ಬ್ರೇಕಿಂಗ್ ನ್ಯೂಸ್
12-04-22 09:36 pm HK Desk news ಕರ್ನಾಟಕ
ಬೆಳಗಾವಿ, ಎ.12 : ನನ್ನ ಗಂಡ ಯಾವಾಗಲೂ ಬಿಜೆಪಿ ಕಾರ್ಯಕರ್ತ ಎಂದು ಎಲ್ಲರ ಬಳಿ ಹೇಳಿಕೊಳ್ಳುತ್ತಿದ್ದರು. ಆದರೆ ಇಂದು ಅದೇ ಬಿಜೆಪಿ ನನ್ನ ಗಂಡನನ್ನು ಸಮಾಧಿ ಮಾಡಿಬಿಟ್ಟಿತು. ನನ್ನ ಪತಿ ಈಶ್ವರಪ್ಪ ಅವರನ್ನು ಕೇಳಿಕೊಂಡೇ ಗುತ್ತಿಗೆ ನಡೆಸುತ್ತಿದ್ದರು. ಈಗ ಸಂತೋಷ್ ಯಾರೆಂದೇ ಗೊತ್ತಿಲ್ಲ ಎಂದು ಈಶ್ವರಪ್ಪ ಹೇಳುತ್ತಿದ್ದಾರೆ. ಇವರದ್ದೆಲ್ಲ ನಾಯಿ ಜನ್ಮ ಎಂದು ಮೃತ ಗುತ್ತಿಗೆದಾರ ಸಂತೋಷ್ ಪಾಟೀಲ್ ಪತ್ನಿ ಜಯಶ್ರೀ ಹಿಡಿಶಾಪ ಹಾಕಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಸಂತೋಷ್ ಪತ್ನಿ, ನನ್ನ ಪತಿ, ಈಶ್ವರಪ್ಪ ಭರವಸೆ ಮೇಲೆಯೇ ಕೆಲಸ ಮಾಡುತ್ತಿದ್ದರು. ಕಳೆದ ಒಂದು ವರ್ಷದಿಂದ ಅವರು ಕಾಮಗಾರಿಯ ಬಿಲ್ ಪಾಸ್ ಮಾಡುತ್ತಿಲ್ಲ ಎಂದು ಸಿಕ್ಕಸಿಕ್ಕಲ್ಲಿ ಓಡಾಡಿದ್ದಾರೆ. ಯಾರ್ಯಾರದ್ದೋ ಕೈಕಾಲು ಹಿಡಿದಿದ್ದಾರೆ. ಕಳೆದ ವಾರ ಇವರಿಗೆ ಶೇ.40 ರಷ್ಟು ಲಂಚ ಕೊಟ್ಟರೆ ಮಾತ್ರವೇ ಬಿಲ್ ಪಾಸ್ ಮಾಡಲಾಗುತ್ತದೆ ಎಂದು ಹೇಳುತ್ತಿದ್ದರು. ಈಶ್ವರಪ್ಪರ ಬಳಿ ಮಾತನಾಡಲು ಹೋದಾಗ ಬೆಳಗ್ಗೆ ಬನ್ನಿ, ಸಂಜೆ ಬನ್ನಿ ಎಂದು ಹೇಳಿ ಆಟ ಆಡಿಸುತ್ತಿದ್ದರು. ಇವರು ಎಷ್ಟು ಸಾರಿ ಶಿವಮೊಗ್ಗ, ಬೆಂಗಳೂರಿಗೆ ಫೈಲ್ ಹಿಡಿದು ಹೋಗಿಲ್ಲ. ಈಗ ಪರಿಚಯನೇ ಇಲ್ಲ ಎನ್ನುತ್ತಿದ್ದಾರೆ ಎಂದು ಅಲವತ್ತುಕೊಂಡಿದ್ದಾರೆ.
ಬಿಜೆಪಿ ಸರ್ಕಾರಕ್ಕಾಗಿ ಕಷ್ಟ ಪಟ್ಟು ನನ್ನ ಪತಿ ಕೆಲಸ ಮಾಡುತ್ತಿದ್ದರು. ಕೆಲಸದ ಭರದಲ್ಲಿ ದಿನಕ್ಕೆ ಕೆಲವೊಮ್ಮೆ ಒಂದೇ ಬಾರಿ ಊಟ ಮಾಡುತ್ತಿದ್ದರು. ರಾತ್ರಿ ಹನ್ನೊಂದು ಗಂಟೆಗೆ ಮನೆಗೆ ಬರುತ್ತಿದ್ದರು. ಬಿಜೆಪಿಗಾಗಿ ನಿಯತ್ತಿನಲ್ಲಿ ಕೆಲಸ ಮಾಡುತ್ತಿದ್ದ ನನ್ನ ಪತಿಯನ್ನು ಈಶ್ವರಪ್ಪ ಬಿಜೆಪಿ ಕಾರ್ಯಕರ್ತನೇ ಅಲ್ಲ. ಸಂತೋಷ್ ಯಾರು ಎಂಬುದೇ ಗೊತ್ತಿಲ್ಲ ಎಂದಿದ್ದಾರೆ. ಯಾರು ಎಂಬುದೇ ಗೊತ್ತಿಲ್ಲ ಎಂದಾದರೆ ಇವರ ಜೊತೆ ಫೋಟೋದಲ್ಲಿ ಹೇಗೆ ತಾನೆ ಕಾಣಿಸಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನ ಪತಿ ಸಾವಿನ ಬಗ್ಗೆ ನನಗೆ ಗೊತ್ತಾಗಿದ್ದು, ಸ್ನೇಹಿತರ ಹಾಗೂ ಕುಟುಂಬದವರ ಫೋನ್ ಬಂದಾಗಷ್ಟೇ. ಟಿವಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿಯಿತು. ನಿನ್ನೆ ರಾತ್ರಿ ಕೊನೆಯ ಬಾರಿ ಅವರು ಕರೆ ಮಾಡಿದ್ದರು. ಎಂದಿನಂತೆ ಅವರು ಖಿನ್ನತೆಯಲ್ಲಿಯೇ ಇದ್ದರು. ಕಳೆದ ಒಂದು ತಿಂಗಳಿನಿಂದಲೂ ಅವರು ಖಿನ್ನತೆಯಲ್ಲಿದ್ದರು ಎಂದು ದುಃಖ ತೋಡಿಕೊಂಡರು.
"ನನ್ನ ಪತಿ ಸಾವಿಗೆ ಈಶ್ವರಪ್ಪ ಅವರೇ ಕಾರಣ. ಇನ್ನೂ ಎಷ್ಟು ಗುತ್ತಿಗೆದಾರರ ಜೀವನ ಇದೇ ರೀತಿಯಲ್ಲಿ ಅಂತ್ಯವಾಗಲಿದೆಯೋ ದೇವರೇ ಬಲ್ಲ. ನನ್ನ ಗಂಡನ ಸಾವಿಗೆ ನ್ಯಾಯ ಬೇಕು. ತನಿಖೆ ನಡೆಸುತ್ತೀರಾದರೆ ನಿಯತ್ತಾಗಿ ನಡೆಸಿ. ಅದು ಬಿಟ್ಟು ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಬೇಡಿ ಎಂದು ವಿನಂತಿಸಿದರು.
My husband has always been a BJP worker. However, the deceased contractor Santosh's wife, Jayashree, is in tears today as the same BJP buried my husband.Santosh's wife, who spoke to Public TV, said my husband Eshwarappa was working on his promise. He has not been doing a bill of lading since last week. He said that only 40% of the bribe would be passed. When he went to talk to eshwarappa, he came to the morning and said that he was playing the game in the evening
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
27-11-24 11:04 pm
Mangalore Correspondent
Muneer Katipalla, Mangalore, Anupam Agarwal;...
27-11-24 09:36 pm
Dr Chinnappa Gowda, Mangalore: 25 ಕೋಟಿ ವ್ಯಯಿಸ...
27-11-24 08:50 pm
Mangalore MP Captain Brijesh Chowta, Chouhan...
27-11-24 08:39 pm
Mangalore News: ಬ್ರಿಟಿಷರ ಕಾಲದ ಜಿಲ್ಲಾಧಿಕಾರಿ ಕಚ...
27-11-24 08:28 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm