರ ಅಪರಾಧವಾಗಲಿದ್ದು, ಜೈಲು ಶಿಕ್ಷೆ, ದಂಡ ವಿಧಿಸಲು ಅವಕಾಶ ಇರುತ್ತದೆ.
ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಜಾರಿಗೆ ತಂದಿರುವ ಕಾಯ್ದೆಗಳಲ್ಲಿಯೂ ಇದೇ ರೀತಿಯ ಅಂಶಗಳಿವೆ. ಆದರೆ, ಗುಜರಾತ್ ಕಾಯ್ದೆಯ ಕೆಲವು ಅಂಶಗಳನ್ನು ಅಲ್ಲಿನ ಹೈಕೋರ್ಟಿನಲ್ಲಿ ಪ್ರಶ್ನಿಸಲಾಗಿದೆ. ಕಾಯ್ದೆಯ ಕೆಲವು ಅಂಶಗಳಿಗೆ ಗುಜರಾತ್ ಹೈಕೋರ್ಟ್ ಕಳೆದ 2021ರ ಆಗಸ್ಟ್ ನಲ್ಲಿ ತಡೆ ಹೇರಿದೆ. ಇದರಿಂದ ಅಂತರ್ ಧರ್ಮೀಯ ಮದುವೆಗಳಿಗೆ ಅಡ್ಡಿಯಾಗುತ್ತದೆ. ಯುವತಿ ಬೇರೆ ಧರ್ಮದ ಯುವಕನನ್ನು ಪ್ರೀತಿಸಿ, ಸ್ವಇಚ್ಛೆಯಿಂದ ಮದುವೆಯಾಗುವುದಾದಲ್ಲಿ ಅದಕ್ಕೆ ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಮಾನ್ಯತೆ ಇದೆ. ಆದರೆ, ಆ ಹಕ್ಕನ್ನು ಈ ಕಾಯ್ದೆ ಉಲ್ಲಂಘಿಸುತ್ತದೆ ಎಂದು ಹೈಕೋರ್ಟಿನಲ್ಲಿ ವಾದಿಸಲಾಗಿತ್ತು. ಮತಾಂತರ ನಿಷೇಧ ಹೊಸ ಕಾಯ್ದೆಯಡಿ ಮದುವೆಯಾಗುವುದಾಗಿ ಭರವಸೆ ನೀಡುವುದು ಕೂಡ ಅಪರಾಧ ಆಗುವುದರಿಂದ ಧಾರ್ಮಿಕ ಹಕ್ಕಿನ ಉಲ್ಲಂಘನೆ ಎನ್ನಲಾಗಿತ್ತು. ಅಂತರ್ ಧರ್ಮೀಯ ಯುವಕ- ಯುವತಿ ಮದುವೆಯಾದಲ್ಲಿ ಅದನ್ನು ಮತಾಂತರ ಉದ್ದೇಶಕ್ಕೆ ಮದುವೆ ಅನ್ನುವ ನೆಲೆಯಲ್ಲಿ ಪೊಲೀಸ್ ದೂರು ನೀಡಿದಲ್ಲಿ ಈ ಕಾನೂನಿನಡಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸಬೇಕಾಗುತ್ತದೆ.
2. ಯಾವುದೇ ವ್ಯಕ್ತಿ ಮತಾಂತರ ಆದಲ್ಲಿ ಅಥವಾ ಯಾವುದೇ ವ್ಯಕ್ತಿ ಮತಾಂತರ ಆಗಿರುವುದನ್ನು ತಿಳಿದುಕೊಂಡಲ್ಲಿ ಆ ಬಗ್ಗೆ ಪೊಲೀಸ್ ದೂರು ನೀಡಬಹುದು. ಆದರೆ ಈ ಬಗ್ಗೆ ಮತಾಂತರ ಆಗಿರುವ ವ್ಯಕ್ತಿಯ ಕುಟುಂಬ ಸದಸ್ಯರು, ರಕ್ತ ಸಂಬಂಧಿಗಳು ಅಥವಾ ವ್ಯಕ್ತಿಯ ಹತ್ತಿರದ ಗೆಳೆಯ, ಜೊತೆಗೆ ಉದ್ಯೋಗ ಮಾಡುವ ಸದಸ್ಯನಿಗೂ ದೂರು ನೀಡುವ ಅವಕಾಶ ಇರುತ್ತದೆ. ಆದರೆ ಗುಜರಾತ್ ಮತ್ತು ಉತ್ತರ ಪ್ರದೇಶದ ಕಾಯ್ದೆಗಳ ಪ್ರಕಾರ ಕೇವಲ ರಕ್ತ ಸಂಬಂಧವುಳ್ಳ ಕುಟುಂಬ ಸದಸ್ಯರಿಗೆ ಮಾತ್ರ ಅವಕಾಶ ನೀಡಲಾಗಿದೆ. ಸೋದರ, ಸೋದರಿ, ಹೆತ್ತವರು ಹೀಗೆ ಹತ್ತಿರದ ಸಂಬಂಧಿಕರು ಮಾತ್ರ ಮತಾಂತರದ ಬಗ್ಗೆ ಪೊಲೀಸ್ ದೂರು ನೀಡಬಹುದು.
3. ಕರ್ನಾಟಕದ ನೂತನ ಕಾಯ್ದೆ ಪ್ರಕಾರ, ಅಂತರ್ ಧರ್ಮೀಯ ಮದುವೆಗಳಲ್ಲಿ ಮತಾಂತರದ ಆರೋಪ ಬಂದಲ್ಲಿ ತಮ್ಮದು ಬಲವಂತದ ಅಥವಾ ಆಮಿಷಕ್ಕೊಳಗಾದ ಮದುವೆ ಅಲ್ಲ. ಮತಾಂತರದ ಉದ್ದೇಶದಿಂದ ಮದುವೆ ಮಾಡಿಕೊಳ್ಳುತ್ತಿಲ್ಲ ಎಂಬ ಬಗ್ಗೆ ದಾಖಲೆ ಒದಗಿಸ ಬೇಕಾಗುತ್ತದೆ. ಮತಾಂತರದ ಆರೋಪ ಸಂದರ್ಭದಲ್ಲಿ ಅದನ್ನು ನಿರಾಕರಿಸಲು ದಾಖಲೆ ನೀಡಬೇಕಾಗಿ ಬರುವುದು ಅಂತರ್ ಧರ್ಮೀಯ ಮದುವೆಗಳ ಸಂದರ್ಭ ಪೀಕಲಾಟಕ್ಕೆ ಸಿಲುಕಿಸುತ್ತದೆ. ಈ ರೀತಿಯ ಕಾನೂನಿನ ಅಂಶ ಉತ್ತರ ಪ್ರದೇಶದ ಕಾಯ್ದೆಯಲ್ಲೂ ಇದೆ. ಆದರೆ, ಇದನ್ನು ಗುಜರಾತ್ ಸರಕಾರದ ಕಾಯ್ದೆಯ ಸಂದರ್ಭದಲ್ಲಿ ಅಲ್ಲಿನ ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಲಾಗಿದೆ.
4. ಕರ್ನಾಟಕದ ಪ್ರಸ್ತಾವಿತ ಕಾಯ್ದೆಯಲ್ಲಿ ಯಾವುದೇ ವ್ಯಕ್ತಿ ಮತಾಂತರ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಘೋಷಿತನಾದಲ್ಲಿ ಕನಿಷ್ಠ 3ರಿಂದ 5 ವರ್ಷ ಜೈಲು ಶಿಕ್ಷೆ ಅನುಭವಿಸಬೇಕು. ಅಲ್ಲದೆ, 25 ಸಾವಿರ ರೂ. ದಂಡ ತೆರಬೇಕಾಗುತ್ತದೆ. ಒಂದ್ವೇಳೆ ಅಪ್ರಾಪ್ತರು, ಒಬ್ಬಳು ಮಹಿಳೆ ಅಥವಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ಮತಾಂತರಕ್ಕೆ ಒಳಪಡಿಸಿದಲ್ಲಿ ತಪ್ಪಿತಸ್ಥ ವ್ಯಕ್ತಿಗೆ 10 ವರ್ಷ ಶಿಕ್ಷೆಯ ಜೊತೆಗೆ 50 ಸಾವಿರ ರೂ. ದಂಡ ವಿಧಿಸಲು ಅವಕಾಶ ಇರುತ್ತದೆ. ಉತ್ತರ ಪ್ರದೇಶದಲ್ಲಿ ಶಿಕ್ಷೆಯ ಪ್ರಮಾಣಕ್ಕೆ ಹೋಲಿಸಿದರೆ ಅಲ್ಲಿ ಕಡಿಮೆ ಇದೆ. ಅಲ್ಲಿ ಕನಿಷ್ಠ ಶಿಕ್ಷೆ ಒಂದು ವರ್ಷ ಆಗಿದ್ದರೆ, ಇಲ್ಲಿ ಕನಿಷ್ಠ ಮೂರು ವರ್ಷ ಶಿಕ್ಷೆ ವಿಧಿಸಲಾಗಿದೆ. ಕನಿಷ್ಠ ದಂಡದ ಮೊತ್ತವೂ ಉತ್ತರ ಪ್ರದೇಶದಲ್ಲಿ 15 ಸಾವಿರ ಆಗಿದ್ದರೆ, ಕರ್ನಾಟಕದ ಕಾಯ್ದೆಯಲ್ಲಿ 25 ಸಾವಿರ ವಿಧಿಸಲಾಗಿದೆ.
5. ಎರಡು ಅಥವಾ ಅದಕ್ಕಿಂತ ಹೆಚ್ಚಿನ ವ್ಯಕ್ತಿಗಳನ್ನು ಮತಾಂತರ ಮಾಡಿದಲ್ಲಿ ಅದನ್ನು ಸಮೂಹ ಮತಾಂತರ ಎಂದು ಪರಿಗಣಿಸಿದ್ದು, ಅದಕ್ಕೆ ಮೂರರಿಂದ ಹತ್ತು ವರ್ಷ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂ. ದಂಡ ವಿಧಿಸಲು ಅವಕಾಶ ಇದೆ. ಅಪರಾಧ ಪರಿಗಣಿಸಿ ನ್ಯಾಯಾಲಯ ದಂಡದ ಮೊತ್ತವನ್ನು 5 ಲಕ್ಷದ ವರೆಗೂ ವಿಧಿಸಬಹುದು. ಈ ಮೊತ್ತವನ್ನು ಮತಾಂತರ ಆಗಿರುವ ಸಂತ್ರಸ್ತರಿಗೆ ನೀಡಬೇಕಾಗುತ್ತದೆ.
6. ಪದೇ ಪದೇ ಮತಾಂತರ ಮಾಡುತ್ತಿರುವ ಕೃತ್ಯ ಎಸಗಿದ್ದು ಸಾಬೀತಾದಲ್ಲಿ ಆತನಿಗೆ 5 ವರ್ಷಕ್ಕೆ ಕಡಿಮೆಯಲ್ಲದ ಶಿಕ್ಷೆಯನ್ನು ವಿಧಿಸಲಾಗಿದೆ. ಜೊತೆಗೆ ಎರಡು ಲಕ್ಷ ರೂ. ದಂಡ ವಿಧಿಸಲಾಗಿದೆ.
7. ಹೊಸ ಮಸೂದೆ ಪ್ರಕಾರ, ಯಾವುದೇ ಮದುವೆಯು ಕೇವಲ ಮತಾಂತರದ ಉದ್ದೇಶ ಹೊಂದಿದ್ದಲ್ಲಿ ಅದನ್ನು ಅಕ್ರಮ ಮತ್ತು ನಿಷಿದ್ಧ ಎಂದು ಪರಿಗಣಿಸಲಾಗಿದೆ.
ಧರ್ಮಾಂತರ ಮಾಡುವುದಕ್ಕೆ ಕಠಿಣ ನಿಯಮ
8. ಯಾವುದೇ ವ್ಯಕ್ತಿ ಅಥವಾ ಕುಟುಂಬ ಧರ್ಮಾಂತರ ಆಗಬೇಕೆಂದು ಬಯಸಿದಲ್ಲಿ ಅದರ ಬಗ್ಗೆ ಒಂದು ತಿಂಗಳ ಮುಂಚಿತವಾಗಿ ಆಯಾ ಪ್ರದೇಶದ ಜಿಲ್ಲಾಧಿಕಾರಿಗೆ ಅಫಿಡವಿಟ್ ಸಲ್ಲಿಸಬೇಕು. ಜಿಲ್ಲಾಧಿಕಾರಿಗಳ ಕಚೇರಿಯ ನೋಟೀಸ್ ಬೋರ್ಡಿನಲ್ಲಿ ಈ ಬಗ್ಗೆ ಸಾರ್ವಜನಿಕರ ಗಮನಕ್ಕೆ ಎಂದು ನೋಟೀಸ್ ಅಂಟಿಸಬೇಕಿದ್ದು ಅದಕ್ಕೆ ಆಕ್ಷೇಪ ಇದ್ದಲ್ಲಿ ಸ್ವೀಕರಿಸಲು ಅವಕಾಶ ಇರುತ್ತದೆ. ಯಾವುದೇ ಆಕ್ಷೇಪ ಕೇಳಿಬಂದಲ್ಲಿ ಜಿಲ್ಲಾಧಿಕಾರಿ ಅದರ ಬಗ್ಗೆ ತನಿಖೆ ನಡೆಸಲು ಆದೇಶ ನೀಡಬೇಕು. ತನಿಖೆ ನಡೆದು ಕಂದಾಯ ಇಲಾಖೆ ಅಥವಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತಾಂತರಕ್ಕೆ ಬಯಸಿರುವ ಕಾರಣ ಮತ್ತು ಉದ್ದೇಶದ ಬಗ್ಗೆ ಪರಿಶೀಲನೆ ಮಾಡಬೇಕಾಗುತ್ತದೆ.
9. ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಮತಾಂತರ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸದ್ರಿ ವ್ಯಕ್ತಿಯು ಅದೇ ಕಚೇರಿಗೆ ಮತ್ತೊಮ್ಮೆ ಅಫಿಡವಿಟ್ ಸಲ್ಲಿಸಬೇಕು. ಅದರ ಜೊತೆಗೆ ಆಧಾರ್ ಕಾರ್ಡ್ ಅಥವಾ ಇನ್ನಿತರ ಐಡಿ ಪ್ರೂಫ್ ದಾಖಲೆಗಳ ಪ್ರತಿಯನ್ನು ಮತಾಂತರ ಆದ 30 ದಿನಗಳ ಒಳಗೆ ಹೊಸತಾಗಿ ಸಲ್ಲಿಸಬೇಕಾಗುತ್ತದೆ. ಈ ಅಫಿಡವಿಟ್ ನಲ್ಲಿ ವ್ಯಕ್ತಿಯ ಖಾಸಗಿ ವಿವರಗಳು ಒಳಗೊಂಡಿರಬೇಕು. ಮತಾಂತರ ಆಗಿರುವ ವ್ಯಕ್ತಿಯ ಈಗಿನ ವಿಳಾಸ, ಜನನ ದಿನಾಂಕ, ತಂದೆಯ ಅಥವಾ ತಾಯಿಯ ಹೆಸರು, ಅವರ ಹಿಂದಿನ ಧರ್ಮ, ಮತಾಂತರ ಆಗಿರುವ ದಿನಾಂಕ, ಮತಾಂತರ ನಡೆದಿರುವ ಸ್ಥಳ, ಈಗಿನ ಧರ್ಮ ಮತ್ತು ಮತಾಂತರ ಪ್ರಕ್ರಿಯೆಯ ಇನ್ನಿತರ ವಿವರಗಳು ಇರಬೇಕಾಗುತ್ತದೆ.
10. ಮತಾಂತರ ಆಗಿರುವ ವ್ಯಕ್ತಿಯ ಅಫಿಡವಿಟನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತ್ತೆ ಸಾರ್ವಜನಿಕರ ಗಮನಕ್ಕೆ ಇರುವ ನೋಟೀಸ್ ಬೋರ್ಡಿನಲ್ಲಿ ಅಂಟಿಸಬೇಕಾಗುತ್ತದೆ. ಅದಕ್ಕೆ ಸಾರ್ವಜನಿಕರು ಆಕ್ಷೇಪವನ್ನು ಸಲ್ಲಿಸಲು ಅವಕಾಶ ಇರುತ್ತದೆ. ಈ ರೀತಿ ಕೊನೆಯ ಬಾರಿ ಅಫಿಡವಿಟ್ ಸಲ್ಲಿಸಿದ ಬಳಿಕ ಸದ್ರಿ ವ್ಯಕ್ತಿಯು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಧಿಕಾರಿಯ ಮುಂದೆ ಹಾಜರಾಗಿ ಕೊಟ್ಟಿರುವ ದಾಖಲೆಗಳು ಸತ್ಯವೆಂದು ರುಜು ಮಾಡಬೇಕಾಗುತ್ತದೆ.
Karnataka’s controversial anti-conversion Bill was tabled in the Assembly on Tuesday, December 21, amid opposition from the Congress party. The Karnataka Protection of Right to Freedom of Religion Bill, 2021 was cleared by the Karnataka Cabinet on Monday, December 20, and is expected to be taken up for discussion on Wednesday, December 21. The opposition, activists, citizens and legal experts have voiced concerns over the Bill, that aims to prohibit “unlawful conversion” from one religion to another by misrepresentation, force, undue influence, coercion, allurement or by any fraudulent means. A primary look at the new Karnataka Bill shows that the law is even more stringent than those introduced in Uttar Pradesh, Madhya Pradesh and Gujarat, with the minimum punishment in Karnataka being three to five years and a minimum fine of Rs 25,000 — compared to a minimum of one-year jail term and Rs 15,000 fine in Uttar Pradesh.
07-02-25 11:00 pm
Bangalore Correspondent
ಮುಡಾ ಹಗರಣ ; ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ ರಿಲೀಫ...
07-02-25 08:09 pm
Microfinance Karnataka, Governor, Siddaramai...
07-02-25 04:22 pm
National aerobic Championship Karnataka: ಜಮ್ಮ...
06-02-25 07:55 pm
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
08-02-25 02:23 pm
HK News Desk
BJP Delhi, AAP, Live result, Election: 27 ವರ್...
08-02-25 12:14 pm
Mahakumbh accident, Jaipur: ಜೈಪುರದಲ್ಲಿ ಭೀಕರ ರ...
07-02-25 05:27 pm
Zamfara school fire accident: SHOCKING; ತರಗತ...
07-02-25 05:23 pm
Telangana, student suicide: ಪ್ರಾಂಶುಪಾಲರು ಬೈದರ...
06-02-25 05:37 pm
08-02-25 01:08 pm
Mangalore Correspondent
Covid 19 death, Karnataka CM Siddaramaiah: ಕೋ...
07-02-25 10:13 pm
Brijesh Chowta, DK MP, Piyush Goyal: ದ.ಕ.ದಲ್ಲ...
07-02-25 08:24 pm
Belthangady, House, Evil spirit: ಬೆಳ್ತಂಗಡಿ ;...
07-02-25 03:12 pm
Mangalore airport: ಮಂಗಳೂರು ಏರ್ಪೋರ್ಟ್ ರನ್ ವೇ ವ...
06-02-25 10:16 pm
08-02-25 01:00 pm
HK News Desk
Mangalore court, Crime: ಕುಡಿದ ಮತ್ತಿನಲ್ಲಿ ಪತ್ನ...
07-02-25 11:55 am
Mangalore crime, blackmail Temple priest: ಅರ್...
06-02-25 09:32 pm
Kalaburagi, Reels,weapons, Crime: ಕಲಬುರಗಿ ; ಶ...
06-02-25 04:35 pm
Raichur Rape, Crime: ರಾಯಚೂರಿನಲ್ಲಿ ಎರಡನೇ ಕ್ಲಾಸ...
06-02-25 12:00 pm