ಬ್ರೇಕಿಂಗ್ ನ್ಯೂಸ್
27-01-22 11:10 pm HK Desk news ಕರ್ನಾಟಕ
ಬೆಳಗಾವಿ, ಜ.27 : ಬಿಜೆಪಿಯಲ್ಲಿ ಸೋತವರಿಗೆ ಮಣೆ ಹಾಕಲಾಗುತ್ತಿದೆ. ಕಳೆದ ಬಾರಿ ಸೋತಿದ್ದ ವ್ಯಕ್ತಿಯೇ ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ಡಿಕೆಶಿ ಜೊತೆಗೆ ಸಂಪರ್ಕ ಮಾಡಿದ್ದಾರೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಬಾಂಬ್ ಸಿಡಿಸಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ, ಬಿಜೆಪಿ ಶಾಸಕರು ಕಾಂಗ್ರೆಸಿಗೆ ಹೋಗಲಿದ್ದಾರೆ ಎಂಬ ವದಂತಿ, ಟಿಪ್ಪಣಿಗಳ ನಡುವೆ ಇತ್ತೀಚೆಗೆ ವಿಧಾನ ಪರಿಷತ್ ಚುನಾವಣೆಗೆ ಪಕ್ಷೇತರ ನಿಂತು ಬಿಜೆಪಿಯ ಅಧಿಕೃತ ಅಭ್ಯರ್ಥಿಯನ್ನು ಸೋಲಿಸಿದ್ದ ಜಾರಕಿಹೊಳಿ ಕುಟುಂಬದ ಕಿರಿಯ ಸೋದರ ಲಖನ್ ಜಾರಕಿಹೊಳಿ ಸವದಿ ಹೆಸರೆತ್ತದೆ ಟೀಕೆ ಮಾಡಿದ್ದಾರೆ.
ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿಗೆ ಶಕ್ತಿ ಇದೆ. ಚುನಾವಣೆ ಸಮಯದಲ್ಲಿ 16 ಅಲ್ಲ, 20 ಶಾಸಕರನ್ನು ಕರೆತರುವ ಶಕ್ತಿಯನ್ನು ಹೊಂದಿದ್ದಾರೆ. ರಮೇಶ ಜಾರಕಿಹೊಳಿ ಕಳೆದ ಬಾರಿ ಬೈಲಹೊಂಗಲ, ಖಾನಾಪುರ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದರು. ಅಂಥವರನ್ನು ಬಿಜೆಪಿ ಸರಿಯಾಗಿ ನಡೆಸಿಕೊಂಡಿಲ್ಲ. ಬಿಜೆಪಿ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಶಕ್ತಿಯನ್ನು ಬಳಸಿಕೊಳ್ಳಬೇಕು 2023ರ ಚುನಾವಣೆಗೆ ತಯಾರಿ ಮಾಡಬೇಕು. ಆದರೆ ಬೆಳಗಾವಿ ಜಿಲ್ಲೆಯಲ್ಲಿ ಸೋತ ನಾಯಕರು ಅಧಿಕಾರ ಅನುಭವಿಸಿದ್ರು. ಮತ್ತೆ ಉನ್ನತ ಹುದ್ದೆ ಪಡೆದು ಡಿಕೆಶಿ ಜತೆಗೆ ಸೇರಿ ಕುತಂತ್ರ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ನಾನು ಪಕ್ಷೇತರನಾಗಿಯೇ ಉಳಿಯಲು ತೀರ್ಮಾನಿಸಿದ್ದೇನೆ. ಸಿದ್ದರಾಮಯ್ಯ ನಮ್ಮ ಗುರುಗಳು, ಅವರ ಮೇಲೆ ಅಪಾರ ಗೌರವ ಇದೆ. ಸಿದ್ದರಾಮಯ್ಯ ಒಬ್ಬರೇ ಕಾಂಗ್ರೆಸ್ ಪಕ್ಷದಲ್ಲಿ ನಾಯಕರು. ಉಳಿದವರು ಸ್ವಯಂ ಘೋಷಿತ ನಾಯಕರು. ಸಿದ್ದರಾಮಯ್ಯ ಆಹ್ವಾನದ ಬಗ್ಗೆ ಯೋಚನೆ ಮಾಡುತ್ತೇನೆ ಎಂದು ಲಖನ್ ಹೇಳಿದರು.
ಪರಿಷತ್ ಸೋಲಿಗೆ ಅಥಣಿ ನಾಯಕರೇ ಕಾರಣ !
ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನ ಕೊಟ್ಟರೇ ಜಿಲ್ಲೆಯಲ್ಲಿ ಅನಕೂಲ ಆಗಲಿದೆ ಎಂದ ಲಖನ್ ಜಾರಕಿಹೊಳಿ, ಒಬ್ಬರು ಅಥಣಿಯಿಂದ ಸೋತು ಡಿಸಿಎಂ ಆದ್ರು. ಈಗ ಅವರೇ ಕುಳಿತು ಕುತಂತ್ರ ಮಾಡುತ್ತಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಸೇರಿಕೊಂಡು ಕವಟಗಿಮಠ ಅವರನ್ನು ಸೋಲಿಸಿದ್ರು. ಮತ್ತೆ ಅವರೇ ಪ್ರತ್ಯೇಕ ಸಭೆಯನ್ನು ಸಹ ಮಾಡಿದ್ದಾರೆ. ಸೋಲಲು ಕಾರಣರಾದವರಿಗೆ ಉನ್ನತ ಹುದ್ದೆ ನೀಡಲಾಗುತ್ತಿದೆ. ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ನನ್ನ ಪರವಾಗಿ ಮಾಡ್ತಿದ್ದರೆ ನಾನು ಮೊದಲ ಸುತ್ತಿನಲ್ಲಿ ಆಯ್ಕೆಯಾಗುತ್ತಿದ್ದೆ. ಬಿಜೆಪಿ ಸೋಲಿಗೆ ಅಥಣಿ ನಾಯಕರೇ ನೇರ ಕಾರಣ. ಡಿಕೆಶಿ ಜತೆಗೆ ಹಾಗೂ ಬಿಜೆಪಿ ಜತೆಗೂ ಸಂಪರ್ಕದಲ್ಲಿ ಇದ್ದಾರೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ಲಖನ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಚುನಾವಣೆಯಲ್ಲಿ ಸೋತಿದ್ದಾರೆ ಅಂದರೆ, ಜಿಲ್ಲೆಯಲ್ಲಿರುವ 11 ಜನ ಶಾಸಕರು, ಇಬ್ಬರು ಸಂಸದರ ಶಕ್ತಿ ಏನು ? ಈ ಬಗ್ಗೆ ಹೈಕಮಾಂಡ್ ಚಿಂತನೆ ಮಾಡಬೇಕು ಎಂದ ಲಖನ್, ಅಥಣಿಯವರು ಈಗಾಗಲೇ ಒಂದು ಕಾಲು ಕಾಂಗ್ರೆಸ್, ಮತ್ತೊಂದು ಕಾಲು ಬಿಜೆಪಿಯಲ್ಲಿ ಇಟ್ಟಿದ್ದಾರೆ. ಮುಂಜಾನೆ ಒಂದು ಪಾರ್ಟಿ, ಸಂಜೆ ಒಂದು ಪಾರ್ಟಿ. ಅವರ ಪಕ್ಷ ವಿರೋಧಿ ಚಟುವಟಿಕೆ ಮೇಲೆ ಕಣ್ಣು ಇಡಬೇಕು. ರಮೇಶ ಜಾರಕಿಹೊಳಿ ದೊಡ್ಡ ನಾಯಕ. ಅವರ ವಿರುದ್ಧ ಷಡ್ಯಂತ್ರ ಮಾಡಲು ಸಾಧ್ಯವಿಲ್ಲ ಎಂದರು.
Lakshman Savadi is in constant contact with dk shivakumar says Lakhan Jarkiholi in Belagavi.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm