ಬ್ರೇಕಿಂಗ್ ನ್ಯೂಸ್
11-04-22 08:08 pm Bengaluru Correspondent ಕರ್ನಾಟಕ
ಬೆಂಗಳೂರು, ಎ.11: ನಾವು ಪಾಕಿಸ್ಥಾನದಿಂದ ಬಂದ ಮುಸ್ಲಿಮರಲ್ಲ. ನಾವು ಭಾರತೀಯ ಮುಸ್ಲಿಮರು. ನಾವು ಇಲ್ಲಿನ ಹಿಂದುಗಳ ಜೊತೆಗೇ ಬದುಕುತ್ತೇವೆ. ಶಾಂತಿ ಮತ್ತು ಸಾಮರಸ್ಯವನ್ನೇ ನಾವು ಬಯಸುತ್ತೇವೆ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಚಂದ್ರು ಕೊಲೆ ಪ್ರಕರಣ ಮುಂದಿಟ್ಟು ಬಿಜೆಪಿ ರಾಜಕೀಯ ನಡೆಸುತ್ತಿದ್ದಾರೆ. ಮುಸ್ಲಿಮರ ವಿರುದ್ಧ ದ್ವೇಷ ಕಾರುತ್ತಿದ್ದಾರೆ ಎಂದು ಟೀಕಿಸಿರುವ ಜಮೀರ್ ಅಹ್ಮದ್ ಖಾನ್, ತನ್ನ ಕ್ಷೇತ್ರದಲ್ಲಿ ಮುಸ್ಲಿಂ ಮತ್ತು ಹಿಂದುಗಳ ಜೊತೆಗೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಸಾಮರಸ್ಯದ ಮಾತುಗಳನ್ನು ಆಡಿದ್ದಾರೆ.
ನಾವು ಗೌರವಯುತವಾಗಿ ಬದುಕಲು ಬಯಸುತ್ತೇವೆ. ಎಲ್ಲರ ಜೊತೆ ಗೌರವದಿಂದಲೇ ಬದುಕು ಮುಂದುವರಿಸುತ್ತೇವೆ. ನಮ್ಮನ್ನು ದ್ವೇಷ ಮಾಡಲು ನಾವು ಪಾಕಿಸ್ಥಾನದಿಂದ ಬಂದಿರುವ ಮುಸ್ಲಿಮರಲ್ಲ. ಚಂದ್ರು ಕೊಲೆ ವಿಚಾರದಲ್ಲಿ ವಿನಾಕಾರಣ ವಿವಾದ ಎಬ್ಬಿಸಲಾಗುತ್ತಿದೆ. ನನ್ನ ಕ್ಷೇತ್ರದಲ್ಲಿ ನಾನು ಆಯ್ಕೆಯಾದ ಬಳಿಕ ಕೋಮು ಗಲಭೆಗಳೇ ಕಡಿಮೆಯಾಗಿದೆ. ಅದಕ್ಕೂ ಹಿಂದೆ ಒಂದೆರಡು ಸಲ ಕೊಲೆ ನಡೆದಿತ್ತು. ನಾನು ಬಂದ ಬಳಿಕ ಸುದೀರ್ಘ ಕಾಲದಿಂದ ಕೋಮು ಉದ್ದೇಶಿತ ಕೊಲೆಗಳು ನಡೆದಿಲ್ಲ. ಆದರೆ ಬಿಜೆಪಿಯವರು ಚಂದ್ರು ಕೊಲೆ ಪ್ರಕರಣದಲ್ಲಿ ಕೋಮು ಧ್ರುವೀಕರಣಕ್ಕೆ ಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಇದಕ್ಕೂ ಹಿಂದೆ ಜಮೀರ್ ಅಹ್ಮದ್ ಚಂದ್ರು ಕೊಲೆ ಕುರಿತು ನೀಡಿದ್ದ ಹೇಳಿಕೆ ಬಗ್ಗೆ ಬಿಜೆಪಿ ಕಡೆಯಿಂದ ಭಾರೀ ಟೀಕೆ ಕೇಳಿಬಂದಿತ್ತು. ಚಂದ್ರುವನ್ನು ಉದ್ದೇಶಪೂರ್ವಕ ಕೊಲೆ ಮಾಡಿದ್ದಲ್ಲ. ಆ ಯುವಕ ತೊಡೆಗೆ ಇರಿದಿದ್ದ ಅಷ್ಟೇ. ಆದರೆ ತೊಡೆಯ ನರಗಳು ಕಟ್ ಆಗಿದ್ದರಿಂದ ರಕ್ತಸ್ರಾವ ಆಗಿ ಸಾವು ಕಂಡಿದ್ದ ಎಂದು ಜಮೀರ್ ಅಹ್ಮದ್ ಹೇಳಿದ್ದರು. ಈ ಹೇಳಿಕೆ ವಿವಾದ ಆಗುತ್ತಲೇ ಜಮೀರ್ ಅಹ್ಮದ್ ಖಾನ್, ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದಲ್ಲದೇ ಇಡೀ ಮುಸ್ಲಿಮರ ಪ್ರತಿನಿಧಿಯ ರೀತಿ ಹೇಳಿಕೆ ನೀಡಲು ಆರಂಭಿಸಿದ್ದಾರೆ.
ಚಂದ್ರು ಕೊಲೆ ಪ್ರಕರಣದ ತನಿಖೆಯನ್ನು ಬಿಜೆಪಿ ಸರಕಾರ ಸಿಓಡಿಗೆ ಒಪ್ಪಿಸಿದೆ. ಗೃಹ ಸಚಿವರು ಮತ್ತು ಪೊಲೀಸರು ಪ್ರತ್ಯೇಕ ಹೇಳಿಕೆ ನೀಡುವ ಮೂಲಕ ಕೊಲೆ ಪ್ರಕರಣ ವಿವಾದಕ್ಕೆ ಕಾರಣವಾಗಿತ್ತು.
We are not Muslims of Pakistan, but Indian Muslims. Our first priority for peace coexistence. We live in India with great respect. "We are also very respectful," Chamrajapet Congress MLA Zameer Ahmed Khan said in a press release. Commenting on the murder of young Chandru in JJ Nagar, he alleged that the BJP is also doing politics in the home of death. There have been riots in one way or another.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
10-05-25 01:58 pm
HK News Desk
ಯುದ್ಧ ಸಮಸ್ಯೆಗೆ ಪರಿಹಾರ ಅಲ್ಲ, ಮಾತುಕತೆಯಿಂದ ಬಗೆಹರ...
09-05-25 06:49 pm
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm