ಬ್ರೇಕಿಂಗ್ ನ್ಯೂಸ್
13-04-22 09:30 pm HK Desk news ಕರ್ನಾಟಕ
ಶಿವಮೊಗ್ಗ, ಎ.13: ಬಿಜೆಪಿ ಕಚೇರಿಯಲ್ಲಿ ಸಚಿವ ಈಶ್ವರಪ್ಪ ಸುದ್ದಿಗೋಷ್ಟಿ ನಡೆಸುತ್ತಿದ್ದಾಗಲೇ ಯುವ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಇದೇ ವೇಳೆ ಬಿಜೆಪಿ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದ್ದು ಪೊಲೀಸ್ ಬಸ್ಸಿಗೆ ಕಲ್ಲು ತೂರಾಟವೂ ನಡೆದಿದೆ.
ಎರಡೂ ಕಡೆಯಲ್ಲಿ ಗುಂಪು ಸೇರಿ ಘೋಷಣೆ, ಧಿಕ್ಕಾರದ ಕೂಗು ಕೇಳಿಬಂತು. ಯುವ ಕಾಂಗ್ರೆಸ್ ಕಾರ್ಯಕರ್ತರನ್ನ ಬಂಧಿಸಿದ ಪೊಲೀಸ್ ಬಸ್ಸಿಗೆ ಕಲ್ಲು ತೂರಲಾಗಿದೆ.
ಬಿಜೆಪಿ ಕಾರ್ಯಕರ್ತರು ಕೇಸರಿ ಶಾಲು ಮತ್ತು ಜೈ ಶ್ರೀರಾಮ್ ಎಂಬ ಘೋಷಣೆ ಕೂಗಿದರೆ ಯುವ ಕಾಂಗ್ರೆಸ್ ಕಾರ್ಯಕರ್ತರು ಭ್ರಷ್ಟ ಈಶ್ವರಪ್ಪನವರಿಗೆ ದಿಕ್ಕಾರ ಎಂದು ಘೋಷಣೆ ಕೂಗಿದರು. ಈ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರನ್ನ ಪೊಲೀಸರು ತಡೆದು ವ್ಯಾನ್ ನಲ್ಲಿ ಕೂರಿಸಿದರು. ಬಿಜೆಪಿ ಕಡೆಯವರು ಕೇಸರಿ ಶಾಲನ್ನ ರುಮಾಲು ರೀತಿ ಸುತ್ತಿ ಘೋಷಣೆ ಕೂಗಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಪೊಲೀಸ್ ವ್ಯಾನ್ ಗೆ ಕಲ್ಲು ತೂರಿದರಲ್ಲದೆ, ಚಪ್ಪಲಿಯನ್ನೂ ಎಸೆದರು.

ಪೊಲೀಸರ ನಿರ್ಲಕ್ಷವೇ ಘರ್ಷಣೆಗೆ ಕಾರಣ..
ಸಚಿವ ಈಶ್ವರಪ್ಪ ಸುದ್ದಿಗೋಷ್ಠಿ ವೇಳೆ ಪೊಲೀಸರು ಸರಿಯಾದ ಬಂದೋಬಸ್ತ್ ಮಾಡಿಕೊಳ್ಳದ ಕಾರಣ ಸಂಘರ್ಷ, ಜಟಾಪಟಿ ಉಂಟಾಗಿದೆ. ಕಚೇರಿ ಬಳಿ ಬ್ಯಾರಿಕೇಡ್ ನಿರ್ಮಿಸಿ ಬಂದೋ ಬಸ್ತ್ ಮಾಡಿರದ ಕಾರಣ ಗಲಾಟೆ ನಡೆದಿದೆ ಎನ್ನಲಾಗಿದೆ. ಎರಡು ಡಿಎ ಆರ್ ವ್ಯಾನ್ ಗಳನ್ನು ನಿಯೋಜಿಸಿದ್ದರೂ ಯುವ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿ ಬಳಿಗೆ ನುಗ್ಗುವ ವಿಷಯವನ್ನ ಗುಪ್ತಚರ ಇಲಾಖೆ ರವಾನಿಸಿತ್ತು.
Stole petled at bus demanding arrest of Eshwarappa in Shivamogga, tight security briefed up.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
10-10-26 10:31 pm
HK News Staffer
ಸಿಇಸಿ ವಿರುದ್ಧ ದೆಹಲಿ, ಮುಂಬೈನಲ್ಲಿ ಭಾರೀ ಪ್ರತಿಭಟನ...
10-10-26 07:33 pm
ನಂದಿಗ್ರಾಮ, ರೇಜಿನಗರದಲ್ಲಿ ಬಿಜೆಪಿಗೆ ಭರ್ಜರಿ ಜಯ ;...
09-10-26 11:04 pm
ಸರ್ಕಾರಿ ಸಂಸ್ಥೆಯಿಂದ ಕೋಟ್ಯಂತರ ದೇಣಿಗೆ ; ಪಿಣರಾಯಿ...
09-10-26 05:40 pm
Prakash Raj, Dhruv Rathee: SIR ರದ್ದತಿಗೆ ಬೆಂಗಳ...
08-10-26 08:03 pm
10-10-26 09:27 pm
HK News Staffer
Sowjanya, Mangalore, Justice: ಬೆಳ್ತಂಗಡಿಯಲ್ಲಿ...
10-10-26 09:17 pm
ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ ; ಉತ್ತರ ಕನ್ನಡ ಸ...
10-10-26 05:09 pm
ಮೂಡುಶೆಡ್ಡೆ ; ಮುಸ್ಲಿಮರ ದಫನಕ್ಕೆ 2 ಎಕರೆ ಪಿಲಿಕುಳದ...
10-10-26 03:21 pm
Nana patekar: ಮಂಗಳೂರು, ಉಡುಪಿಯೊಂದಿಗೆ ನಾನಾ ಪಾಟೇ...
08-10-26 04:30 pm
10-10-26 02:27 pm
HK News Staffer
ಮೃಗಾಲಯಕ್ಕೆ ಗಂಡನೊಂದಿಗೆ ಬಂದ ನವವಿವಾಹಿತೆ: ಪತಿ ಬೈಕ...
09-10-26 08:41 pm
Dharwad Accident: ಧಾರವಾಡ ; ಕಾರು - ಕ್ಯಾಂಟರ್ ನಡ...
09-10-26 05:37 pm
ಕೊರಿಯರ್ ನಲ್ಲಿ ಪಂಜಾಬಿನಿಂದ ಮಂಗಳೂರಿಗೆ ಎಂಡಿಎಂಎ ಪೂ...
09-10-26 03:25 pm
Nisha Raphael, POCSO: 11 ವರ್ಷದ ಬಾಲಕನ ಮೇಲೆ ಲೈಂ...
09-10-26 03:23 pm