ಬ್ರೇಕಿಂಗ್ ನ್ಯೂಸ್
25-02-22 02:21 pm HK Desk news ಕರ್ನಾಟಕ
ಶಿವಮೊಗ್ಗ, ಫೆ.25 : ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ರಾಜ್ಯದಾದ್ಯಂತ ಹಿಂದು ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಹಿಂದು ಹತ್ಯೆಯ ನೆಪದಲ್ಲಿ ಹಿಂದುಗಳನ್ನು ಎಚ್ಚರಿಸುವ ಕೆಲಸ ಮಾಡಿದೆ. ಇದೇ ವೇಳೆ, ಶಿವಮೊಗ್ಗದಲ್ಲಿ ಹಿಂದು ಕಾರ್ಯಕರ್ತರು ಒಂದು ಹೆಜ್ಜೆ ಮುಂದೆ ಹೋಗಿದ್ದು, ದೇಶಭಕ್ತರಿಗೆ ವಿಧಾನಸಭೆ ಟಿಕೆಟ್ ಕೊಡಿ ಎಂದು ಹೊಸ ಅಭಿಯಾನ ಆರಂಭಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಅಭಿಯಾನವನ್ನು ನಡೆಸಲಾಗುತ್ತಿದ್ದು, ಮಾಜಿ ಸಿಎಂ ಯಡಿಯೂರಪ್ಪ, ಸಚಿವ ಈಶ್ವರಪ್ಪ ಅವರ ಊರಿನಲ್ಲೇ ಇಂತಹ ಬೆಳವಣಿಗೆ ಆಗಿರುವುದು ಬಿಜೆಪಿ ನಾಯಕರಿಗೇ ಮುಜುಗರ ಸೃಷ್ಟಿಸಿದೆ. ಹರ್ಷ ದೇಶಕ್ಕಾಗಿ ಪ್ರಾಣವನ್ನೇ ನೀಡಿದ್ದಾನೆ. ಆತನ ಸಾವಿನ ನೆಪದಲ್ಲಿ ಕುಟುಂಬಕ್ಕೆ ಸಾಂತ್ವನ, ನೆರವು ನೀಡಿದರಷ್ಟೇ ಸಾಲದು. ಆತನ ತಾಯಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಬೇಕು. ದೇಶಭಕ್ತನ ಮನೆಯಿಂದ ಒಬ್ಬ ಎಂಎಲ್ಎ ಹುಟ್ಟಿ ಬರಲಿ. ಶಾಸಕ ಸ್ಥಾನ ಯಡಿಯೂರಪ್ಪ, ಈಶ್ವರಪ್ಪ ಕುಟುಂಬಸ್ಥರಿಗೆ ಮಾತ್ರ ಮೀಸಲಾಗಬಾರದು. ನಮ್ಮ ಬೇಡಿಕೆ ಈಡೇರಿಸಿದರೆ ಬಿಜೆಪಿಗೊಂದು ಸಲಾಂ ಎಂದು ಬರೆಯಲಾಗಿದ್ದು, ಪೋಸ್ಟರ್ ಗಳು ಜಾಲತಾಣದಲ್ಲಿ ವೈರಲ್ ಆಗಿದೆ.
ಇದುವರೆಗೂ ಹಿಂದುಗಳ ಮತ ಪಡೆದು ಅಧಿಕಾರ ಅನುಭವಿಸಿದ್ದೀರಿ. ಮತ್ತೆ ಮತ್ತೆ ಅವರೇ ಅಧಿಕಾರ ಅನುಭವಿಸುವುದು ಬೇಡ. ದೇಶಭಕ್ತರ ಕುಟುಂಬ ಸದಸ್ಯರಿಗೆ ಅವಕಾಶ ಸಿಗಬೇಕು. ಕೊಲೆಯಾಗುತ್ತಿರುವುದು ಶಾಸಕ, ಸಚಿವ, ಸಂಸದರ ಮಕ್ಕಳಲ್ಲ. ಬಡವರ ಮಕ್ಕಳು. ಹಿಂದುತ್ವಕ್ಕಾಗಿ ಕೊಲೆಯಾಗುವ ಬಡವರ ಮಕ್ಕಳಿಗೆ ಗೌರವ, ಸ್ಥಾನಗಳು ಸಿಗಲಿ ಎಂದು ಪೋಸ್ಟರ್ ಗಳು ಹರಿದಾಡುತ್ತಿದ್ದು, ಶಿವಮೊಗ್ಗ ಮತ್ತು ರಾಜ್ಯ ಬಿಜೆಪಿ ನಾಯಕರಿಗೆ ಇರಿಸುಮುರಿಸು ಸೃಷ್ಟಿಸಿದೆ.

ಹರ್ಷ ಕುಟುಂಬಕ್ಕೆ 50 ಲಕ್ಷಕ್ಕೂ ಹೆಚ್ಚು ನೆರವು
ಈ ನಡುವೆ, ಹರ್ಷ ಕುಟುಂಬದ ಸದಸ್ಯರನ್ನು ಭೇಟಿಯಾಗಲು ದಿನವೂ ರಾಜ್ಯದ ಬೇರೆ ಬೇರೆ ಕಡೆಯಿಂದ ಹಿಂದು ಸಂಘಟನೆಗಳ ನಾಯಕರು, ಶಾಸಕರು, ಸಚಿವರು ಆಗಮಿಸುತ್ತಿದ್ದಾರೆ. ಹಲವಾರು ಮಂದಿ ಲಕ್ಷಾಂತರ ರೂಪಾಯಿ ನೆರವನ್ನು ಹರ್ಷ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಹರ್ಷ ಕುಟುಂಬಕ್ಕೆ 50 ಲಕ್ಷಕ್ಕೂ ಹೆಚ್ಚು ನೆರವು ಈಗಾಗ್ಲೇ ಲಭಿಸಿದ್ದು ಇನ್ನೂ ನೆರವು ಹರಿದು ಬರುತ್ತಲೇ ಇದೆ.
ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಹತ್ತಕ್ಕೇರಿಕೆ
ಸದ್ಯಕ್ಕೆ ಶಿವಮೊಗ್ಗದ ಸ್ಥಿತಿ ಸಂಪೂರ್ಣ ಶಾಂತವಾಗಿದ್ದು, ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಆರೋಪಿಗಳಿಗೆ ಸಹಕರಿಸಿದ, ಸಂಚು ರೂಪಿಸಿದವರನ್ನೂ ಹೆಡೆಮುರಿ ಕಟ್ಟುತ್ತಿದ್ದಾರೆ. ಮತ್ತೆ ಇಬ್ಬರನ್ನು ಕೊಲೆ ಪ್ರಕರಣದಲ್ಲಿ ಬಂಧಿಸಿದ್ದು, ಒಟ್ಟು ಬಂಧಿತರ ಸಂಖ್ಯೆ 10ಕ್ಕೇರಿದೆ. ಭದ್ರಾವತಿ ಹೊಸಮನೆಯ ಅಬ್ದುಲ್ ರೋಶನ್ (24) ಮತ್ತು ವಾದಿ ಎ ಹುದಾ ನಗರದ ಜಾಫರ್ ಸಾದಿಕ್ ಅಲಿಯಾಸ್ ಬದ್ರಿ(54) ಬಂಧಿತರು.
A social media campaign demanding to issue BJP ticket to Harsha Mother is now going viral. Harsha was killed by Muslim Miscreants as he was a leading Bajarang dal member in Shivamogga.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm