ಬ್ರೇಕಿಂಗ್ ನ್ಯೂಸ್
16-02-22 11:05 pm Bengaluru Correspondent ಕರ್ನಾಟಕ
ಬೆಂಗಳೂರು, ಫೆ.16 : ಹಿಜಾಬ್ ವಿಚಾರದಲ್ಲಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿನಿಯರ ವೈಯಕ್ತಿಕ ವಿವರಗಳನ್ನು ಕರ್ನಾಟಕ ಬಿಜೆಪಿ ಟ್ವಿಟರ್ ನಲ್ಲಿ ಹಂಚಿಕೊಂಡು ಬಳಿಕ ಭಾರೀ ಟೀಕೆ ವ್ಯಕ್ತವಾಗುತ್ತಿದ್ದಂತೆ ಡಿಲೀಟ್ ಮಾಡಿ ತೀವ್ರ ಮುಜುಗರಕ್ಕೀಡಾಗಿದೆ.
ಅರ್ಜಿದಾರರಲ್ಲಿ ಕೆಲವರು ಅಪ್ರಾಪ್ತರಾಗಿರುವುದರಿಂದ ಟ್ವೀಟ್ ಭಾರಿ ಟೀಕೆಗೆ ಗುರಿಯಾಗಿತ್ತು. ವಿದ್ಯಾರ್ಥಿಗಳ ವೈಯಕ್ತಿಕ ವಿವರಗಳ ಸ್ಕ್ರೀನ್‌ಶಾಟ್‌ನೊಂದಿಗೆ ಹಂಚಿಕೊಳ್ಳಲಾಗಿತ್ತು. ಹಿಜಾಬ್ ವಿವಾದದಲ್ಲಿ ಭಾಗಿಯಾಗಿರುವ ಐವರು ವಿದ್ಯಾರ್ಥಿಗಳು ಅಪ್ರಾಪ್ತ ವಯಸ್ಕರು. ಕಾಂಗ್ರೆಸ್ ನಾಯಕರಾದ ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಅವರು ಅಪ್ರಾಪ್ತ ವಯಸ್ಸಿನ ಹುಡುಗಿಯರನ್ನು ರಾಜಕೀಯದಲ್ಲಿ ತೊಡಗಿಸುವುದು ಅಪರಾಧವಾಗಲ್ಲವೇ? ಚುನಾವಣೆಯಲ್ಲಿ ಗೆಲ್ಲಲು ಅವರು ಎಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ? "ಲಡ್ಕಿ ಹೂ ಲಡ್ ಸಕ್ತಿ ಹೂಂ" ಎಂದರೆ ಇದೇನಾ ಪ್ರಿಯಾಂಕಾ ಗಾಂಧಿ?" ಎಂದು ಪ್ರಶ್ನಿಸಿ ಬರೆಯಲಾಗಿತ್ತು.
ತಕ್ಷಣ ಪ್ರತಿಕ್ರಿಯಿಸಿದ ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ, ಬಿಜೆಪಿ ಟ್ವೀಟ್ ಅನ್ನು 'ಅಸೂಕ್ಷ್ಮ' ಎಂದು ಕರೆದಿದ್ದಾರೆ. ಪೊಲೀಸರು, ಟ್ವಿಟರ್ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಟ್ಯಾಗ್ ಮಾಡುವ ಮೂಲಕ ಅವರು ಈ ವಿಷಯದಲ್ಲಿ ಕ್ರಮ ಜರುಗಿಸುವಂತೆ ಕೋರಿದ್ದಾರೆ. ಮಹಿಳಾ ಸಬಲೀಕರಣದ ಸಂಸದೀಯ ಆಯೋಗದ ಸದಸ್ಯರೂ ಆಗಿರುವ ರಾಜ್ಯಸಭಾ ಸದಸ್ಯೆ ಚತುರ್ವೇದಿ, ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಇರುವ ರಾಷ್ಟ್ರೀಯ ಆಯೋಗವು ತಕ್ಷಣವೇ ಪ್ರಕರಣ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದ್ದರು.
"ಅಪ್ರಾಪ್ತ ವಯಸ್ಕರ ಹೆಸರು ಮತ್ತು ವಿಳಾಸಗಳನ್ನು ಹಂಚಿಕೊಳ್ಳುವುದು ಕ್ರಿಮಿನಲ್ ಕೃತ್ಯ. ಇದು ಸ್ವೀಕಾರಾರ್ಹವಲ್ಲ" ಎಂದು ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮತ್ತೆ ಮಾಡಿದ್ದು ಈ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಂತೆ ಬಿಜೆಪಿ ವಿರುದ್ಧ ಭಾರೀ ಆಕ್ರೋಶ ಕೇಳಿಬಂದಿತ್ತು. ಆಬಳಿಕ ಬಿಜೆಪಿ ತನ್ನ ಟ್ವೀಟನ್ನೇ ಅಳಿಸಿ ಹಾಕಿದ್ದು ತೀವ್ರ ಮುಜುಗರಕ್ಕೀಡಾಗಿದೆ.
THE BJP on Tuesday tweeted the identity and other details of students who have approached Karnataka High Court against the ban on hijab in classrooms, to allege that the opposition Congress was using minors to stay relevant in politics. The tweet, which received severe criticism as the minors were identified and their addresses shared, was later taken down by Twitter for violating its rules.
06-03-25 02:31 pm
Bangalore Correspondent
Yediyurappa, Lingayat, Yatnal: ಯಡಿಯೂರಪ್ಪ ಲಿಂಗ...
05-03-25 01:58 pm
BJP MLAs Assembly adjourned: ಸದನ ಕಲಾಪ ನೇರ ಪ್ರ...
05-03-25 01:47 pm
DK Shivakumar, Mangalore Night life, Cabinet:...
04-03-25 07:20 pm
Kasaragod, Manjeshwar Accident: ಮಂಜೇಶ್ವರ ; ಹೆ...
04-03-25 01:37 pm
05-03-25 05:38 pm
HK News Desk
14ನೇ ಮಗುವಿಗೆ ತಂದೆಯಾದ ಉದ್ಯಮಿ ಎಲಾನ್ ಮಸ್ಕ್ ! ನಾಲ...
01-03-25 10:39 pm
Trump Vs Zelenskyy, Talk fight: ಶ್ವೇತ ಭವನದಲ್ಲ...
01-03-25 05:35 pm
Pope Francis: ಪೋಪ್ ಫ್ರಾನ್ಸಿಸ್ ಆರೋಗ್ಯ ಸ್ಥಿತಿ ಗ...
01-03-25 01:20 pm
ಟ್ರಂಪ್ ಸುಂಕ ಬರೆಗೆ ನಲುಗಿದ ಷೇರುಪೇಟೆ ; NIFTY ಇತಿ...
28-02-25 08:11 pm
06-03-25 06:44 pm
Mangalore Correspondent
Kantara 2, Rishab Shetty, Kateel temple: ಕಾಂತ...
06-03-25 03:27 pm
Udupi Garuda Gang Isaac Arrest, Chasing, Poli...
06-03-25 02:58 pm
Puttur MLA, Ashok Rai, Mangalore airport: ಜೀವ...
05-03-25 10:58 pm
Diganth Missing case, Assembly: ಸದನದಲ್ಲಿ ಪ್ರತ...
05-03-25 09:30 pm
05-03-25 10:24 am
HK News Desk
ಆನ್ಲೈನ್ ಗೇಮ್ ಚಟ ; ಆಡದಂತೆ ವಿರೋಧಿಸಿದ್ದಕ್ಕೆ ತಂದ...
04-03-25 03:12 pm
ಹರ್ಯಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಕೊಲೆಗೈದು ಸೂಟ...
03-03-25 01:51 pm
Bangalore Falcon Ponzi scheme, Fraud: ಇನ್ ವಾಯ...
02-03-25 06:37 pm
Bangalore KR Puram Police, Bike Robbery, Crim...
01-03-25 05:54 pm