ಬ್ರೇಕಿಂಗ್ ನ್ಯೂಸ್
16-04-22 03:28 pm HK Desk news ಕರ್ನಾಟಕ
ಬೆಳಗಾವಿ, ಎ.16 : ಸಂತೋಷ ಪಾಟೀಲ್ ಕಾಮಗಾರಿ ಬಗ್ಗೆ ಮನವಿ ಕೊಟ್ಟಿದ್ದಾಗಲೇ ಸರ್ಕಾರ ಎಚ್ಚತ್ತುಕೊಳ್ಳಬೇಕಿತ್ತು. ನಕಲಿ ಕಾಮಗಾರಿ ಆಗಿದ್ದರೆ ಯಾಕೆ ಕ್ರಮ ಕೈಗೊಂಡಿರಲಿಲ್ಲ. ಈಗ ಕಾಮಗಾರಿ ಆರ್ಡರ್ ಕೊಟ್ಟಿಲ್ಲಾಂದ್ರೆ ಯಾರು ನಂಬಬೇಕು ಇವರನ್ನು. ಸಾಮಾನ್ಯ ಜನ ಯಾರಾದ್ರು ಆತ್ಮಹತ್ಯೆಗೆ ಕಾರಣರಾಗಿದ್ದರೆ, ಅವರ ಹೆಸರು ಇರ್ತಿದ್ರೆ ಪೊಲೀಸರು ಬಂಧಿಸುತ್ತಿರಲಿಲ್ಲವೇ?ಎಫ್ಐಆರ್ ನಲ್ಲಿ ಹೆಸರಿರುವ ಆರೋಪಿಗಳನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕು ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಭಾಸ್ಕರ ರಾವ್ ಆಗ್ರಹಿಸಿದ್ದಾರೆ.
ಸರಕಾರದ್ದೇ ಭಾಗವಾಗಿರುವ ವ್ಯಕ್ತಿ ಆರೋಪಿ ಇರಬೇಕಿದ್ದರೆ ಸರ್ಕಾರವೇ ತನಿಖೆ ನಡೆಸುವುದು ಎಷ್ಟು ಸರಿ. ತನಿಖಾಧಿಕಾರಿಗೆ ಅಷ್ಟು ಸ್ವಾತಂತ್ರ್ಯ ಕೊಡುತ್ತಾರೆಯೇ.. ಕೋರ್ಟ್ ಕಣ್ಗಾವಲಿನಲ್ಲಿ ಅಥವಾ ನಿವೃತ್ತ ಜಡ್ಜ್ ನೇತೃತ್ವದಲ್ಲಿ ತನಿಖೆ ನಡೆಸಿದರೆ ಓಕೆ. ಸರಕಾರದಡಿ ಇರುವ ಅಧಿಕಾರಿ ತನಿಖೆ ನಡೆಸೋದಾದ್ರೆ ಸರ್ಕಾರ ಹಸ್ತಕ್ಷೇಪ ಮಾಡಲ್ಲ ಎನ್ನುವುದು ಹೇಗೆ ಎಂದು ಭಾಸ್ಕರ್ ರಾವ್ ಪ್ರಶ್ನಿಸಿದರು.

ಗುತ್ತಿಗೆದಾರ ಸಂತೋಷ ಪಾಟೀಲ್ ವಿಶ್ವಾಸದ ಮೇಲೆ ಕೆಲಸ ಮಾಡಿದ್ದಿರಬಹುದು. ಆದರೆ ಆತನನ್ನು ಅವಮಾನಿಸಿ, ಕಾಯಿಸಿದ್ದು ಆತ್ಮಹತ್ಯೆಗೆ ಕಾರಣವಾಗಿದೆ. ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳಿಗೆ ಈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಆಮ್ ಆದ್ಮಿ ಪಕ್ಷವು ಇವರ ಭ್ರಷ್ಟಾಚಾರವನ್ನೇ ಮುಂದಿಟ್ಟು ಹೋರಾಟ ನಡೆಸಲಿದೆ. ಬೆಳಗಾವಿ ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲಿ ಎಎಪಿ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ. ಪ್ರಭಾವಿಗಳನ್ನು ಮುಟ್ಟೋಕೂ ಆಗಲ್ಲ ಎನ್ನುವ ಭ್ರಮೆಯನ್ನು ತೆಗೆದು ಹಾಕುತ್ತೇವೆ. ನಮಗೆ ಪ್ರಚಾರ ಮುಖ್ಯ ಅಲ್ಲ, ವ್ಯಕ್ತಿಗಳೂ ಮುಖ್ಯ ಅಲ್ಲ. ಎದುರಾಳಿ ಪಕ್ಷಗಳ ದುರಾಡಳಿತ, ಭ್ರಷ್ಟಾಚಾರವೇ ಮುಖ್ಯ. ಭ್ರಷ್ಟಾಚಾರದ ಪರಿಣಾಮ ನೇರವಾಗಿ ಜನರ ಮೇಲಾಗುತ್ತಿದೆ. ನಾವು ಜನಸಾಮಾನ್ಯರ ಪಕ್ಷವಾಗಿದ್ದು ಜನರ ಪರ ನಿಲ್ಲುತ್ತೇವೆ ಎಂದು ಹೇಳಿದರು.
Santosh Patil worked on trust. Humiliation and shame have been the cause of suicide. Both national parties do not have the morality to speak about this. The money had to be released even after the work began. Both parties must shed crocodile tears. "Only the AAP has a moral right to speak about it," said Bhaskar Rao, a former IPS officer.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm