ಬ್ರೇಕಿಂಗ್ ನ್ಯೂಸ್
24-02-22 07:17 pm HK Desk news ಕರ್ನಾಟಕ
ಹಾಸನ, ಫೆ 24 : ಮೀಟರ್ ಬಡ್ಡಿ ದಂಧೆಗೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಹೇಮಾವತಿ ನಗರದಲ್ಲಿ ನಡೆದಿದೆ.
ಸತ್ಯಪ್ರಸಾದ್ (54), ಅನ್ನಪೂರ್ಣ (50), ಗೌರವ್ (21) ಸಾವಿಗೀಡಾದ ಒಂದೇ ಕುಟುಂಬದ ಸದಸ್ಯರು. ಪತಿ - ಪತ್ನಿ ಹಾಗೂ ಪುತ್ರ ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಆದ್ರೆ, ಸ್ಥಳೀಯರ ಪ್ರಕಾರ ಕುಟುಂಬ ಇತ್ತಿಚೆಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಹಾಸನ ಮತ್ತು ಬೇಲೂರು ರಸ್ತೆಯ ಇಬ್ದಾಣೆ ಗ್ರಾಮದ ಸಮೀಪ ವೀರಭದ್ರೇಶ್ವರ ಪೆಟ್ರೋಲ್ ಬಂಕ್ ನೆಡೆಸುತ್ತಿದ್ದ ಈ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದ್ದರಿಂದ ಅದನ್ನು ಬೇರೆಯವರಿಗೆ ಬಿಟ್ಟುಕೊಟ್ಟಿದ್ದರು.
ಇತ್ತೀಚಿಗಷ್ಟೆ ಖಾಸಗಿ ಫೈನಾನ್ಸ್ ಮೂಲಕ ಐಷಾರಾಮಿ ಕಾರು ಸಹ ಖರೀದಿ ಮಾಡಿದ್ದರು. ಸಾಲದ ಸುಳಿಗೆ ಸಿಲುಕಿದ್ದರಿಂದ ಐಷಾರಾಮಿ ಕಾರನ್ನು ಬಡ್ಡಿದಂದೆ ಕೋರರು ಮೂರುದಿನಗಳ ಹಿಂದಷ್ಟೆ ವಶಕ್ಕೆ ಪಡೆದುಕೊಂಡು ಹೋಗಿದ್ದರು ಎನ್ನಲಾಗಿದೆ. ವಾರದ ಹಿಂದಷ್ಟೆ ಮಗನಿಗೆ ಉಪನಯನ ಕಾರ್ಯಕ್ರಮವನ್ನು ಬಹಳ ಅದ್ಧೂರಿಯಾಗಿ ಮನೆಯಲ್ಲಿಯೇ ನೆರವೇರಿಸಿದ್ದರು. ಮೈಸೂರಿನಲ್ಲಿ ಓದುತ್ತಿದ್ದ ಮಗ ನಾಳೆ ಮತ್ತೆ ಕಾಲೇಜಿಗೆ ಹೋಗಬೇಕಿತ್ತು. ಇಂದು ಮೃತರ ಅತ್ತೆ ಸೀತಾಲಕ್ಷ್ಮಿ ಸೊಸೆ ಅನ್ನಪೂರ್ಣರನ್ನು ಎಬ್ಬಿಸಲು ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಸಂಬಂಧಿಕರು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಫೆ.22ರಂದು ಮೀಟರ್ ಬಡ್ಡಿ ದಂಧೆಕೋರರು ಮನೆಗೆ ಬಂದು ಗಲಾಟೆ ನಡೆಸಿದ್ದು, ಮನನೊಂದ ಕುಟುಂಬ ಮರ್ಯಾದೆಗೆ ಅಂಜಿ ನೆನ್ನೆ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
A businessman, his wife and their son were found dead at their residence in Hemavathi Nagar in Hassan on February 24. The deceased have been identified as Satya Prasad, 47, his wife Annapurna and their son Gaurav. Satya Prasad owns a fuel station on Belur Road on the outskirts of Hassan.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm