ಇಬ್ಬರು ಪತ್ನಿಯರಿಂದ ದೂರ ; ಏಕಾಂಗಿ ಜೀವನದಿಂದ ಬೇಸತ್ತ ವ್ಯಕ್ತಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ 

26-03-22 03:52 pm       Bengaluru Correspondent   ಕರ್ನಾಟಕ

ಇಬ್ಬರು ಹೆಂಡತಿಯರು ಮತ್ತು ಮಗನಿಂದ ದೂರವಾಗಿ ಏಕಾಂಗಿ ಜೀವನ ನಡೆಸುತ್ತಿದ್ದ ನಿವೃತ್ತ ನೌಕರನೊಬ್ಬ ಜೀವನದಲ್ಲಿ ಜಿಗುಪ್ಸೆಗೊಂಡು ಅಪಾರ್ಟ್​ಮೆಂಟ್​ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಲಹಂಕದಲ್ಲಿ ನಡೆದಿದೆ. 

ಬೆಂಗಳೂರು, ಮಾ.26 : ಇಬ್ಬರು ಹೆಂಡತಿಯರು ಮತ್ತು ಮಗನಿಂದ ದೂರವಾಗಿ ಏಕಾಂಗಿ ಜೀವನ ನಡೆಸುತ್ತಿದ್ದ ನಿವೃತ್ತ ನೌಕರನೊಬ್ಬ ಜೀವನದಲ್ಲಿ ಜಿಗುಪ್ಸೆಗೊಂಡು ಅಪಾರ್ಟ್​ಮೆಂಟ್​ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಲಹಂಕದಲ್ಲಿ ನಡೆದಿದೆ. 

ಸಿಂಗನಾಯಕನಹಳ್ಳಿ ನಿವಾಸಿ ರಾಜೀವ್​(62) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಯಲಹಂಕದ ವ್ಹೀಲ್​ ಆ್ಯಂಡ್​ ಆಕ್ಸಿಲ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ನಿವೃತ್ತರಾಗಿದ್ದರು. ಇಬ್ಬರು ಹೆಂಡತಿಯರಿದ್ದು, ಮೊದಲ ಹೆಂಡತಿ ಕಾರಣಾಂತರದಿಂದ ವಿಚ್ಛೇದನ ಪಡೆದಿದ್ದರು. ಬಳಿಕ ಎರಡನೇ ಮದುವೆಯಾಗಿದ್ದ ರಾಜೀವ್, ಒಬ್ಬ ಮಗನನ್ನು ಹೊಂದಿದ್ದರು. ಬಳಿಕ ಅವರಿಂದಲೂ ದೂರ ಉಳಿದು 4 ತಿಂಗಳಿಂದ ಸಿಂಗನಾಯಕನಹಳ್ಳಿಯ ಗೋದ್ರೇಜ್​ ಅಪಾರ್ಟ್​ಮೆಂಟ್​ನಲ್ಲಿ ಏಕಾಂಗಿಯಾಗಿ ವಾಸ ಮಾಡಿಕೊಂಡಿದ್ದರು.

ರಾಜೀವ್​ ಒಂಟಿತನದಿಂದ ಬೇಸತ್ತು ಅಪಾರ್ಟ್​ಮೆಂಟ್​ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ದುರಂತ ನಡೆದ ಸ್ಥಳಕ್ಕೆ ರಾಜಾನುಕುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

A retired employee who has been living alone with two wives and a son has moved to a world that has not been ruled out. An incident occurred at Singhanayakanahalli in Yelahanka in which a man became disgusted with life and jumped out of an apartment. Rajeev (62) is a suicidal man.He was retired from work at Yelhanka Wheel and Axel Company. In addition, he has two wives, with the first wife divorced. He is married second and has a son. He stayed away from Godrej apartments in Singanayaka Nahalli for 4 months.