ಬ್ರೇಕಿಂಗ್ ನ್ಯೂಸ್
14-02-22 04:06 pm HK Desk news ಕರ್ನಾಟಕ
ಬಾಗಲಕೋಟ, ಫೆ.14 : ಹಿಜಾಬ್ ಧರಿಸದೇ ಇರೋದ್ರಿಂದ ಮಹಿಳೆಯರ ಮೇಲೆ ರೇಪ್ ಆಗುತ್ತಿದೆ ಎಂಬ ಮಾಜಿ ಸಚಿವ ಜಮೀರ್ ಅಹಮ್ಮದ್ ಹೇಳಿಕೆಗೆ ಶ್ರೀರಾಮ ಸೇನೆ ಮುಖಂಡ ಪ್ರಮೋದ ಮುತಾಲಿಕ್ ಕಿಡಿಕಾರಿದ್ದಾರೆ. ಜಮೀರ ಅಹಮ್ಮದ್ ಅವರದ್ದು ಅತ್ಯಂತ ನಿರ್ಲಜ್ಜದ ಹೇಳಿಕೆ. ಇಡೀ ಮಹಿಳಾ ಸಮುದಾಯಕ್ಕೆ ಅವಮಾನ ಮಾಡುವ ಸಂಗತಿಯಾಗಿದೆ ಎಂದು ಹೇಳಿದ್ದಾರೆ.
ಈ ದೇಶದಲ್ಲಿ ಹಿಂದು ಮಹಿಳೆಯರು ಹಿಜಾಬ್ ಇಲ್ಲದೇ ಜೀವನ ಮಾಡ್ತಾ ಇದ್ದಾರೆ. ಇವರ ಹೇಳಿಕೆ ಪ್ರಕಾರ ಹಿಜಾಬ್ ಇಲ್ಲದ ಮುಸ್ಲಿಂ ಮಹಿಳೆಯರ ಮೇಲೆಲ್ಲಾ ಅತ್ಯಾಚಾರಗಳಾಗಿವೆಯಾ? ಮಾತನಾಡ ಬೇಕಾದ್ರೆ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಡಿ. ಅದು ಬಿಟ್ಟು ಹಿಜಾಬ್ ಸಮರ್ಥನೆ ಮಾಡಿಕೊಳ್ಳುವುದಕ್ಕೆ ಅದನ್ನ ಅತ್ಯಾಚಾರಕ್ಕೆ ಜೋಡಿಸುತ್ತೀರಿ ಎಂದ್ರೆ ನಾನು ಖಂಡಿಸುತ್ತೇನೆ ಎಂದು ಪ್ರಮೋದ್ ಮುತಾಲಿಕ್ ಜಮಖಂಡಿಯಲ್ಲಿ ಮುತಾಲಿಕ್ ಹೇಳಿಕೆ ನೀಡಿದ್ದಾರೆ.

ಹಿಜಾಬ್ ಕುರಿತ ಹಿಡನ್ ಅಜೆಂಡಾ ಹೊರಗಡೆ ಬಂದಿದೆ. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿರುವುದು ದುರದೃಷ್ಟಕರ ಸಂಗತಿ. ಆದ್ರೆ ಇದು ಬರೀ ಹಿಜಾಬ್ ಪ್ರಶ್ನೆ ಅಲ್ಲ. ಇದು ಒಂದು ಬಟ್ಟೆಯ ಪ್ರಶ್ನೆ. ಇದರ ಹಿಂದೆ ಇಸ್ಲಾಂ ಇದೆ. ಸದ್ಯ ವಿಚಾರ ನ್ಯಾಯಾಲಯದಲ್ಲಿದೆ. ಹೈಕೋರ್ಟನಿಂದ ಹಿಜಾಬ್ ವಿರುದ್ಧ ತೀರ್ಪು ಬಂದ್ರೂ ಇವರು ವಿರೋಧಿಸುತ್ತಾರೆ. ಅವರಿಗೆ ಸಂವಿಧಾನ, ಕೋರ್ಟು, ನ್ಯಾಯ ಅನ್ನುವಂತದ್ದಿಲ್ಲ. ಅವರಿಗೆ ಖುರಾನ, ಶರಿಯತ್ತು ಮಾತ್ರ ಫೈನಲ್. ಇವರ ಒಳಗಿನ ಮರ್ಮ ಈಗ ಹೊರಗೆ ಬಂದಿದೆ. ಹಿಂದು ಸಮಾಜ, ಸರ್ಕಾರ, ರಾಜಕೀಯದವರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಈವತ್ತು ಹಿಜಾಬ್, ನಾಳೆ ನಮಾಜ್, ಮಸೀದಿ, ಮೈಕು ಒಂದೊಂದಾಗಿ ಆಕ್ರಮಿಸಿಕೊಳ್ಳುತ್ತವೆ. ಈ ರೀತಿಯ ಮಾನಸಿಕತೆ ಡೇಂಜರಸ್ ಎಂದು ಮುತಾಲಿಕ್ ಹೇಳಿದರು.

ಕಾಂಗ್ರೆಸ್ಸಿನವರಿಗೆ ಮಾನ ಮರ್ಯಾದೆ ಇಲ್ಲ. ಹಿಜಾಬ್ ಬಗ್ಗೆ ನಮ್ಮದೇನು ಇಲ್ಲಾಂತಾರೆ ಕಾಂಗ್ರೆಸಿಗರು. ಸುಪ್ರೀಂ ಕೋರ್ಟ್ ಗೆ ತೆಗೆದುಕೊಂಡು ಹೋಗಿದ್ದೇ ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ. ಇವರಿಗೆ ಮುಸ್ಲಿಂ ಓಟ್ ಮುಖ್ಯ. ಸಮವಸ್ತ್ರ ಮುಖ್ಯವಲ್ಲ. ಕಾಂಗ್ರೆಸ್ಸಿಗರಿಗೆ ಹಿಜಾಬ್ ಮುಖ್ಯ ಹೊರತಾಗಿ ಕಿತಾಬ್ ಮುಖವಲ್ಲ ಎನ್ನುವ ಸಂದೇಶ ಜನಸಾಮಾನ್ಯರಲ್ಲಿ ಹೋಗಿದೆ. ಕಾಂಗ್ರೆಸ್ ಈಗಿನ ಸ್ಥಿತಿ ಏನಿದೆಯೋ, ಅದಕ್ಕಿಂತಲೂ ಕೆಳಮಟ್ಟಕ್ಕೆ ಹೋಗ್ತಾರೆ ಎಂದು ಹೇಳಿದರು.
Pramod Muthalik slams Zameer Ahmed for statement made on Hijab in Dharwad. Amid the ongoing row over hijab in Karnataka, state Congress leader Zameer Ahmed on Sunday claimed that India records highest number of rape cases because women don't do "purdah" or veil their face. In a video shared by news agency ANI, Ahmed could be seen as saying, "The concept of hijab is to keep girls, when they grow up, behind a 'purdah' [veil] to hide their beauty. Their beauty should not be visible. I think India has the highest number of rape cases in the world. It is because the women are not doing 'purdah'."
26-05-26 11:03 pm
HK News Desk
ದೈವಕ್ಕೆ ಅಪಮಾನ; ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ...
26-05-26 08:51 pm
ಬರೆದಿಟ್ಕೊಳ್ಳಿ , ಮುಂದೇನೂ ನಮ್ದೇ ಸರ್ಕಾರ ಇರ್ತದೆ ;...
25-05-26 09:38 pm
Student Suicide: ನೀಟ್ ಪರೀಕ್ಷೆ ಪಜೀತಿ ; ಪಿಯುಸಿಯ...
24-05-26 09:03 pm
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
26-05-26 12:54 pm
HK News Staffer
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸ್ಥಾನಕ್ಕೆ ರಾಜಿನಾ...
25-05-26 08:18 pm
ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಸಿಬಿಐ ತನಿಖೆಗೆ ಸು...
25-05-26 05:29 pm
ಮತ್ತೆ ಇಂಧನ ಶಾಕ್..! 11 ದಿನದಲ್ಲಿ 4ನೇ ಬಾರಿ ಪೆಟ್ರ...
25-05-26 10:19 am
27-05-26 12:29 pm
HK News Desk
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
ಎಂಆರ್ ಪಿಎಲ್ ಕೋಕ್ ಸಲ್ಫರ್ ಮಾಲಿನ್ಯ ; ಆರು ತಿಂಗಳಲ್...
25-05-26 09:57 pm
‘ಲ್ಯಾಂಡ್ ಲಿಂಕ್ಸ್’ ಸಂಸ್ಥೆಯ ನಾಲ್ಕು ಸಭಾಭವನ ಏಕಕಾ...
25-05-26 04:23 pm
27-05-26 12:42 pm
HK News Staffer
ಇಸ್ರೇಲ್ನಿಂದ ರಜೆ ಮೇಲೆ ಊರಿಗೆ ಬಂದವನ ದುರಂತ ಅಂತ್ಯ...
26-05-26 02:43 pm
ಪಿಯುಸಿ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣ ;...
26-05-26 11:56 am
Tablet Arif Murder: ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರ...
25-05-26 11:00 pm
ಭಟ್ಕಳದಲ್ಲಿ ಮುರಿದ ಕೋಮು ಸಾಮರಸ್ಯದ ಕಟ್ಟೆ; ರಸ್ತೆ ನ...
25-05-26 09:40 pm