ಬ್ರೇಕಿಂಗ್ ನ್ಯೂಸ್
30-12-21 10:52 pm HK Desk news ಕರ್ನಾಟಕ
ವಿಜಯಪುರ, ಡಿ.30 : ಇದೇ ಸಂಕ್ರಾಂತಿಗೆ ಸರಕಾರ ಮತ್ತು ಪಕ್ಷದಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಸಚಿವ ಸಂಪುಟದಲ್ಲೂ ಬದಲಾವಣೆಯಾಗಲಿದೆ, ಪಕ್ಷದ ಸಂಘಟನೆಯಲ್ಲೂ ಬದಲಾವಣೆಯಾಗಲಿದೆ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಬಾಂಬ್ ಸಿಡಿಸಿದ್ದಾರೆ.
ವಿಧಾನಸಭೆ ಚುನಾವಣೆಗೆ ಪಕ್ಷವನ್ನ ಬಲ ಪಡಿಸಲು ವರಿಷ್ಠರು ತಯಾರಿ ನಡೆಸಿದ್ದಾರೆ. ಪ್ರಧಾನಿಗಳ ಗುಪ್ತಚರ ಇಲಾಖೆ ಎಲ್ಲವನ್ನೂ ನೋಡುತ್ತಿದೆ. ಕಚೇರಿಗೆ ಹೋಗದ ಸಚಿವರು ಯಾರು ಎಂಬ ಬಗ್ಗೆ ಎಲ್ಲ ಬೆಳವಣಿಗೆಯನ್ನ ಪ್ರಧಾನಿ ಗಮನಿಸುತ್ತಿದ್ದಾರೆ. ಸಂಕ್ರಾಂತಿ ಬಳಿಕ ಮೋದಿ ದೊಡ್ಡ ನಿರ್ಧಾರ ತೆಗೆದುಕೊಳ್ತಾರೆ. ಪಕ್ಷದಲ್ಲಿ, ಸರ್ಕಾರದಲ್ಲಿ ಮೋದಿ ಬದಲಾವಣೆ ಮಾಡಲಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ. ಕಳೆದ ಸಂಕ್ರಾಂತಿಗೆ ಹೇಳಿದ್ದೆ, ಒಂದು ವಿಕೆಟ್ ಹಾರಿತ್ತು. ಈ ಬಾರಿಯು ಬದಲಾವಣೆ ಹೇಳ್ತಿದೀನಿ, ಸಂಕ್ರಾಂತಿಯ ವರೆಗೆ ಕಾಯಿರಿ ಎಂದರು ಯತ್ನಾಳ್.
ಸಿಎಂ ಫಾರಿನ್ ಟೂರ್ ವದಂತಿ ಬಗ್ಗೆ ಹೇಳಿದ ಅವರು, ಸಿಎಂ ಅವರ ವೀಸಾ ಬಂದಿದ್ದರೇ ನನಗೆ ತೋರಿಸಿ. ಸಿಎಂ ಫಾರಿನ್ ಟೂರ್ ಇಲ್ಲ, ಇದ್ದರೆ ಗೊತ್ತಾಗುತ್ತಿತ್ತು. ಸಿಎಂ ಪ್ರವಾಸ ಚಲನವಲನ ಏನಿದ್ದರೂ ಸಾರ್ವಜನಿಕವಾಗಿರುತ್ತೆ. ನಾನು ಸಿಎಂ ಬದಲಾವಣೆ ಬೇಡ ಅನ್ನೋದು ಇಲ್ಲ, ಬೇಕು ಅನ್ನೋದೂ ಇಲ್ಲ, ಎಲ್ಲವೂ ಹೈಕಮಾಂಡ್ ಗೆ ಬಿಟ್ಟಿದ್ದು ಎಂದ ಯತ್ನಾಳ್, ಮತ್ತೆ ಸಚಿವ ಸ್ಥಾನದ ಆಸೆ ಹೊರಹಾಕಿದ್ದಾರೆ.
ಗಟ್ಸ್ ಇರೋರು ಗೃಹ ಸಚಿವರಾಗಬೇಕು. ನಮ್ಮಂತವರ ಕೈಯ್ಯಲ್ಲಿ ಕೊಟ್ರೆ ಬರೋಬ್ಬರಿ ಮಾಡ್ತೀವಿ. ದೇಶ ವಿರೋಧಿ ಚಟುವಟಿಕೆ ಮಾಡೋರನ್ನ, ಉಪಾದ್ಯಾಪಿಗಳಿಗೆ ಸರಿಯಾಗಿ ಮಾಡ್ತೀವಿ. ಈಗಿನ ಗೃಹ ಮಂತ್ರಿ ಒಳ್ಳೆಯರು, ಪ್ರಾಮಾಣಿಕರಿದ್ದಾರೆ. ಆದರೆ ಆರಗ ಜ್ಞಾನೇಂದ್ರ ಅರಣ್ಯ, ಕಂದಾಯ, ಗ್ರಾಮೀಣಾಭಿವೃದ್ಧಿಗೆ ಸೂಕ್ತರಿದ್ದಾರೆ ಎಂದು ಪರೋಕ್ಷವಾಗಿ ಕುಟುಕುವ ಕೆಲಸ ಮಾಡಿದ್ದಾರೆ.
Amid talks that the Karnataka cabinet expansion or reshuffle is likely next month, senior BJP MLA Basanagouda Patil Yatnal, who had earlier claimed that BS Yediyurappa will not remain Chief Minister for long, on Friday hinted at 'historical changes' in the state after Sankranti.
16-09-26 01:51 pm
HK News Staffer
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 06:28 pm
HK News Desk
Ramanath Rai, Mangalore, Tulu, Cabinet Meetin...
16-09-26 04:32 pm
U T Khader, Mangalore : ಅಂಗನವಾಡಿ ಮಕ್ಕಳ ಆಹಾರದ...
16-09-26 11:28 am
ಮಂಗಳೂರು ವಿವಿಯಲ್ಲೊಂದು ಅನಧಿಕೃತ ಸಂಘ ; ವಿದ್ಯಾರ್ಥಿ...
15-09-26 09:18 pm
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm