ಬ್ರೇಕಿಂಗ್ ನ್ಯೂಸ್
08-02-22 06:27 pm HK Desk news ಕರ್ನಾಟಕ
ಬೆಂಗಳೂರು, ಫೆ 08: ವೈದ್ಯ ದಂಪತಿಯ ಪುತ್ರನೊಬ್ಬ ಅಪಾರ್ಟ್ಮೆಂಟ್ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ಬಗೋಡಿ ಬಳಿಯ ಕಮ್ಮಸಂದ್ರದಲ್ಲಿ ಮಂಗಳವಾರ ಸಂಭವಿಸಿದೆ.
ಡಾ.ಶರಣು ಪಟೇಲ್ ಮತ್ತು ಡಾ.ಮಮತಾ ದಂಪತಿ ಪುತ್ರ ಆದಿತ್ಯ ಪಟೇಲ್(15) ಮೃತ ದುರ್ದೈವಿ. ಈತ ಬೊಮ್ಮನಹಳ್ಳಿ ಬೇಗೂರಿನ ಟ್ರಿಮೀಸ್ ಶಾಲೆಯಲ್ಲಿ ಎಸ್ಎಸ್ಎಲ್ಸಿ ಓದುತ್ತಿದ್ದ.
ಹೊಸೂರು ರಸ್ತೆಯ ಬೊಮ್ಮಸಂದ್ರದ ಹೆಲ್ತ್ ಸಿಟಿಯ ಸ್ಪರ್ಶ್ ಆಸ್ಪತ್ರೆಯಲ್ಲಿ ಡಾ.ಶರಣು ಪಟೇಲ್ ಮತ್ತು ಡಾ.ಮಮತಾ ಇಬ್ಬರೂ ಕೆಲಸ ಮಾಡುತ್ತಿದ್ದಾರೆ. ಕಮ್ಮಸಂದ್ರ ಬಳಿಯ 'ಡ್ಯಾಡಿ' ಅಪಾರ್ಟ್ಮೆಂಟ್ನಲ್ಲಿ ಮಗನ ಜತೆ ದಂಪತಿ ವಾಸವಿದ್ದರು.
ಮಂಗಳವಾರ ಮಧ್ಯಾಹ್ನ ಬಾಲಕ ಆದಿತ್ಯ, ಅಪಾರ್ಟ್ಮೆಂಟ್ನ ಐದು ಅಂತಸ್ತಿನ ಮೇಲಿಂದ ಕೆಳಗೆ ಹಾರಿದ್ದು, ತಲೆ ಛಿದ್ರಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಅಯ್ಯೋ ಕಂದ ಸಾಯುವಂತಹದ್ದು ಏನಾಯ್ತಪ್ಪಾ… ಎಂದು ಪಾಲಕರು ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಆದಿತ್ಯ ಮೊಬೈಲ್ ಅನ್ನು ಹೆಚ್ಚಾಗಿ ಬಳಲುತ್ತಿದ್ದನಂತೆ. ಇತ್ತೀಚೆಗೆ ಪಾಲಕರು ಮಗನಿಂದ ಮೊಬೈಲ್ ಅನ್ನು ವಾಪಸ್ ಪಡೆದಿದ್ದರಂತೆ. ಬಳಿಕ ಮಂಕಾಗಿದ್ದ ಆದಿತ್ಯ ಸಾವಿನ ಮನೆಯ ಕದ ತಟ್ಟಿದ್ದಾನೆ ಎನ್ನಲಾಗಿದೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.
A student was killed when he jumped down from the 5th building of garden apartment in dadis area of kammasandra near hebbegodi here.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
12-01-26 01:31 pm
Bengaluru Staffer
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm