ಶಾಲೆಗೆ ಹೋಗು ಎಂದಿದ್ದಕ್ಕೇ ಬೇಜಾರು ; 15 ವರ್ಷದ SSLC ವಿದ್ಯಾರ್ಥಿನಿ ಆತ್ಮಹತ್ಯೆ 

23-02-22 10:28 pm       HK Desk news   ಕರ್ನಾಟಕ

ವಿದ್ಯಾರ್ಥಿನಿಯೊಬ್ಬಳು ಶಾಲೆಗೆ ಹೋಗು ಎಂದಿದ್ದಕ್ಕೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಚಿಕ್ಕಬಳ್ಳಾಪುರ, ಫೆ 23 : ವಿದ್ಯಾರ್ಥಿನಿಯೊಬ್ಬಳು ಶಾಲೆಗೆ ಹೋಗು ಎಂದಿದ್ದಕ್ಕೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಚಿಕ್ಕಬಳ್ಳಾಪುರದ ವಾಪಸಂದ್ರ ಬಡಾವಣೆಯ ಬೇಬಿ (15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.

ಚಿಕ್ಕಬಳ್ಳಾಪುರದ ವಾಪಸಂದ್ರ ಬಡಾವಣೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್​ಎಸ್​ಎಲ್​ಸಿ ವ್ಯಾಸಂಗ ಮಾಡುತ್ತಿದ್ದ ಈಕೆ ಬರೀ ಶಾಲೆ ಹೋಗು ಎಂದ ಒಂದೇ ಮಾತಿಗೆ ಇಂಥದ್ದೊಂದು ಅನಾಹುತ ಮಾಡಿಕೊಂಡಿದ್ದಾಳೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

SSLC student commits suicide as parents told her to go to school in  Chikkaballapur. The deceased has been identified as Baby.