ಬ್ರೇಕಿಂಗ್ ನ್ಯೂಸ್
28-12-21 10:12 pm HK Desk news ಕರ್ನಾಟಕ
ಮಂಡ್ಯ, ಡಿ.28 : ಮತಾಂತರ ನಿಷೇಧ ಕಾಯ್ದೆ ಆರೆಸ್ಸೆಸ್ ಅಜೆಂಡಾ. ಕಾಯ್ದೆಯ ಕರಡನ್ನು ಹಿಂದೆ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಸಿದ್ಧಪಡಿಸಲಾಗಿತ್ತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈಗ ಆರೆಸ್ಸೆಸ್ ಹೇಳಿದಂತೆ ಮತಾಂತರ ನಿಷೇಧ ಕಾಯ್ದೆಯನ್ನು ಬಿಜೆಪಿ ಸರಕಾರ ಜಾರಲು ಹೊರಟಿದೆ. ಇದೇ ಕರಡನ್ನು ನಾನು ಅಧಿಕಾರದಲ್ಲಿದ್ದಾಗ ರೆಡಿ ಮಾಡಿದ್ದು ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಹೌದು.. ಆ ಮಸೂದೆಯ ಕರಡನ್ನು ನನ್ನ ಮುಂದೆ ಇಟ್ಟಿದ್ದರು. ಅದನ್ನು ಬರೆದಿದ್ದ ಎಲ್ಲರೂ ಆರೆಸ್ಸೆಸ್ ನವರಾಗಿದ್ದರು. ನಾನು ಆಗ ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯ ಸಚಿವರಾಗಿದ್ದ ಆಂಜನೇಯರಿಗೆ ಅದನ್ನ ಮುಗಿಸಿಬಿಡು ಅಂತಾ ಹೇಳಿದ್ದೆ. ಅದರಂತೆ ಆಂಜನೇಯ ಅದನ್ನ ತಿರಸ್ಕರಿಸುವಂತೆ ಸೂಚಿಸಿ ಬರೆದಿದ್ದರು.

ಮತಾಂತರ ನಿಷೇಧ ಮಸೂದೆಯ ಕರಡು ತಂದಿದ್ದು 2011ರಲ್ಲಿ ಯಡಿಯೂರಪ್ಪ ಸರ್ಕಾರ ಇದ್ದಾಗ. ಅದನ್ನ ಸದನದಲ್ಲಿ ನಾನು ಯಡಿಯೂರಪ್ಪಗೆ ಹೇಳಿದ್ದೆ. ಯಡಿಯೂರಪ್ಪ ಕೂಡ ಅದನ್ನ ಒಪ್ಪಿಕೊಂಡಿದ್ದರು ಎಂದು ಹೇಳಿದರು ಸಿದ್ದರಾಮಯ್ಯ.
ಈಶ್ವರಪ್ಪ ಒಬ್ಬ ಪೆದ್ದ...!
ಈ ಮಸೂದೆಯನ್ನು ಆರೆಸ್ಸೆಸ್ ನವರು ಮಾಡಿರೋದು ಅಂತ ಸದನದಲ್ಲಿ ಹೇಳಿದ್ದೆ. ಹೌದು ಅಂತಾ ಈಶ್ವರಪ್ಪ ಸದನದಲ್ಲಿ ಒಪ್ಪಿಕೊಂಡ. ಆದರೆ ಈಶ್ವರಪ್ಪ ಒಬ್ಬ ಪೆದ್ದ. ನನ್ನ ಮೇಲೆ ಗೂಬೆ ಕೂರಿಸುತ್ತಿದ್ದಾನೆ ಎಂದು ಸಿದ್ದು ಟೀಕಿಸಿದರು.

ಸಂವಿಧಾನದಲ್ಲೇ ಯಾವುದೇ ಮತ, ಧರ್ಮ ಸ್ವೀಕಾರಕ್ಕೆ ಮುಕ್ತ ಅವಕಾಶ ಇದೆ. ಪ್ರೀತಿಸಿ ಮದುವೆ ಆಗೋದನ್ನ ಪ್ರಶ್ನೆ ಮಾಡೋಕೆ ಇವನ್ಯಾರು? ಯಾರು ಯಾರನ್ನೇ ಮದುವೆ ಆದ್ರೂ ಪ್ರಶ್ನೆ ಮಾಡುವಂತೆ ಇಲ್ಲ. ಆದರೆ ಈ ಕಾನೂನು ಮೂಲಕ ಪ್ರೀತಿಸಿ ಮದುವೆಯಾಗೋದಕ್ಕೂ ಅವಕಾಶ ಇಲ್ಲದಾಗಿದೆ. ಇವರು ಜನವಿರೋಧಿ ಕಾನೂನು ತಂದಿದ್ದಾರೆ. ಬಿಜೆಪಿಯವರದ್ದು ಜನ ವಿರೋಧಿ ಆರೆಸ್ಸೆಸ್ ಸಿದ್ಧಾಂತ. ಕಾಂಗ್ರೆಸ್ ಪಕ್ಷದ್ದು ಜನಪರ ಸಿದ್ಧಾಂತ. ನಾವು ಜನಪರ ಇರುವವರು. ಬಿಜೆಪಿಯವರು ಜನರನ್ನ ಬೇರ್ಪಡಿಸುವವರು ಎಂದು ಸಿದ್ದರಾಮಯ್ಯ ಟೀಕಿಸಿದರು.
The Congress will repeal the proposed contentious anti-conversion legislations immediately after coming to power following the 2023 Assembly polls in Karnataka, Leader of Opposition Siddaramaiah said on Monday.
17-10-26 07:30 pm
HK News Staffer
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 11:04 pm
Mangaluru Staffer
ಎಂಆರ್ ಪಿಎಲ್ ದುರಂತ ; ಮೃತ ರಾಜೇಶ್ ಡಿಸಿಲ್ವ ಕುಟುಂಬ...
17-10-26 07:34 pm
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
19-10-26 12:40 am
HK News Staffer
Mangalore Crime, Bantwal Stabbing: ಬಂಟ್ವಾಳ ;...
18-10-26 09:45 pm
Kokkada Fight, Mangalore: ಕೊಕ್ಕಡ ; ಹೂವಿನ ವ್ಯಾ...
18-10-26 09:32 pm
Fr Cyprian Pinto Arrest, POCSO: ಬಾಲಕರಿಗೆ ಲೈಂಗ...
18-10-26 10:36 am
ಎಂಆರ್ ಪಿಎಲ್ ಘಟಕದಲ್ಲಿ ಸ್ಫೋಟ ಘಟನೆ ; ತೀವ್ರ ಗಾಯಗೊ...
17-10-26 11:09 am