ಬ್ರೇಕಿಂಗ್ ನ್ಯೂಸ್
05-02-22 09:49 pm HK Desk news ಕರ್ನಾಟಕ
ಬೆಂಗಳೂರು, ಫೆ.5 : ಭೇಟಿ ಪಡಾವೋ ಭೇಟಿ ಬಚಾವೋ ಅಂತಿದ್ರಲ್ಲ.. ಈಗ ಭೇಟಿ ಹಠಾವೋ ಅನ್ನೋ ತರಾ ಮಾಡ್ತಿದಾರೆ. ರಾಜ್ಯದಲ್ಲಿ ಸಾಮರಸ್ಯ ಕಾಣಬೇಕು ಅನ್ನೋದು ರಾಷ್ಟ್ರೀಯ ಪಕ್ಷಗಳ ನಾಯಕರಿಗೆ ಇದ್ರೆ ಈ ವಿಚಾರವನ್ನು ಹಿಜಾಬ್ ವಿಚಾರವನ್ನು ಇಲ್ಲಿಗೇ ಬಿಡಲಿ. ಸಿಎಂ ಆದವರು ಇಂಥ ವಿಚಾರಗಳನ್ನು ಸರಿಯಾಗಿ ನಿಭಾಯಿಸಬೇಕು. ಸಮಾಜದ ವಾತಾವರಣ ಕಲುಷಿತ ಆಗದ ರೀತಿ ನೋಡಿಕೊಳ್ಳಬೇಕು ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸಲಹೆ ಮಾಡಿದ್ದಾರೆ.
ಕರಾವಳಿ ಪ್ರದೇಶದಲ್ಲಿ ಕೆಲವು ಕಡೆ ಈ ರೀತಿಯ ಬುರ್ಖಾ ವ್ಯವಸ್ಥೆ ಇತ್ತು ಅನ್ನೋದು ಗಮನಕ್ಕೆ ಇದೆ. ಕೆಲವು ಮುಸ್ಲಿಂ ಸಮಾಜದಲ್ಲಿ ಇತ್ತೀಚೆಗೆ ಕೆಲವು ಸಂಘಟನೆಗಳು ಬೆಳೆಯುತ್ತಿವೆ. ಯಾವ ಶಾಲೆಯಲ್ಲಿ ಹಿಜಾಬ್ ಗೆ ಅನುಮತಿ ಕೊಟ್ಟಿದ್ದರೋ ಅವರು ಮುಂದುವರೆಸಿಕೊಂಡು ಹೋಗಲಿ. ಹೊಸದಾಗಿ ಈಗ ಕೆಲವರು ಇಂಥವಕ್ಕೆ ಯಾಕೆ ಅನುಮತಿ ಕೊಟ್ಟರು. ಹಿಂದು ಮುಸ್ಲಿಮ್ ಅನ್ನೋದಕ್ಕಿಂತ ಹೆಚ್ಚಾಗಿ ಮಕ್ಕಳಲ್ಲಿ ಇಂತ ಭಾವನೆ ಬೆಳೆಯಲು ಯಾಕೆ ಅವಕಾಶ ಕೊಡ್ತಾ ಇದೀರಿ. ನಾಡಿನಲ್ಲಿ ಜನ ಈಗಾಗಲೇ ಸಾಯ್ತಾ ಇದಾರೆ. ಇಂತದ್ದಕ್ಕೆಲ್ಲಾ ಯಾಕೆ ಈಗ ಭಯ ಭೀತಿ ವಾತಾವರಣ ಸೃಷ್ಟಿ ಮಾಡ್ತಾ ಇದೀರಿ. ಹಿಂದಿನಿಂದ ಯಾವ ವಾತಾವರಣದಲ್ಲಿ ಶಾಲೆಗಳು ನಡೆಯುತ್ತಿತ್ತೋ ಅದೇ ವಾತಾವರಣ ಮುಂದುವರೆಯಲಿ ಎಂದು ಎಚ್ಡಿಕೆ ಹೇಳಿದರು.
ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರಿಬ್ಬರಿಗೂ ಮುಖ್ಯಮಂತ್ರಿ ಆಗುವ ಹುಚ್ಚು ಹಿಡಿದಿದೆ. ಇಬ್ಬರಿಗೂ ಓಟು ಪಡೆಯುವ ಹುಚ್ಚು. ಸಮಾಜಕ್ಕೆ ಒಳ್ಳೆಯದಾಗಲಿ ಅನ್ನೋದು ಇವರಿಗೆ ಇಲ್ಲ. ಬಿಜೆಪಿಯವರಿಗೆ ಕೂಡಾ ಮತ ಪಡೆಯುವ ಹುಚ್ಚು. ಅದಕ್ಕಾಗಿ ಇಂಥ ಹುಚ್ಚಾಟ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಒಂದು ಮಾತು ಹೇಳ್ತಾರೆ. ಡಿಕೆಶಿ ಒಂದು ಮಾತು ಹೇಳ್ತಾರೆ. ಒಬ್ಬರಿಗೆ ಮುಸ್ಲಿಂ ಮತಗಳನ್ನು ಪಡೆಯುವ ಹುಚ್ಚು. ಮತ್ತೊಬ್ಬರಿಗೆ ಮುಸ್ಲಿಂ ಪರ ಮಾತಾಡಿದ್ರೆ ಏನು ಹೆಚ್ಚು ಕಡಿಮೆ ಆಗುತ್ತೋ ಎಂಭ ಭಯ. ಇದರಿಂದಾಗಿ ಅವರಲ್ಲೇ ಸ್ಪಷ್ಟತೆ ಇಲ್ಲದೆ ಏನೇನೋ ಮಾತನಾಡುತ್ತಿದ್ದಾರೆ.
ಮಹದಾಯಿ ಬಗ್ಗೆ ಸತೀಶ್ ಜಾರಕಿಹೊಳಿ ಪಾದಯಾತ್ರೆ ಮಾಡ್ತೀವಿ ಅಂತಾ ಹೇಳ್ತಾರೆ. ಆದರೆ ನಿನ್ನೆ ಬಿಡುಗಡೆ ಆದ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಏನಿದೆ. ಯಾವುದೇ ಕಾರಣಕ್ಕೂ ಮಹದಾಯಿಯನ್ನು ಗೋವಾದಿಂದ ಬಿಟ್ಟು ಕೊಡಲ್ಲ ಅಂತ ಹೇಳಿಕೊಂಡಿದಾರೆ. ಇದು ಅವರ ಡಬಲ್ ಸ್ಟಾಂಡರ್ಡ್ ತೋರುತ್ತದೆ ಎಂದು ಕಾಂಗ್ರೆಸ್ ನಾಯಕರ ಬಗ್ಗೆ ಕಿಡಿಕಾರಿದರು.
ಸಿಎಂ ಇಬ್ರಾಹಿಂ ಮೊದಲಿನಿಂದಲೂ ಜೆಡಿಎಸ್ ಜೊತೆ ಗುರ್ತಿಸಿಕೊಂಡವರು. ಮಧ್ಯದಲ್ಲಿ ಕೆಲವು ವ್ಯತ್ಯಾಸ ಗಳು ಆಗಿದ್ದವು. ಈಗ ಮತ್ತೆ ಜೆಡಿಎಸ್ ಜೊತೆ ಸೇರಿ ಮತ್ತೊಂದು ರಂಗ ರಚನೆ ಬಗ್ಗೆ ಮುಂದಾದರೆ ಸ್ವಾಗತ ಮಾಡುತ್ತೇನೆ ಎಂದರು ಎಚ್ಡಿಕೆ.
HD Kumaraswamy, If the leaders of the national parties have the view that there should be harmony in Karnataka, let the hijab be left here. HD Kumaraswamy expressed displeasure that the Chief Minister should deal with such issues properly.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm