ಬ್ರೇಕಿಂಗ್ ನ್ಯೂಸ್
12-03-22 10:49 am HK Desk news ಕರ್ನಾಟಕ
ತಮಕೂರು, ಮಾ.12: ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದ್ದು ನಿರಾಸೆಯೂ ಆಗಿದೆ. ದೇಶದಲ್ಲಿ ಸಾಮಾನ್ಯ ಜನರ ಬದುಕಿಗೆ ತೊಂದರೆ ಆಗುತ್ತಿದೆ ಎಂಬ ವಾತಾವರಣ ಇದೆ. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಯಿದೆ. ಇಂಥ ಸಂದರ್ಭದಲ್ಲೂ ಜನರು ಬಿಜೆಪಿಗೆ ಮತ ಹಾಕುತ್ತಾರೆ ಎಂದರೆ ಏನೋ ಕಾರಣ ಇರಬಹುದು. ಅಥವಾ ಕಾಂಗ್ರೆಸ್ ಚುನಾವಣೆ ಮಾಡುವ ರೀತಿಯೇ ಸರಿ ಇಲ್ಲವೋ ಏನೋ ಗೊತ್ತಾಗುತ್ತಿಲ್ಲ. ಸೋಲಿಗೆ ನಾವು ಕಾರಣ ಹುಡುಕಬೇಕಾಗಿದೆ.
ಹೀಗೆಂದು ಪ್ರತಿಕ್ರಿಯಿಸಿದ್ದಾರೆ, ಮಾಜಿ ಸಚಿವ ಪರಮೇಶ್ವರ್. ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದಲ್ಲಿ ಬಿಜೆಪಿ, ಎಸ್ ಪಿಗಿಂತ ಹೆಚ್ಚು ರ್ಯಾಲಿ ಮಾಡಿದ್ರು. ಜನರನ್ನು ತಲುಪುವ ಪ್ರಯತ್ನ ಮಾಡಿದ್ರು. ಆದರೂ ಮತ ಬೇರೆಯವರಿಗೆ ಹೋಗಿದೆ. ಇದನ್ನು ನಾವು ಆಂತರಿಕವಾಗಿ ವಿಶ್ಲೇಷಣೆ ಮಾಡಬೇಕು.
2024 ರ ಲೋಕಸಭಾ ಚುನಾವಣೆ ಟರ್ನಿಂಗ್ ಪಾಯಿಂಟ್. ಈ ದೇಶದ ಅಭಿವೃದ್ಧಿ, ಬೆಳವಣಿಗೆ ಕಾರಣದಿಂದ 2024ರ ಚುನಾವಣೆ ಬಹಳ ಮುಖ್ಯ.. ಅಷ್ಟರ ಒಳಗೆ ನಾವು ನಮ್ಮ ಮನೆಯನ್ನು ಸರಿಪಡಿಸಿಕೊಳ್ಳಬೇಕು. ನಮ್ಮ ತಪ್ಪಗಳನ್ನು ತಿದ್ದಿಕೊಳ್ಳಬೇಕು. ಸ್ಥಳೀಯವಾಗಿ ಲೀಡರ್ ಶಿಪ್ ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು.
ಇವಿಎಂ ಬಗ್ಗೆ ನನಗೆ ಅನುಮಾನ ಈಗಲೂ ಇದೆ. ಇವಿಎಂ ಅನ್ನು ಮ್ಯಾನುಪ್ಲೆಟ್ ಮಾಡುವ ಟೆಕ್ನಾಲಜಿ ಅವರು ಇಟ್ಟಕೊಂಡಿದ್ದಾರೆ. ಬೇರೆ ಬೇರೆ ದೇಶದಿಂದ ಅದನ್ನು ಆಪರೇಟ್ ಮಾಡುತ್ತಾರೆ ಎಂದು ಕೇಳಿದ್ದೇವೆ. ನನಗೂ ಕೂಡ ಅನೇಕ ಬಾರಿ ಆ ರೀತಿ ಅನಿಸಿದೆ. ತಂತ್ರಜ್ಞರು ಹೇಳಿಕೆ ನೋಡಿದರೆ ಇವಿಎಂ ಹ್ಯಾಕ್ ಆಗಿರಬಹುದು ಅನಿಸುತ್ತದೆ. ಆದರೆ ನಾವು ಅದನ್ನು ಕೇವಲ ಆರೋಪ ಅಷ್ಟೇ ಮಾಡಬಹುದು,
ಸ್ಪಷ್ಟವಾಗಿ ನಮಗೂ ಗೊತ್ತಿಲ್ಲ. ಉತ್ತರ ಪ್ರದೇಶದಲ್ಲೂ ಹ್ಯಾಕ್ ಆಗಿರಬಹುದು. ಯಾಕೆ ಆಗಬಾರದು, ಉತ್ತರ ಪ್ರದೇಶ 80 ಲೋಕಸಭಾ ಸದಸ್ಯರಿರುವ ರಾಜ್ಯ. ಹಾಗಾಗಿ ಆ ರಾಜ್ಯದಲ್ಲಿ ಆಡಳಿತಕ್ಕೆ ಬಂದರೆ ಸಂಸತ್ ಚುನಾವಣೆ ಸುಲಭವಾಗುತ್ತದೆ ಎನ್ನುತ್ತಾರೆ. ಹಾಗಾಗಿ ಅಲ್ಲಿ ಕೂಡ ಯಾಕೆ ಹ್ಯಾಕ್ ಮಾಡಿರಬಾರದು ಎಂಬ ಪ್ರಶ್ನೆನೂ ಬರುತ್ತದೆ. ಹೀಗಾಗಿ ಚುನಾವಣೆಗೆ ಬ್ಯಾಲೇಟ್ ಪೇಪರ್ ಮತ್ತೆ ತರಬೇಕು ಎಂದು ಒತ್ತಾಯ ಮಾಡುತ್ತೇನೆ..
ಡಿಕೆ ಶಿವಕುಮಾರ್ ಗೆ ಫ್ರೀ ಹ್ಯಾಂಡ್ ಸಿಕ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ಡಿ.ಕೆ ಶಿವಕುಮಾರ್ ಸ್ವತಂತ್ರವಾಗಿದ್ದಾರೆ. ಅವರಿಗೆ ಯಾವುದೇ ಕಂಟ್ರೋಲ್ ಇಲ್ಲ,ಅವರು ಒಳ್ಳೆ ಕೆಲಸ ಮಾಡುತಿದ್ದಾರೆ. ಪ್ರಮುಖ ನಿರ್ಧಾರವನ್ನು ಎಲ್ಲರ ಜೊತೆ ಚರ್ಚೆ ಮಾಡಿ ಮಾಡುತ್ತಾರೆ.. ಮೇಕೆದಾಟು ಪಾದಯಾತ್ರೆ ಮಾಡುವಾಗ ಎಲ್ಲರ ಜೊತೆ ಚರ್ಚೆ ಮಾಡಿದ್ದಾರೆ. ಕಾಂಗ್ರೆಸ್ ಸಿಎಂ ಅಭ್ಯರ್ಥಿ ವಿಚಾರ ಅಪ್ರಸ್ತುತ. ಎಲ್ಲರೂ ಮೊದಲು ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.
Tumakuru Need to find the reason for Congress losing elections need to correct our mistakes says Congress leader G Parameshwara
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm