ಬ್ರೇಕಿಂಗ್ ನ್ಯೂಸ್
07-03-22 05:25 pm Bengaluru Correspondent ಕರ್ನಾಟಕ
ಬೆಂಗಳೂರು, ಮಾ.7: ತಮಿಳುನಾಡಿನಲ್ಲಿ ತೀವ್ರ ಗದ್ದಲ ಸೃಷ್ಟಿಸಿರುವ ಮುಜರಾಯಿ ಸಚಿವ ಶೇಖರ್ ಬಾಬು ಅವರ ಮಗಳು ತನ್ನ ಪ್ರಿಯಕರನ ಜೊತೆಗೆ ಪರಾರಿಯಾಗಿರುವ ಪ್ರಕರಣ ಈಗ ಬೆಂಗಳೂರು ತಲುಪಿದೆ. ಯುವತಿ ಹಾಗೂ ಆಕೆಯ ಪ್ರಿಯಕರ ಸತೀಶ್ ಕುಮಾರ್ ಕನ್ನಡ ಸಂಘಟನೆಗಳ ಆಶ್ರಯ ಪಡೆದು ಬೆಂಗಳೂರಿನಲ್ಲಿ ಪೊಲೀಸರ ಮುಂದೆ ಕಾಣಿಸಿಕೊಂಡಿದ್ದಾರೆ.
ಸಚಿವರ ಮಗಳನ್ನು ಯುವಕ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಾಲಸ್ವಾಮಿ ಮಠದಲ್ಲಿ ಮದುವೆಯಾಗಿದ್ದಾರೆ. ಆನಂತರ ಕನ್ನಡ ಸಂಘಟನೆಗಳ ನಾಯಕರ ಆಶ್ರಯ ಪಡೆದು ಬೆಂಗಳೂರು ಕಮಿಷನರ್ ಕಚೇರಿಗೆ ಆಗಮಿಸಿದ್ದಾರೆ. ತಮಗೆ ಜೀವ ಬೆದರಿಕೆ ಇದ್ದು ರಕ್ಷಣೆ ಕೊಡಿ ಎಂದು ಬೇಡಿಕೆ ಇಟ್ಟು ದೂರು ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಯುವತಿ, ನಮಗೆ ತಮಿಳುನಾಡು ಪೊಲೀಸ್ ಮೇಲೆ ನಂಬಿಕೆ ಇಲ್ಲ. ಹಾಗಾಗಿ ಕರ್ನಾಟಕಕ್ಕೆ ಬಂದಿದ್ದೇವೆ. ಅಲ್ಲಿಗೆ ಹೋದ್ರೆ ನಮ್ಮನ್ನು ಕೊಲೆ ಮಾಡ್ತಾರೆ. ಯೂ ಟ್ಯೂಬ್ ನಲ್ಲಿ ಕನ್ನಡ ಸಂಘಟನೆ ಸರ್ಚ್ ಮಾಡಿದ್ದೆ. ಆಗ ಭರತ್ ಶೆಟ್ಟಿ, ಮಧುಗಿರಿ ಮೋದಿ ಅಂತ ತೋರಿಸ್ತು. ಹಾಗೆ ಅವರನ್ನ ಸಂಪರ್ಕ ಮಾಡಿ ಬಂದಿದ್ದೇನೆ ಎಂದು ಹೇಳಿದರು.
ತಮಿಳುನಾಡು ಸಿಎಂ ಸ್ಟಾಲಿನ್ ಅವರ ರೈಟ್ ಹ್ಯಾಂಡ್ ಆಗಿದ್ದಾರೆ ನನ್ನ ತಂದೆ. ತಂದೆ ಶೇಖರ್ ಬಾಬು ಹೇಳಿದ ಹಾಗೆ ಪೊಲೀಸರು ಕೇಳ್ತಾರೆ. ಈಗಾಗಲೇ ಸತೀಶ್ ಕುಮಾರ್ ಮನೆಯವರನ್ನು ಅರೆಸ್ಟ್ ಮಾಡಿದ್ದಾರೆ. ಇಲ್ಲಿ ಕಮಿಷನರ್ ಸಂಜೆ ಬರಲು ಹೇಳಿದ್ದಾರೆ. ನಾನು ಎಂಬಿಬಿಎಸ್ ಮಾಡಿದೀನಿ, ಸತೀಶ್ ಟ್ರಾನ್ಸ್‌ಪೋರ್ಟ್ ಬ್ಯುಸಿನೆಸ್ ಮಾಡ್ತಿದಾನೆ. ನಮ್ಮನ್ನು ಬದುಕಲು ಬಿಡಿ ಎಂದು ಯುವತಿ ಅಂಗಲಾಚಿದ್ದಾಳೆ.
Tamil Nadu Minister Sekar Babu daughter seeks help of Karnataka police after she gets married to her lover. She flee with her lover to Bangalore and has seeked help of Kannada Pro Organisations.
06-02-25 07:55 pm
Bangalore Correspondent
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
06-02-25 05:37 pm
HK News Desk
ಅಮೆರಿಕದಲ್ಲಿ ಅಕ್ರಮ ವಲಸಿಗರ ಗಡೀಪಾರು ; ಪ್ರಧಾನಿ ಮೋ...
06-02-25 02:21 pm
Kerala Suicide, Ragging: ಕೇರಳದಲ್ಲಿ 15ರ ಬಾಲಕ ಮ...
04-02-25 10:49 pm
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
06-02-25 10:16 pm
Mangalore Correspondent
Prasad Attavar, Saloon Attack, Mangalore: ಮಸಾ...
05-02-25 10:51 pm
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
07-02-25 11:55 am
Mangalore Correspondent
Mangalore crime, blackmail Temple priest: ಅರ್...
06-02-25 09:32 pm
Kalaburagi, Reels,weapons, Crime: ಕಲಬುರಗಿ ; ಶ...
06-02-25 04:35 pm
Raichur Rape, Crime: ರಾಯಚೂರಿನಲ್ಲಿ ಎರಡನೇ ಕ್ಲಾಸ...
06-02-25 12:00 pm
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm