ಬ್ರೇಕಿಂಗ್ ನ್ಯೂಸ್
19-02-22 09:07 pm HK Desk news ಕರ್ನಾಟಕ
ಬಾಗಲಕೋಟ, ಫೆ.19 : ಮೂಲಭೂತವಾದ ಮತ್ತು ಪ್ರತ್ಯೇಕತಾವಾದ ಬಿತ್ತುವ ಮುಸ್ಲಿಂ ಸಂಘಟನೆಗಳನ್ನು ನಿಷೇಧ ಮಾಡಲು ಮುಂದಾಗದ ಬಿಜೆಪಿ ಸರಕಾರದ ವಿರುದ್ಧ ಶ್ರೀರಾಮ ಸೇನೆ ವರಿಷ್ಠ ಪ್ರಮೋದ್ ಮುತಾಲಿಕ್ ತೀವ್ರ ಹರಿಹಾಯ್ದಿದ್ದಾರೆ.
ಈ ಬಗ್ಗೆ ಹೇಳಲು ನಮಗೆ ಬಹಳ ದುಃಖ ಆಗುತ್ತೆ, ನೋವಾಗುತ್ತೆ, ಸಿಟ್ಟು ಬರುತ್ತದೆ. ಕಾಂಗ್ರೆಸಿನ ಮುಸ್ಲಿಂ ಓಟ್ ಬ್ಯಾಂಕ್ ಒಡೆಯುತ್ತಾರೆ ಅಂತ ಪಿಎಫ್ ಐ, ಸಿಎಫ್ ಐ, ಎಸ್ಡಿಪಿಐನಂಥ ರಾಕ್ಷಸರನ್ನು ಬಿಜೆಪಿಯವರೇ ಬೆಳೆಸುತ್ತಿದ್ದಾರೆ. ಬಿಜೆಪಿಯವರೇ ಈ ಎಲ್ಲ ಸಂಘಟನೆಗಳನ್ನು ಸಾಕುತ್ತಿದ್ದಾರೆ.. ಕಾಂಗ್ರೆಸ್ ಈ ಸಂಘಟನೆಗಳನ್ನು ಬ್ಯಾನ್ ಮಾಡಿ ಅಂತ ಹೇಳುತ್ತಿದೆ. ಕಮ್ಯುನಿಸ್ಟ್ ಪಕ್ಷದವರು ಕೂಡ ಹೇಳುತ್ತಿದ್ದಾರೆ. ಬಿಜೆಪಿಯವರೇ ನಿಮ್ಮ ಓಟ್ ಬ್ಯಾಂಕ್ ಗಾಗಿ ಟೆರರಿಷ್ಟ್ ಗಳನ್ನು ಬೆಳೆಸಬೇಡಿ. ಮುಂದಿನ ದಿನಗಳಲ್ಲಿ ಈ ಎಲ್ಲ ಸಂಘಟನೆಗಳ ವಿರುದ್ಧ ಹಿಂದು ಪರ ಸಂಘಟನೆಗಳೆಲ್ಲ ಸೇರಿ ಹೋರಾಟ ಮಾಡಲಿದ್ದೇವೆ ಎಂದು ಮುತಾಲಿಕ್ ಹೇಳಿದ್ದಾರೆ.
ಕುಂಕುಮ, ಬಳೆ ಬಗ್ಗೆ ಮುಸ್ಲಿಂ ವಿದ್ಯಾರ್ಥಿನಿಯರು ಪ್ರಶ್ನೆ ಮಾಡಿದ್ದಕ್ಕೆ ಕೆಂಡಾಮಂಡಲರಾದ ಮುತಾಲಿಕ್, ಇವತ್ತು ಕುಂಕುಮ, ಭಸ್ಮ, ಬಳೆ ಬಗ್ಗೆ ಮಾತಾಡುವ ದಾರ್ಷ್ಟ್ಯ ಬೆಳೆದಿದೆ. ಕುಂಕುಮ, ಬಳೆ, ವಿಭೂತಿ ವೈಜ್ಞಾನಿಕವಾಗಿವೆ. ಇದು ಯಾವುದೇ ಶೋಗಾಗಿ ಅಲ್ಲ ಫ್ಯಾಷನ್ ಅಲ್ಲ, ಅಲಂಕಾರವಲ್ಲ.. ಇದರಲ್ಲಿ ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕ್ರತಿ ಇದೆ ಪರಂಪರೆ ಇದೆ. ಈ ಬಗ್ಗೆ ಮಾತಾಡಿದರೆ ನಾಲಿಗೆ ಸೀಳಿ ಬಿಡುತ್ತೇವೆ ಹುಷಾರಾಗಿರಿ. ಅವು ಸಮವಸ್ತ್ರದ ಭಾಗಗಳಲ್ಲ. ಸಮವಸ್ತ್ರ ಅಂದರೆ ಬರೀ ಬಟ್ಟೆ.. ಬಟ್ಟೆ ಬಗ್ಗೆ ಮಾತ್ರ ಮಾತಾಡಿ ಎಂದು ಕಿಡಿಕಾರಿದರು. ಗಣಪತಿ ಪೂಜೆ, ಸರಸ್ವತಿ ಪೂಜೆ ಕುಂಕುಮ ಬಳೆ ಬಗ್ಗೆ ಮಾತಾಡಿದರೆ ನಾಲಿಗೆ ಸೀಳಿ ಹಾಕುತ್ತೇವೆ. ಜಾಗ್ರತೆ ಎಂದರು.
ಹಿಜಾಬ್ ಹಿಂದೆ ಇಸ್ಲಾಮೀಕರಣ ಇದೆ. ಬರೀ ಹಿಜಾಬ್ ಅಷ್ಟೇ ಅಲ್ಲ, ಈಗ ನೇರವಾಗಿ ಬುರ್ಖಾ ಹಾಕಿಕೊಂಡು ಬರುತ್ತಾರೆ. ಮುಂದೆ ನಮಾಜ್ ಮಾಡೋಕೆ ಅವಕಾಶ ಬೇಕು ಅಂತಾರೆ. ಒಂದೊಂದಾಗಿ ಮುನ್ನುಗ್ಗುವ ಪ್ರವೃತ್ತಿ ಇಸ್ಲಾಮ್ ಇತಿಹಾಸ ಹೇಳುತ್ತದೆ. ಪಿಎಫ್ ಐ, ಸಿಎಫ್ ಐ ಈಗಾಗಲೇ ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿವೆ. ಪಿಎಫ್ ಐ ಬ್ಯಾನ್ ಮಾಡಿ ಅಂತ ಕೇರಳದ ಸಿಮ್ ಪಿಣರಾಯಿ ವಿಜಯನ್ ಹೇಳಿದ್ದರು. ನಾನು ಹೇಳುತ್ತಿಲ್ಲ.. ಹಿಂದೆ ಅವರೇ ಕೇಂದ್ರಕ್ಕೆ ಪತ್ರವನ್ನು ಬರೆದಿದ್ದರು. ಪಿಎಫ್ ಐ ದೊಡ್ಡ ರಾಕ್ಷಸಿ ರೂಪವಾಗಿ ದೇಶಕ್ಕೆ ಕಂಟಕವಾಗುತ್ತದೆ ಎಂದು ಹೇಳಿದ್ದರು. ಕಾಂಗ್ರೆಸ್ ನವರೆ ಇವತ್ತು ಸಿಎಮ್ ಗೆ ಭೇಟಿಯಾಗಿ ಬ್ಯಾನ್ ಮಾಡಿ ಅಂತ ಹೇಳಿದಾರೆ. ನಿಮಗೇನಾಗಿದೆ(ಬಿಜೆಪಿ) ಬ್ಯಾನ್ ಮಾಡೋದಕ್ಕೆ. ಎಷ್ಟು ದಾಖಲೆಗಳು ಬೇಕು, ಕೊಲೆ ಕೇಸ್ ನಲ್ಲಿ ಪಿಎಫ್ ಐ ಹೆಸರಲ್ಲಿ ಒಂಬತ್ತು ಚಾರ್ಜ್ ಶೀಟ್ ಆಗಿದೆ. ಬ್ಯಾನ್ ಮಾಡುವಂತಹ ಕೆಲಸ ಬಿಜೆಪಿ ಸರಕಾರ ಮಾಡದಿದ್ದರೆ ಇವು ನಿಮ್ಮನ್ನು ನುಂಗಿ ಹಾಕುತ್ತವೆ ಅಂತ ಎಚ್ಚರಿಕೆ ಕೊಡುತ್ತೇನೆ ಎಂದು ಹೇಳಿದರು ಮುತಾಲಿಕ್.
pramod muthalik made a controversial statement that if he talks about kumkum, bangle, ganpati puja, saraswati puja, he will slit his tongue. what is happening in the state is not a hijab question, but islamization behind it. he alleged that he was now out one by one.
12-08-25 10:39 pm
Bangalore Correspondent
Rajendra Swamiji of Kodimath, Dharmasthala: ಧ...
12-08-25 07:43 pm
ಕೆಎನ್ ರಾಜಣ್ಣ ರಾಜಿನಾಮೆ ಅಲ್ಲ, ಸಚಿವ ಸ್ಥಾನದಿಂದ ಕಿ...
11-08-25 11:01 pm
ರಾಜ್ಯಪಾಲರ ವಿರುದ್ಧ ಅವಹೇಳನ ಹೇಳಿಕೆ ; ಐವಾನ್ ಡಿಸೋಜ...
11-08-25 10:26 pm
KN Rajanna resigns: ಸಹಕಾರ ಸಚಿವ ಕೆ.ಎನ್ ರಾಜಣ್ಣ...
11-08-25 03:29 pm
13-08-25 11:56 am
HK News Desk
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
'ದೇಶ ಸುರಕ್ಷಿತ ಕೈಯಲ್ಲಿದೆ' ; ನರೇಂದ್ರ ಮೋದಿ ಸರ್ಕ...
12-08-25 02:49 pm
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
ಕರ್ನಾಟಕ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಾರ್ವತ್ರಿ...
12-08-25 11:35 am
13-08-25 01:49 pm
Mangalore Correspondent
ಶವ ಹೂತ ಪ್ರಕರಣ ; ಕೊನೆಗೂ ಎಂಟ್ರಿಯಾದ ರಾಷ್ಟ್ರೀಯ ಮಾ...
13-08-25 10:37 am
ನಿಯಂತ್ರಣ ತಪ್ಪಿದ ಸ್ಕೂಟರ್ ಆವರಣ ಗೋಡೆಗೆ ಡಿಕ್ಕಿ ;...
13-08-25 10:17 am
ಧರ್ಮಸ್ಥಳ ಕೇಸ್ ; ಜಿಪಿಆರ್ ಬಳಸಿದರೂ ಸಿಗಲಿಲ್ಲ ಎಲುಬ...
12-08-25 11:06 pm
ಕೆಂಪು ಕಲ್ಲು ಗಣಿಗಾರಿಕೆಗೆ ಶೀಘ್ರದಲ್ಲೇ ಹೊಸ ನಿಯಮ ;...
12-08-25 08:34 pm
12-08-25 12:36 pm
Bangalore Correspondent
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm
ಸ್ನೇಹಿತನಿಗೆ ಬೆತ್ತಲೆ ವೀಡಿಯೋ ಶೇರ್ ಮಾಡಿದ್ಲು ಯುವತ...
08-08-25 10:07 pm
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm