ಬ್ರೇಕಿಂಗ್ ನ್ಯೂಸ್
07-02-22 10:17 pm HK Desk news ಕರ್ನಾಟಕ
ರಾಮನಗರ, ಫೆ.7 : ಹಿಜಾಬ್ ಹಾಗೂ ಕೇಸರಿ ಶಾಲು ಹೆಸರಲ್ಲಿ ಶಾಲೆಗೆ ಹೋಗುವ ಸಣ್ಣ ಮಕ್ಕಳಲ್ಲಿ ಸಂಕುಚಿತ ಮನೋಭಾವ ತರಬೇಡಿ. ಅಲ್ಲಿಂದಲೇ ದ್ವೇಷದ ರಾಜಕಾರಣಕ್ಕೆ ಬೆಂಕಿ ಹಚ್ಚಬೇಡಿ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ, ಕಾಂಗ್ರೆಸ್, ಬಿಜೆಪಿ ರಾಷ್ಟ್ರೀಯ ಪಕ್ಷಗಳಿಗೆ ಸಲಹೆ ಮಾಡಿದ್ದಾರೆ.
ಚನ್ನಪಟ್ಟಣದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಕಾಂಗ್ರೆಸ್ ಸಮಾಜ ಒಡೆದು ಮತ ಪಡೆಯಲು ಹೊರಟಿದೆ. ಈ ವಿಷಯವಾಗಿ ಎರಡು ರಾಷ್ಟ್ರೀಯ ಪಕ್ಷಗಳು ಪ್ರಾಮುಖ್ಯತೆ ನೀಡುತ್ತಿವೆ. ಬಿಜೆಪಿ ಹಾಗೂ ಕಾಂಗ್ರೆಸ್ ಕರಾವಳಿಯಲ್ಲಿ ದ್ವೇಷದ ರಾಜಕಾರಣ ಬಿತ್ತುತ್ತಿದೆ ಎಂದು ಆರೋಪಿಸಿದರು.
ಶಾಲೆಗಳಲ್ಲಿ ದ್ವೇಷ, ಅಶಾಂತಿ ವಾತಾವರಣ ಮೂಡಿಸಬೇಡಿ. ಮಕ್ಕಳಲ್ಲಿ ಪರಿಶುದ್ಧ ಮನಸ್ಸು ಇರುತ್ತದೆ. ಮಕ್ಕಳನ್ನು ಇಂತಹ ಸ್ಥಿತಿಗೆ ತಂದರೆ ಸಮಾಜದ ಪರಿಸ್ಥಿತಿ ಏನು ? ಸಂಘಟನೆಗಳ ಚಿತಾವಣೆಗೆ ಮಕ್ಕಳು ಬಲಿಯಾಗುತ್ತಿದ್ದಾರೆ. ಮಕ್ಕಳು ಸಹ ಇಂತಹ ಚಿತಾವಣೆಗೆ ಬಲಿಯಾಗಬಾರದು. ಅವರಿಗೂ ನಾನು ತಿಳಿ ಹೇಳುತ್ತೇನೆ, ಇವರ ಚಿತಾವಣೆಗೆ ಬಲಿಯಾಗಬೇಡಿ ಎಂದು. ನಮ್ಮ ಧಾರ್ಮಿಕ ಸಂಸ್ಕೃತಿಯನ್ನ ಯಾರು ಅಲುಗಾಡಿಸಲು ಸಾಧ್ಯವಿಲ್ಲ. ಒಬ್ಬರು ಕೇಸರಿ ಮತ್ತೊಬ್ಬರು ಹಿಜಾಬ್ ಧರಿಸುತ್ತಿದ್ದು ರೈತರ ಮಕ್ಕಳು ಹಸಿರು ಶಾಲು ಹಾಕಿಕೊಂಡು ತೆರಳಬೇಕೆ ಎಂದು ಪ್ರಶ್ನೆ ಮಾಡಿದರು.
ನಾಡಿನಲ್ಲಿ ನೂರಾರು ಸಮಸ್ಯೆ ಇದೆ. ಹೀಗಾಗಿ ಈ ಸಮಸ್ಯೆಗಳ ಬಗ್ಗೆ ಗಮನ ಹರಿಸಿ. ಕೇಸರಿ ಅಥವಾ ಹಿಜಾಬ್ ಧರಿಸಿದ ಕೂಡಲೇ ಸಮಾಜ ಉದ್ಧಾರವಾಗುತ್ತದೋ ? ಇದರಿಂದ ಸಮಾಜದ ಉದ್ದಾರ ಸಾಧ್ಯವಿಲ್ಲ. ಇಂತಹ ಕ್ಷುಲ್ಲಕ ವಿಷಯ ಇಟ್ಟುಕೊಂಡು ಸಮಾಜದ ಉದ್ದಾರ ಸಾಧ್ಯವಿಲ್ಲ. ಬದುಕು ನಮಗೆ ಮುಖ್ಯ, ರಾಷ್ಟ್ರೀಯ ಪಕ್ಷಗಳು ತಮ್ಮ ಜವಾಬ್ದಾರಿ ನಿರ್ವಹಣೆ ಮಾಡಲಿ. ಈ ಬಗ್ಗೆ ನೋವಿನಿಂದಲೇ ಎರಡೂ ಪಕ್ಷಗಳಿಗೆ ಹೇಳುತ್ತೇನೆ, ಸಮಾಜ ಹಾಗೂ ಧಾರ್ಮಿಕ ಸಂಸ್ಕೃತಿಯನ್ನು ಜನ ಕಾಪಾಡಿಕೊಳ್ಳುತ್ತಾರೆ. ಇದನ್ನು ಈ ಪಕ್ಷಗಳು ಅಥವಾ ಸಂಘಟನೆಯಿಂದ ಕಲಿಯಬೇಕಿಲ್ಲ ಎಂದು ಕಿಡಿಕಾರಿದರು.
Bengaluru, As students across Karnataka were coming to colleges wearing hijabs and saffron shawls, Chief Minister Basavaraj Bommai and Education Minister B.C. Nagesh on Monday urged them not to get provoked and follow government orders regarding the ongoing row.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm