ಬ್ರೇಕಿಂಗ್ ನ್ಯೂಸ್
05-02-22 10:44 pm HK Desk news ಕರ್ನಾಟಕ
ಬೆಂಗಳೂರು, ಫೆ.5 : ಕಾಂಗ್ರೆಸ್ ಬಿಟ್ಟು ಕುತೂಹಲ ಮೂಡಿಸಿದ್ದ ಹಿರಿಯ ನಾಯಕ ಸಿಎಂ ಇಬ್ರಾಹಿಂ ಜೆಡಿಎಸ್ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅಹಿಂದವನ್ನು ಅಲ್ಲಿಯೇ ಬಿಟ್ಟಿದ್ದಾರೆ. ನಾವು ಅಲಿಂಗ ಚಳುವಳಿ ಮಾಡ್ತಿದ್ದೇವೆ. ಯಡಿಯೂರಪ್ಪ ಜೊತೆಗೂ ಮಾತನಾಡಿದ್ದೇವೆ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಬಿಜೆಪಿ ಏಳು ವರ್ಷದಿಂದ ಏನು ಮಾಡಿದೆ ಎನ್ನೋದು ಗೊತ್ತಿದೆ. ಕಾಂಗ್ರೆಸ್ ಇಲ್ಲಿಯವರೆಗೆ ಏನು ಮಾಡಿದೆ ಅನ್ನೋದು ಜನ್ರಿಗೆ ಗೊತ್ತಿದೆ. ಇವೆರಡರಿಂದ ಹೊರತಾದ ಥರ್ಡ್ ಪೋರ್ಸ್ ಆಡಳಿತಕ್ಕೆ ಬರಬೇಕು. ಜೆಡಿಎಸ್ ಆ ಲೆವೆಲ್ ಗೆ ಬರುತ್ತೆ ಅಂತ ನಮ್ಮ ಅಭಿಮತ ಎಂದು ಹೇಳಿದ ಸಿಎಂ ಇಬ್ರಾಹಿಂ, ಟಿಎಂಸಿ, ಎಸ್ಪಿ, ಬಿಎಸ್ ಪಿಯಾದರೆ ಒಂದರಿಂದ ಎಣಿಕೆ ಮಾಡಬೇಕು. ಜೆಡಿಎಸ್ ಆದರೆ 31 ರಿಂದ ಎಣಿಕೆ ಮಾಡಬೇಕಿದೆ. ಹಾಗಾಗಿ ಜನತಾ ದಳಕ್ಕೆ ಉತ್ತೇಜನ ಕೊಡ್ತೇವೆ ಎಂದು ಹೇಳಿದರು.
೧೪ ರಂದು ಹುಬ್ಬಳ್ಳಿಯಲ್ಲಿ ಸಭೆ ಏರ್ಪಡಿಸಿದ್ದೇನೆ. ಅದರ ನಂತರ ನಾನು ಜೆಡಿಎಸ್ ಸೇರುವ ದಿನಾಂಕ ಹೇಳ್ತೇನೆ. ಇಂದು ಯಾರು ಕೂಡ ನನ್ನ ಪರವಾಗಿ ಮಾತನಾಡಲು ರೆಡಿ ಇಲ್ಲ. ನಮ್ಮದು ಸಣ್ಣ ಜಾತಿ ಅನ್ನೋ ಕಾರಣಕ್ಕೆ. ಆದರೆ ನಮ್ಮ ಸ್ಥಾನ ಏನೆಂದು ತೋರಿಸುತ್ತೇನೆ. ಕಾಂಗ್ರೆಸ್ ನಲ್ಲಿ ನಲಪಾಡ್, ಸಲೀಂಗೆ ಏನು ಮಾಡಿದ್ರಿ ಅಂತ ಗೊತ್ತು. ನನ್ನನ್ನು ಕೆಣಕ ಬೇಡಿ, ಕೆಣಕಿದರೆ ಸರಿ ಇರಲ್ಲ ಎಂದು ಪ್ರಶ್ನೆಯೊಂದಕ್ಕೆ ಗರಂ ಆದರು.
ಮಾರ್ಚ್ 10 ರ ನಂತರ ರಾಜ್ಯದಲ್ಲಿ ಏನಾಗುತ್ತೆ ಅಂತ ಗೊತ್ತಾಗುತ್ತದೆ. ಕಾಂಗ್ರೆಸ್, ಬಿಜೆಪಿಯಿಂದ ಬಹಳಷ್ಟು ಜನ ಬಿಡಲಿದ್ದಾರೆ ಎಂದು ಭವಿಷ್ಯ ನುಡಿದ ಇಬ್ರಾಹಿಂ, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಮೊದಲ ಸ್ಥಾನ ಬಂದರೆ, ಬಿಜೆಪಿ ಸೆಕೆಂಡ್ ಸ್ಥಾನದಲ್ಲಿ ಇರುತ್ತದೆ. ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಬರುತ್ತದೆ ನೋಡ್ತಾ ಇರಿ ಎಂದು ಮತ್ತೊಂದು ಭವಿಷ್ಯದ ನುಡಿಯಾಡಿದರು.
ವಿವಾದ ಎಬ್ಬಿಸೋದ್ರಲ್ಲಿ ಬಿಜೆಪಿ ಎತ್ತಿದ ಕೈ
ಕರ್ನಾಟಕ ಬಿಜೆಪಿ ಸರ್ಕಾರ ವಿವಾದಗಳನ್ನು ಸೃಷ್ಟಿ ಮಾಡೋದ್ರಲ್ಲಿ ಮುಂಚೂಣಿಯಲ್ಲಿ ಇದೆ. ಯಾವುದೇ ವಿವಾದ ಮಾಡಿದ್ರೂ ಸಕ್ಸಸ್ ಆಗ್ತಾ ಇಲ್ಲ. ಗೋ ಹತ್ಯೆ ಬಿಲ್, ಧರ್ಮ ಪರಿವರ್ತನಾ ಬಿಲ್ ಎಲ್ಲಾ ಅಲ್ಲೇ ನಿಲ್ತು. ಈಗ ಹಿಜಬ್ ವಿವಾದ ಇದ್ದಕ್ಕಿದ್ದಂತೆ ಬಂದಿದೆ. ಹಿಜಬ್ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಮೈಸೂರು ಮಹಾರಾಜರ ಕಾಲದಿಂದಲೂ ಇದೆ. ಅಲ್ಲಿ ಕಾಲೇಜು ಸ್ಕೂಲ್ ಹೋಗುವ ಮಕ್ಕಳಿಗೆ ಹಿಜಾಬ್ ಇತ್ತು. ಟಿಪ್ಪು ಸುಲ್ತಾನ್ ನಂತರ ಮಹರಾಜರು ಬಂದಾಗ ಇವೆಲ್ಲಾ ಇತ್ತು. ಇದು ನಾಡಿನ ಇತಿಹಾಸ. ಮಾರ್ವಾಡಿ ಸಮಾಜದಲ್ಲೂ ಕೂಡ ಇದೆ. ಆದರೆ ಉಡುಪಿ ಸರಕಾರಿ ಕಾಲೇಜಿನ ಪ್ರಿನ್ಸಿಪಲ್ ಮಕ್ಕಳಿಗೆ ಪಾಠ ಮಾಡೋದು ಬಿಟ್ಟು ಏನು ಮಾಡ್ತಾ ಇದ್ದಾರೆ ಅಂತ ಗೊತ್ತಾಗಲ್ಲ ಎಂದು ಕಟಕಿಯಾಡಿದರು ಇಬ್ರಾಹಿಂ.
ಆ ಮಕ್ಕಳನ್ನು ಗೇಟ್ ಬಳಿ ಕೂರಿಸೋದು ಎಷ್ಟು ಸರಿ. ಶಿಕ್ಷಣ ಸಚಿವ ನಾಗೇಶ್ ಒಳ್ಳೆ ಮನುಷ್ಯ. ಅವರಿಗೆ ಮನವಿ ಮಾಡ್ತೀನಿ. ಇದನ್ನು ವಿವಾದ ಆಗಲು ಬಿಡಬೇಡಿ. ಕೇಸರಿ ಶಾಲು ಹಾಕೋದು, ಏನಿದು ಕಥೆ. ಎಲ್ಲಿಗೆ ರಾಜ್ಯ ತೆಗೆದುಕೊಂಡು ಹೋಗ್ತಾ ಇದ್ದೀರಾ. ಇದು ಕೊನೆಯ ಅಧಿಕಾರ ಇವರದ್ದು. ರಾಜಕೀಯಕ್ಕೆ ಅನುಕೂಲ ಆಗಬೇಕು ಅಂತ ಸರ್ಕಾರಿ ಅಧಿಕಾರಿಗಳು ಫೇವರ್ ಮಾಡಬೇಡಿ. ಮುಂದೆ ಅಧಿಕಾರ ಬದಲಾಗಲಿದೆ, ಗಾಳಿ ಬೇರೆ ಬೀಸುತ್ತಿದೆ ಎಂದು ಹೇಳಿದರು.
Bangalore, former chief minister and party legislature leader h d kumaraswamy today held important talks with former union minister cm ibrahim, who has announced that he will resign from the congress party and join the jd(s).
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm