ಬ್ರೇಕಿಂಗ್ ನ್ಯೂಸ್
27-03-22 08:22 pm HK Desk news ಕರ್ನಾಟಕ
ಬಾಗಲಕೋಟ, ಮಾ.27 : ಸಿದ್ದರಾಮಯ್ಯರಿಗೆ ಹಿಂದು ಧರ್ಮದ ಬಗ್ಗೆ ನಂಬಿಕೆ ಇಲ್ಲ, ನೇರ ಹಿಂದು ವಿರೋಧಿ. ಯಾಕಂದ್ರೆ ಮುಂದೆ ಮುಸಲ್ಮಾನರ ಕ್ಷೇತ್ರದಿಂದ ಗೆಲ್ಲಬೇಕು. ಈ ಬಾರಿ ಬಾದಾಮಿಗೆ ಬರಲ್ಲ. ಚಾಮುಂಡೇಶ್ವರಿ ಕ್ಷೇತ್ರವೂ ಸೋತಿದ್ದು ಅಲ್ಲಿ ಹೋಗಲ್ಲ. ಸುಮ್ನೆ ಅವರು ಕರೀತಾರೆ, ಇವ್ರು ಕರೀತಾರೆ ಎಂದು ಹೇಳಿ ನಾಟಕ ಮಾಡ್ತಾರೆ. ಇವ್ರಿಗೆ ಸ್ವಂತ ಕ್ಷೇತ್ರವೇ ಇಲ್ಲ.. ಅದಕ್ಕಾಗಿ ಉಳಿದಿದ್ದು ಒಂದು ಜಮೀರ್ ಅಹ್ಮದ್ ಕ್ಷೇತ್ರ ಚಾಮರಾಜನಗರ. ಅಲ್ಲಿ ಮುಸಲ್ಮಾನರು ಜಾಸ್ತಿ ಇದ್ದಾರೆ, ಅಲ್ಲಿ ನಿಂತ್ಕೊಂಡು ಗೆಲ್ಲಬೇಕು ಅಂತ ಒಂದೇ ಕಾರಣಕ್ಕೆ ಹಿಂದು ಸಮಾಜ ಟೀಕೆ ಮಾಡ್ತಾ ಹೊರಟಿದ್ದಾರೆ, ಇದನ್ನ ಅವರೇ ಅನುಭವಿಸ್ತಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಹಿಜಬ್ ಬಗ್ಗೆ ಕೋರ್ಟ್ ತೀರ್ಪು ಬಂದರೂ ಮುಸಲ್ಮಾನ್ ವಿದ್ಯಾರ್ಥಿಗಳು, ನಾವು ಶಿಕ್ಷಣವನ್ನೇ ಬಿಡ್ತೀವಿ ಆದ್ರೆ ಧರ್ಮ ಬಿಡಲ್ಲ ಅಂದ್ರು. ಅವರಿಗೆ ಬುದ್ದಿಮಾತಾದ್ರು ಸಿದ್ದರಾಮಯ್ಯ ಹೇಳಬೇಕಿತ್ತಲ್ಲ. ನೀವು ಹಾಗೆ ಮಾಡಬೇಡಿ, ಶಿಕ್ಷಣ ಮುಖ್ಯ ಅಂತಾ ಹೇಳಬೇಕಿತ್ತಲ್ವಾ, ಒಂದೇ ಒಂದು ಮಾತು ಹೇಳಿಲ್ಲ.. ಯಾಕೆ ಮುಸ್ಲಿಂ ಓಟು ಕಳಕೊಳ್ಳೋದು ಅಂತ ಹಾಗೆ ಹೇಳಿಲ್ಲ. ಈ ರೀತಿ ಮಾಡಿ ದೇಶದಲ್ಲಿ ಕಾಂಗ್ರೆಸ್ ನಿರ್ನಾಮ ಆಗ್ತಾ ಹೋಗಿದೆ. ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಜೀವ ಕುಟು...ಕುಟು ಅಂತಿದೆ. ಯಾವಾಗ ಇದು ಸಾಯುತ್ತೋ ಗೊತ್ತಿಲ್ಲ. ಸಿದ್ದರಾಮಯ್ಯ ನಂತವರು ಒಬ್ಬರು ಸಾಕು ಪಕ್ಷ ನಿರ್ನಾಮ ಆಗೋದಕ್ಕೆ.
ಇವರು ಮೊದಲು ಕೋರ್ಟ್ ಗೆ ಗೌರವ ಕೊಡೋದನ್ನ ಕಲಿತುಕೊಳ್ಳಲಿ. ಸಾಧು ಸಂತರ ಬಗ್ಗೆ ನೀವು ಮಾಡಿರೋ ಹೇಳಿಕೆ, ಅಕ್ಷ್ಯಮ್ಯ ಅಪರಾಧ. ಜರಾಸಂಧನಿಗೆ ನೂರು ತಪ್ಪು ಮಾಡಿದಾಗ ಶಿಕ್ಷೆ ಆಯ್ತು ಅಂತಾರಲ್ಲ ಹಾಗೆ, ಇವರದ್ದೂ ನೂರು ತಪ್ಪಾಯ್ತು. ಶಿಕ್ಷೆ ನೀಡಲು ಜನ ಕಾದಿದ್ದಾರೆ.
ಇವರು ರಾಜಕೀಯ ನಿವೃತ್ತಿ ತಗೊಳ್ಳೋದೇ ಉತ್ತಮ. ಇಲ್ಲವೇ ಅವರನ್ನ ಕಾಂಗ್ರೆಸ್ ಪಕ್ಷದಿಂದ ಕಿತ್ತು ಬಿಸಾಕ್ಬೇಕು. ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಅಷ್ಟು ಶಕ್ತಿ ಇದ್ರೆ ಇದನ್ನು ಮಾಡಲಿ. ಇಲ್ಲಾಂದ್ರೆ, ಕನಿಷ್ಟ ನಿಮ್ಮ ಸೋನಿಯಾ ಅಥವಾ ರಾಹುಲ್ ಗಾಂಧಿಗಾದ್ರು ಹೇಳಿ ವಜಾ ಮಾಡಿಸಿ. ಇಡೀ ರಾಜ್ಯದಲ್ಲಿ ಸಿದ್ದರಾಮಯ್ಯ ಜೊತೆ ಒಬ್ಬ ಕಾಂಗ್ರೆಸ್ ನಾಯಕ ಇಲ್ಲಾಂದ್ರೆ ನೀವೇಕೆ ರಾಜಕಾರಣ ಮಾಡ್ತಿದ್ದೀರಿ ಎಂದು ಸಿದ್ದುಗೆ ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.
ಶಾಲಾ ಸಮವಸ್ತ್ರ ವಿಚಾರವಾಗಿ ಸ್ವಾಮೀಜಿಗಳ ಉಡುಗೆಗೆ ಕೈ ಹಾಕಿ ಸಿದ್ದರಾಮಯ್ಯ ಕೈ ಸುಟ್ಟುಕೊಂಡ್ರಾ ಎಂಬ ಪ್ರಶ್ನೆಗೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಪ, ಪಾಪ ಇದನ್ನೆಲ್ಲ ನಂಬಲ್ಲ ಸಿದ್ದರಾಮಯ್ಯ. ಗೋಮಾಂಸ ತಿಂದೇ ದೇವಸ್ಥಾನಕ್ಕೆ ಹೋಗ್ತೀನಿ ನಾನು, ನೀವೇನು ಕೇಳೋರು ಎಂದವರು ಅವ್ರು. ಈ ಮಾತನ್ನ ಹೇಳಿದವರು ದೇವರು, ಪಾಪ, ಸ್ವಾಮೀಜಿಗಳನ್ನ ನಂಬುತ್ತಾರೆಯೇ.. ಪ್ರಜಾಪ್ರಭುತ್ವ ನಂಬ್ತೇನೆ, ಸಂವಿಧಾನ ನಂಬ್ತೇನೆ ಅಂತಾ ಹೇಳಿದ ವ್ಯಕ್ತಿ, ಇಂದು ಕೋರ್ಟ್ ಹಾಗೂ ಸಂವಿಧಾನಕ್ಕೂ ನೀವು ಮೋಸ ಮಾಡಿದ್ರಿ ಅಲ್ವಾ ಎಂದು ಕುಟುಕಿದ್ದಾರೆ.
A day after senior Congress leader S Siddaramiah made remarks on the attire of Hindu pontiffs, BJP leaders launched a broadside against him.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 01:43 pm
HK News Desk
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm