ಬ್ರೇಕಿಂಗ್ ನ್ಯೂಸ್
28-01-22 01:48 pm HK Desk news ಕರ್ನಾಟಕ
ಬೆಂಗಳೂರು, ಜ.28 : ಗ್ರೀನ್ ಪೀಸ್ ಇಂಡಿಯಾ ಅಧ್ಯಯನದ ಪ್ರಕಾರ, ದೇಶದಲ್ಲಿ ಅತಿ ಹೆಚ್ಚು ಮಾಲಿನ್ಯ ಇರುವ ಹತ್ತು ನಗರಗಳ ಪೈಕಿ ಕರ್ನಾಟಕದ ಬೆಂಗಳೂರು, ಮಂಗಳೂರು ಮತ್ತು ಮೈಸೂರು ಕೂಡ ಸೇರಿಕೊಂಡಿದೆ. ಕೊರೊನಾದಿಂದಾಗಿ ಲಾಕ್ಡೌನ್, ವಾಹನ ಬಳಕೆ ಕಡಿಮೆ ಇದ್ದಾಗ್ಯೂ ನಗರಗಳಲ್ಲಿ ಮಾಲಿನ್ಯ ಹೆಚ್ಚಿರುವುದನ್ನು ಸಂಸ್ಥೆಯ ಅಧ್ಯಯನ ಪತ್ತೆ ಮಾಡಿದೆ.
ಕೇಂದ್ರ ಸರಕಾರದ ಮಾಲಿನ್ಯ ನಿಯಂತ್ರಣ ಮಂಡಳಿ 2020ರ ನವೆಂಬರ್ ನಿಂದ 2021ರ ನವೆಂಬರ್ ನಡುವಿನ ವಾಯು ಗುಣಮಟ್ಟದ ಬಗ್ಗೆ ನೀಡಿರುವ ಅಂಕಿ ಅಂಶಗಳ ಪ್ರಕಾರ ಗ್ರೀನ್ ಪೀಸ್ ಇಂಡಿಯಾ ಅಧ್ಯಯನ ವರದಿಯನ್ನು ಪ್ರಕಟಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಕ್ಕಿಂತ ಹೆಚ್ಚು ಮಾಲಿನ್ಯ ಈ ನಗರಗಳಲ್ಲಿ ಇರುವುದನ್ನು ಗ್ರೀನ್ ಪೀಸ್ ಇಂಡಿಯಾ ಪತ್ತೆ ಹಚ್ಚಿದೆ. ವಾಯು ಮಾಲಿನ್ಯ ಸೂಚ್ಯಂಕವು (ಸಾಮಾನ್ಯ ಗುಣಮಟ್ಟ 2.5 ಪಿಎಂ) ಬೆಂಗಳೂರು, ಕೊಯಂಬತ್ತೂರು, ಮಂಗಳೂರು, ಮೈಸೂರು, ಅಮರಾವತಿ ನಗರಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ್ದಕ್ಕಿಂತ ಆರರಿಂದ ಏಳು ಪಟ್ಟು ಹೆಚ್ಚು ಇರುವುದನ್ನು ಪತ್ತೆ ಮಾಡಲಾಗಿದೆ.
ಇದೇ ವೇಳೆ, ಮೈಸೂರು, ಚೆನ್ನೈ, ಪುದುಚೇರಿ, ಕೊಚ್ಚಿ ನಗರಗಳಲ್ಲಿ ಈ ಸೂಚ್ಯಂಕದಲ್ಲಿ ಮಾಲಿನ್ಯ ಮಟ್ಟ ನಾಲ್ಕರಿಂದ ಐದು ಪಟ್ಟು ಹೆಚ್ಚಿದೆ. ಇದಲ್ಲದೆ, ಉತ್ತರ ಭಾರತದ ನಗರಗಳ ರೀತಿಯಲ್ಲೇ ದಕ್ಷಿಣ ಭಾರತದ ನಗರಗಳು ಕೂಡ ತೀವ್ರ ವಾಯು ಮಾಲಿನ್ಯದ ಪರಿಣಾಮವನ್ನು ಎದುರಿಸುತ್ತಿದೆ ಎನ್ನುವ ಅಂಶವನ್ನು ಗ್ರೀನ್ ಪೀಸ್ ಇಂಡಿಯಾ ಹೇಳಿದೆ. ಸಾಮಾನ್ಯವಾಗಿ ಲಾಕ್ಡೌನ್ ಮಾದರಿಯ ನಿರ್ಬಂಧ ಇರುವಾಗ ನಗರಗಳಲ್ಲಿ ವಾಯು ಮಾಲಿನ್ಯವೂ ತಗ್ಗಬೇಕಿತ್ತು. ಆದರೆ ಹತ್ತು ನಗರಗಳ ವಾಯು ಮಾಲಿನ್ಯದ ಬಗ್ಗೆ ಅಧ್ಯಯನ ನಡೆಸಿದಾಗ, ಸಹಜ ಗುಣಮಟ್ಟ 2.5 ಇರಬೇಕಿರುವ ಬದಲು ಅದಕ್ಕಿಂತ ಹತ್ತು ಪಾಯಿಂಟ್ ಹೆಚ್ಚಿರುವುದು ಕಂಡುಬಂದಿದೆ. ಮಾಲಿನ್ಯ ಅಂಕಿ ಅಂಶ ಪ್ರಕಾರ, ಮಂಗಳೂರು, ಅಮರಾವತಿ, ಚೆನ್ನೈ, ಮೈಸೂರಿನಲ್ಲಿ ಮಾಲಿನ್ಯ ಮಟ್ಟ ನಾಲ್ಕು ಪಟ್ಟು ಹೆಚ್ಚಿದ್ದರೆ, ಮೈಸೂರು, ಪುದುಚೇರಿ, ಕೊಯಂಬತ್ತೂರಿನಲ್ಲಿ ಮೂರು ಪಟ್ಟು ಹೆಚ್ಚಿರುವುದು ಕಂಡುಬಂದಿದೆ.
As per a report brought out by Greenpeace India, ten cities including Bengaluru, Mangaluru and Mysuru have recorded high levels of pollution in spite of the fact that corona-related measures are in place.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm