ಬ್ರೇಕಿಂಗ್ ನ್ಯೂಸ್
05-04-22 02:58 pm Bengaluru Correspondent ಕರ್ನಾಟಕ
ಬೆಂಗಳೂರು, ಎ.5 : ಜಿಮ್‌ನಲ್ಲಿ ವರ್ಕ್ ಔಟ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಯುವತಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿ ಪೋಸ್ಟ್ ಮಾರ್ಟಂ ವರದಿ ಬಂದಿದ್ದು ಸಾವಿನ ಅಸಲಿ ಕಾರಣವನ್ನು ಬಿಚ್ಚಿಟ್ಟಿದೆ.
ಬೈಯಪ್ಪನಹಳ್ಳಿಯಲ್ಲಿ ನೆಲೆಸಿದ್ದ ಮಂಗಳೂರು ಮೂಲದ ವಿನಯಾ ಕುಮಾರಿ (35) ಎಂಬ ಮಹಿಳೆ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದಾಗಲೇ ಸಾವು ಕಂಡಿದ್ದು ಭಾರೀ ಶಂಕೆ, ಕುತೂಹಲಕ್ಕೆ ಕಾರಣವಾಗಿತ್ತು. ನಟ ಪುನೀತ್ ರಾಜಕುಮಾರ್ ಕೂಡ ಜಿಮ್ ನಲ್ಲಿ ವರ್ಕೌಟ್ ಬಳಿಕ ಕುಸಿದು ಬಿದ್ದು ಮೃತಪಟ್ಟಿದ್ದರಿಂದ ಮಹಿಳೆಯ ಸಾವು ಕೂಡ ಅದೇ ರೀತಿ ಆಗಿದ್ದು ಜನರಲ್ಲಿ ಜಿಮ್ ಬಗ್ಗೆ ಸಂಶಯಗಳು ಮೂಡಿದ್ದವು.
ಮಹಿಳೆ ಸಾವಿನ ಬಗ್ಗೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಿಮ್‌ನಲ್ಲಿ ಭಾರ ಎತ್ತುತ್ತಿದ್ದಾಗಲೇ ಕುಸಿದು ಬೀಳುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು. ಇದೀಗ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು ಮೆದುಳಿನ ರಕ್ತನಾಳದಲ್ಲಿ ಒತ್ತಡ ಹೆಚ್ಚಿದ್ದರಿಂದಾಗಿ ಅವು ಛಿದ್ರಗೊಂಡು ಸೆರೆಬ್ರಲ್ ಹೆಮರೇಜ್ ಆಗಿದ್ದು ಸಾವಿಗೆ ಕಾರಣ ಎನ್ನುವ ಮಾಹಿತಿಯನ್ನು ವೈದ್ಯರು ನೀಡಿದ್ದಾರೆ.
ಯುವತಿ ಸಾವಿನ ಪ್ರಕರಣದಲ್ಲಿ ಬೆಂಗಳೂರು ಪೂರ್ವ ವಿಭಾಗ ಡಿಸಿಪಿ ಡಾ. ಭೀಮಾಶಂಕರ್ ಗುಳೇದ ಹೇಳಿಕೆ ನೀಡಿದ್ದು ವೈದ್ಯರ ವರದಿ ಆಧರಿಸಿ ವಿವರಣೆ ನೀಡಿದ್ದಾರೆ. ಜಿಮ್‌ನಲ್ಲಿ ವರ್ಕ್ ಔಟ್ ಮಾಡುವ ವೇಳೆ ಭಾರದ ವಸ್ತುಗಳನ್ನು ಲಿಫ್ಟ್ ಮಾಡಿದ್ದಾರೆ. ಇದರಿಂದ ರಕ್ತದ ಒತ್ತಡ ಹೆಚ್ಚಾಗಿ ಮೆದುಳಿನಲ್ಲಿ ರಕ್ತನಾಳಗಳ ಮೇಲೆ ಒತ್ತಡ ಬಿದ್ದಿದೆ. ಮೆದುಳಿನ ರಕ್ತನಾಳಗಳು ಒಡೆದು, ರಕ್ತಸ್ರಾವವಾಗಿದ್ದರಿಂದ ಸ್ಥಳದಲ್ಲಿಯೇ ಕುಸಿದು ಬಿದ್ದು ಕೋಮಾಗೆ ಹೋಗಿದ್ದಾರೆ. ಇದರ ಪರಿಣಾಮ ಸಹಜ ಸ್ಥಿತಿಗೆ ಬಾರದೆ ಯುವತಿ ಸಾವನ್ನಪ್ಪಿದ್ದಾಗಿ ವೈದ್ಯರು ಉಲ್ಲೇಖಿಸಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.
ಜಿಮ್ ನಲ್ಲಿ ನಿರಂತರ ವರ್ಕೌಟ್ ಮಾಡುವ ಸಂದರ್ಭದಲ್ಲಿ ದೇಹಕ್ಕೆ ಒತ್ತಡ ಬೀಳುವುದು ಸಹಜ. ಆದರೆ ಮೆದುಳಿನ ರಕ್ತನಾಳಗಳು ಒಡೆದು ಹೋಗುವಂತಹ ಸ್ಥಿತಿ ಎದುರಾಗಿರುವುದು ಜಿಮ್ ವರ್ಕೌಟ್ ಬಗ್ಗೆ ಸಂಶಯ ಏಳುವಂತಾಗಿದೆ. ವಿಪರೀತ ವರ್ಕೌಟ್ ಕಾರಣವೇ, ಆಧುನಿಕ ಜೀವನ ಪದ್ಧತಿ ಕಾರಣವೇ ಅನ್ನೋದನ್ನು ವೈದ್ಯರೇ ಖಚಿತ ಪಡಿಸಬೇಕು. ಸದ್ರಿ ಪ್ರಕರಣದಲ್ಲಿ ಯುವತಿ ರಾತ್ರಿ ಶಿಫ್ಟ್ ಮುಗಿಸಿ ಬಂದು ವಿಶ್ರಾಂತಿ ಪಡೆಯುವ ಬದಲು ಜಿಮ್ ಹೋಗಿದ್ದರು. ಇದರಿಂದಲೂ ಹೆಚ್ಚುವರಿ ಒತ್ತಡ ಮೆದುಳಿನ ಮೇಲೆ ಬಿದ್ದಿರುವ ಸಾಧ್ಯತೆಯಿದೆ.
Investigation into the sudden death of a 44-year-old woman at a gym in GM Palya, near CV Raman Nagar, on March 26 has revealed the cause as a rupture in the aneurysm of her brain.
06-02-25 07:55 pm
Bangalore Correspondent
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
06-02-25 05:37 pm
HK News Desk
ಅಮೆರಿಕದಲ್ಲಿ ಅಕ್ರಮ ವಲಸಿಗರ ಗಡೀಪಾರು ; ಪ್ರಧಾನಿ ಮೋ...
06-02-25 02:21 pm
Kerala Suicide, Ragging: ಕೇರಳದಲ್ಲಿ 15ರ ಬಾಲಕ ಮ...
04-02-25 10:49 pm
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
06-02-25 10:16 pm
Mangalore Correspondent
Prasad Attavar, Saloon Attack, Mangalore: ಮಸಾ...
05-02-25 10:51 pm
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
06-02-25 09:32 pm
HK News Desk
Kalaburagi, Reels,weapons, Crime: ಕಲಬುರಗಿ ; ಶ...
06-02-25 04:35 pm
Raichur Rape, Crime: ರಾಯಚೂರಿನಲ್ಲಿ ಎರಡನೇ ಕ್ಲಾಸ...
06-02-25 12:00 pm
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm
Ullal Police Station, Mangalore, Crime: ಪಿಎಸ್...
03-02-25 05:46 pm