ಮದ್ರಸಾದಲ್ಲಿ ದೇಶ ವಿರೋಧಿ ಕಲಿಕೆ, ಅಲ್ಲಿ ಕಲಿತವರು ಭಾರತ್ ಮಾತಾ ಕಿ ಜೈ ಹೇಳುತ್ತಾರೆಯೇ ? ಮದ್ರಸಾ ಶಿಕ್ಷಣವನ್ನು ನಿಷೇಧಿಸಿ !  

26-03-22 10:51 pm       Bengaluru Correspondent   ಕರ್ನಾಟಕ

ಮದ್ರಸಾದಲ್ಲಿ ದೇಶ ವಿರೋಧಿ ವಿಚಾರಗಳನ್ನು ಕಲಿಸಲಾಗುತ್ತಿದ್ದು, ಅಲ್ಲಿ ಕಲಿಯುವ ಮಂದಿ ದೇಶ ವಿರೋಧಿಗಳಾಗಿ ಪರಿವರ್ತನೆ ಆಗುತ್ತಿದ್ದಾರೆ. ಹಾಗಾಗಿ ಇಂಥ ಮದ್ರಸಾ ಕಲಿಕೆಯನ್ನು ರಾಜ್ಯದಲ್ಲಿ ನಿಷೇಧ ಮಾಡಬೇಕು ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಆಗ್ರಹಿಸಿದ್ದಾರೆ.

ಬೆಂಗಳೂರು, ಮಾ.26: ಮದ್ರಸಾದಲ್ಲಿ ದೇಶ ವಿರೋಧಿ ವಿಚಾರಗಳನ್ನು ಕಲಿಸಲಾಗುತ್ತಿದ್ದು, ಅಲ್ಲಿ ಕಲಿಯುವ ಮಂದಿ ದೇಶ ವಿರೋಧಿಗಳಾಗಿ ಪರಿವರ್ತನೆ ಆಗುತ್ತಿದ್ದಾರೆ. ಹಾಗಾಗಿ ಇಂಥ ಮದ್ರಸಾ ಕಲಿಕೆಯನ್ನು ರಾಜ್ಯದಲ್ಲಿ ನಿಷೇಧ ಮಾಡಬೇಕು ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಆಗ್ರಹಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರನ್ನು ನಾನು ಆಗ್ರಹಿಸುತ್ತೇನೆ. ಹಿಂದು ಮತ್ತು ಕ್ರಿಸ್ತಿಯನ್ನರಿಗೆ ಇತರ ಶಾಲೆಗಳಲ್ಲಿ ಕಲಿಸುವುದೇ ಸಾಕಾಗುತ್ತದೆ ಎಂದಿರುವಾಗ ಇವರಿಗೆ ಮಾತ್ರ ಯಾಕೆ ಮದ್ರಸಾ ಶಿಕ್ಷಣ ಬೇಕು. ಅಲ್ಲಿ ದೇಶ ವಿರೋಧಿ ವಿಚಾರಗಳನ್ನೇ ಕಲಿಸುತ್ತಿದ್ದಾರೆ. ಒಂದೋ ಅಲ್ಲಿ ಇತರ ಶಾಲೆಗಳಲ್ಲಿ ಕಲಿಸುವ ಪಠ್ಯಗಳನ್ನಷ್ಟೇ ಕಲಿಸಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಅವನ್ನು ನಿಷೇಧ ಮಾಡಬೇಕು ಎಂದು ರೇಣುಕಾಚಾರ್ಯ ಹೇಳಿದ್ದಾರೆ.

Karnataka: Rebellion by Yediyurappa loyalists after being dropped from  Bommai's Cabinet- The New Indian Express

hijab controversy - Madhya Pradesh varsity orders probe after right-wing  activists submit video of girl wearing hijab offering namaz in classroom -  Telegraph India

ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ ರೇಣುಕಾ, ನಾನು ಕಾಂಗ್ರೆಸ್ ನಾಯಕರ ಬಳಿ ಕೇಳಲು ಬಯಸುತ್ತೇನೆ. ಹಿಜಾಬ್ ವಿವಾದ ಸೃಷ್ಟಿ ಮಾಡಿದ್ದು ಯಾರು.. ನೀವು ಮಾಡಿದ್ದೇ ಅಥವಾ ನಾವು ಮಾಡಿದ್ದೇ.. ನಿಮಗೆ ವೋಟ್ ಬ್ಯಾಂಕ್ ರಾಜಕೀಯವೇ ಮುಖ್ಯವಾಗಿದೆ. ನಮಗೆ ಮದ್ರಸಾ ಶಿಕ್ಷಣ ಯಾಕೆ ಬೇಕು ಎಂಬ ಬಗ್ಗೆ ಕಾಂಗ್ರೆಸಿಗರ ನಿಲುವು ಏನು ತಿಳಿಸಬೇಕು. ಮದ್ರಸಾ ಶಿಕ್ಷಣದ ಉದ್ದೇಶ ಏನಿದೆ ಹೇಳಿ.. ಅಲ್ಲಿ ಕಲಿತ ಮಕ್ಕಳು ನಾಳೆ ದೇಶ ವಿರೋಧಿಗಳೇ ಆಗುತ್ತಾರೆ. ಅವರೆಂದೂ ಭಾರತ್ ಮಾತಾ ಕೀ ಜೈ ಎಂದು ಹೇಳುವುದಿಲ್ಲ ಎಂದು ಹೇಳಿದ್ದಾರೆ.

20% of Karnataka high court judges' posts vacant | Bengaluru News - Times  of India

ಕೆಲವು ದೇಶ ವಿರೋಧಿ ಸಂಘಟನೆಗಳು ಹೈಕೋರ್ಟ್ ತೀರ್ಪನ್ನು ವಿರೋಧಿಸಿ ಕರ್ನಾಟಕ ಬಂದ್ ಮಾಡಲು ಕರೆ ಕೊಟ್ಟಿದ್ದವು. ಇದನ್ನು ಕರ್ನಾಟಕ ಸರಕಾರ ಸರಿ ಎಂದು ಒಪ್ಪಿಕೊಳ್ಳುತ್ತಾ.. ಇದೇನು ಪಾಕಿಸ್ಥಾನವೋ, ಬಾಂಗ್ಲಾದೇಶವೋ ಅಥವಾ ಬೇರಾವುದೋ ಇಸ್ಲಾಮಿಕ್ ದೇಶವೋ.. ಇದನ್ನು ನಾವು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಕಾಂಗ್ರೆಸಿಗರು ಕರ್ನಾಟಕ ಬಂದ್ ಕರೆಯನ್ನು ಸದನದಲ್ಲಿ ಸಮರ್ಥಿಸಿಕೊಂಡಿದ್ದಾರೆ ಎಂದು ರೇಣುಕಾ ಟೀಕಿಸಿದ್ದಾರೆ.

ರೇಣುಕಾಚಾರ್ಯ ತನ್ನ ಇಬ್ಬರು ಮಕ್ಕಳ ಹೆಸರಲ್ಲಿ ದಲಿತ ಕೋಟಾದಲ್ಲಿ ಸೌಲಭ್ಯ ಪಡೆಯಲು ನಕಲಿ ಜಾತಿ ಸರ್ಟಿಫಿಕೇಟ್ ಮಾಡಿಕೊಂಡಿದ್ದಾರೆಂದು ಕಾಂಗ್ರೆಸ್ ಆರೋಪಿಸಿದ್ದು, ಇದರ ಬಗ್ಗೆ ಕ್ರಿಮಿನಲ್ ಕೇಸ್ ದಾಖಲಿಸಲು ಸದನದಲ್ಲಿ ಆಗ್ರಹ ಮಾಡಿತ್ತು. ಆದರೆ ಈ ಬಗ್ಗೆ ಸದನದಲ್ಲಿಯೇ ಪ್ರತಿಕ್ರಿಯೆ ನೀಡಿದ್ದ ರೇಣುಕಾಚಾರ್ಯ, ನಾನು ಯಾವತ್ತೂ ಅಂಥ ಕೃತ್ಯ ಮಾಡಿಲ್ಲ. ಮಕ್ಕಳ ಹೆಸರಲ್ಲಿ ನಾನು ಅಂಥ ಕೆಲಸ ಮಾಡಿದ್ದಲ್ಲಿ ನನ್ನನ್ನು ನೇಣಿಗೆ ಹಾಕಿ. ಕಾಂಗ್ರೆಸಿಗರು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಹೇಳಿದ್ದರು.

Karnataka MLA MP Renukacharya has urged Chief Minister Basavaraj Bommai and Primary and Secondary Education Minister to ban madrasas because anti-national lessons are being taught there.