ಬ್ರೇಕಿಂಗ್ ನ್ಯೂಸ್
16-02-22 09:44 pm Bengaluru Correspondent ಕರ್ನಾಟಕ
ಬೆಂಗಳೂರು, ಫೆ.16 : ಸಚಿವ ಕೆ.ಎಸ್.ಈಶ್ವರಪ್ಪ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂಬ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಸದಸ್ಯರು ವಿಧಾನಸಭೆ ಅಧಿವೇಶನದಲ್ಲಿ ಗದ್ದಲ ಎಬ್ಬಿಸಿದ್ದಾರೆ. ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ಕಿತ್ತು ಹಾಕಬೇಕು, ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಆಗ್ರಹ ಮಾಡಿದ್ದಾರೆ.
ವಿಧಾನ ಪರಿಷತ್ ನಲ್ಲಿ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ನಿಲುವಳಿ ಸೂಚನೆ ಮಂಡಿಸಲು ಅವಕಾಶ ಕೋರಿದರು. ಆದರೆ ಸ್ಪೀಕರ್ ಅವಕಾಶ ಕೊಡಲಿಲ್ಲ. ಈಶ್ವರಪ್ಪ ವಿರುದ್ಧ ದೇಶದ್ರೋಹದ ಕೇಸ್ ದಾಖಲಾಗೋ ವರೆಗೂ ಧರಣಿ ನಡೆಸ್ತೀವಿ. ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾರೆ, ಸುಮೊಟೊ ಕೇಸು ದಾಖಲಿಸಿ ಸಚಿವ ಸ್ಥಾನದಿಂದ ವಜಾ ಮಾಡಬೇಕು. ಈ ಬಗ್ಗೆ ರಾಜ್ಯಪಾಲರಿಗೂ ಒತ್ತಾಯ ಮಾಡುತ್ತೇವೆ ಎಂದರು ಹರಿಪ್ರಸಾದ್.
ವಿಪಕ್ಷ ಸದಸ್ಯರ ಗದ್ದಲದಿಂದಾಗಿ ಸ್ಪೀಕರ್ ಆಡಳಿತ ಮತ್ತು ವಿಪಕ್ಷದ ಪ್ರಮುಖರನ್ನು ಕರೆದು ಸಂಧಾನ ಸಭೆ ನಡೆಸಿದರೂ ಯಶಸ್ವಿಯಾಗಲಿಲ್ಲ. ಅನಂತರ ಕಾಂಗ್ರೆಸ್ ಸದಸ್ಯರು ಸದನಕ್ಕೆ ರಾಷ್ಟ್ರ ಧ್ವಜ ಹಿಡಿದು ಬಂದು ಪ್ರತಿಭಟನೆ ನಡೆಸಿದರು. ಪರಿಷತ್ ನಲ್ಲಿ ಸಭಾಪತಿ ಪ್ರಶ್ನೋತ್ತರ ಕಲಾಪಕ್ಕೆ ಮುಂದಾದರೆ, ಕಾಂಗ್ರೆಸ್ ಸದಸ್ಯರು ಧಿಕ್ಕಾರ ಕೂಗುತ್ತಾ ಬಾವಿಗಿಳಿದು ಧರಣಿ ನಡೆಸಿದರು. ದೇಶದ್ರೋಹಿ, ನಾಡದ್ರೋಹಿ ಎನ್ನುತ್ತಾ ಘೋಷಣೆ ಕೂಗಿದರು. ಇದರ ನಡುವೆಯೇ ಕಂದಾಯ ಸಚಿವ ಅಶೋಕ್, ಪ್ರಶ್ನೆಗೆ ಉತ್ತರ ನೀಡಲು ಆರಂಭಿಸಿದರು.
ಇದೇ ವೇಳೆ, ಸದನದಲ್ಲಿ ಎದ್ದು ನಿಂತ ನೀಡಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ಸದಸ್ಯರು ಧ್ವಜ ಹಿಡಿದು ಪ್ರತಿಭಟನೆ ನಡೆಸುತ್ತಿರುವುದನ್ನು ಆಕ್ಷೇಪಿಸಿದರು. ಈ ವಿಚಾರದಲ್ಲಿ ಬಹಳಷ್ಟು ಚರ್ಚೆ ಆಗಿದೆ. ಅಡರ್ನ್ಮೆಂಟ್ ಮೋಷನ್ ಮೂಮೆಂಟ್ ಮಾಡಲು ಸಾಧ್ಯವಿಲ್ಲ ಅಂತ ಕಾನೂನು ಸಚಿವರು ಹೇಳಿದ್ದಾರೆ. ಆದರೆ ಕಾಂಗ್ರೆಸ್ ಸದಸ್ಯರು ಧ್ವಜ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ರಾಷ್ಟ್ರ ಧ್ವಜವನ್ನ ಹೀಗೆ ಹಿಡಿಯಬಾರದು, ಇದು ಸಂವಿಧಾನ ಬಾಹಿರ. ನಿಮಗೆ ಬೇಕಾದಂತೆ ಮಾಡಿಕೊಳ್ಳಲು ಆಗಲ್ಲ ಎಂದರು.
ಇದರ ನಡುವೆ ಸ್ಪೀಕರ್ ಮಧ್ಯಪ್ರವೇಶ ಮಾಡಿದ್ದು ರಾಷ್ಟ್ರ ಧ್ವಜವನ್ನ ನಿಮ್ಮ ಪ್ರತಿಭಟನೆಗೆ ಬಳಸಿಕೊಳ್ಳುವುದು ಸರಿಯಲ್ಲ. ನಿಮ್ಮರಾಜಕೀಯ ಪಕ್ಷಕ್ಕೆ ದೊಡ್ಡ ಇತಿಹಾಸ ಇದೆ. ರಾಷ್ಟ್ರ ಧ್ವಜವನ್ನ ಈ ರೀತಿಯ ಉದ್ದೇಶಕ್ಕೆ ಬಳಸಿಕೊಳ್ಳಬಾರದು ಅಂತ ಸೂಚಿಸಿದರು. ಇದಕ್ಕಿಂತ ದೇಶದ್ರೋಹದ ಚಟುವಟಿಕೆ ಮತ್ತೊಂದಿಲ್ಲ ಎಂದು ಕಾಂಗ್ರೆಸ್ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಮಾತನಾಡಿದ ಸಚಿವ ಅಶೋಕ್, ದೇಶದ ಇತಿಹಾಸಲ್ಲಿ ಯಾವುದೇ ಕಾರಣಕ್ಕೂ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿಲ್ಲ. ಕಾಂಗ್ರೆಸ್ ಇದೇ ಮೊದಲ ಬಾರಿಗೆ ಸದನದಲ್ಲಿ ರಾಷ್ಟ್ರ ಧ್ವಜ ಹಿಡಿದಿದ್ದಾರೆ. ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ದಿನದಲ್ಲಿ ಮಾತ್ರ ನಿಯಮ ಪ್ರಕಾರ ಹಾರಿಸುವುದು. ನಾವು ಜನರಿಗೆ, ಮಕ್ಕಳಿಗೆ ಮಾದರಿಯಾಗಬೇಕು. ಎದ್ದು ನಿಂತು ಗೌರವ ಸೂಚಿಸುವ ಧ್ವಜವನ್ನು ಸದನದ ಬಾವಿಗಿಳಿದು ಧರಣಿಗೆ ಬಳಸಿ ಅಪಮಾನ ಮಾಡಿದ್ದಾರೆ.
ಕಾಂಗ್ರೆಸ್ ನವರಿಗೆ ಒಂದು ಪ್ರಶ್ನೆ ಮಾಡ್ತೀವಿ. ಹುಬ್ಬಳಿಯಲ್ಲಿ ರಾಷ್ಟ್ರ ಧ್ವಜ ಹಾರಿಸುವ ಸವಾಲು ಬಂತು. ಕಾಶ್ಮೀರದಲ್ಲಿ ಧ್ವಜ ಹಾರಿಸಿ ಅಂತ ಭಯೋತ್ಪಾದಕರು ಕರೆ ನೀಡಿದ್ರು. ಆಗ ಕಾಂಗ್ರೆಸ್ ನವರು ಎಲ್ಲಿ ಹೋಗಿದ್ರು. ಹೆದರಿ ಬಿಲ ಸೇರಿದ್ದರು. ಆಗ ಕಾಶ್ಮೀರದಲ್ಲಿ ಧ್ವಜ ಹಾರಿಸಿದ್ದು ಬಿಜೆಪಿ. ಎಂದೂ ಭಾರತ್ ಮಾತಾಕೀ ಜೈ ಹೇಳದ ಕಾಂಗ್ರೆಸ್, ಈ ನಿಟ್ಟಿನಲ್ಲಾದ್ರೂ ಜೈಕಾರ ಹಾಕಿದ್ರು. ಆದರೆ ಇವರದ್ದು ನಕಲಿ ಜೈಕಾರ ಎಂದು ಮೂಲಿಸಿದರು. ಕೊನೆಗೆ ಗದ್ದಲ ನಡುವೆಯೇ ಸದನವನ್ನು ಸ್ಪೀಕರ್ ಕಾಗೇರಿ ನಾಳೆಗೆ ಮುಂದೂಡಿದರು.
Leader of Opposition in Karnataka Legislative Assembly Siddaramaiah has said that a sedition case should be filed against the Minister for Rural Development and Panchayat Raj KS Eshwarappa for his purported claim of hoisting a saffron flag at the Red Fort. Eshwarappa recently said that they will hoist a saffron flag at Red Fort and that the Chief Minister of the State should sack him from the Cabinet, he added. He has no right to continue as a minister after what he has said, added the Congress leader.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am