ಹೆಬ್ರಿ ; ಬಾಯ್ ಫ್ರೆಂಡ್ ಕರೆ ಸ್ವೀಕರಿಸದ್ದಕ್ಕೆ ವಿಷ ಸೇವಿಸಿ ಸಾವಿಗೆ ಶರಣಾದ ಯುವತಿ

20-04-22 03:52 pm       HK Desk news   ಕರ್ನಾಟಕ

ಬಾಯ್ ಫ್ರೆಂಡ್ ತನ್ನ ಕರೆ ಸ್ವೀಕರಿಸಿಲ್ಲ ಎಂದು ನೊಂದ 19 ವರ್ಷದ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ರಿ ಸಂತೆಕಟ್ಟೆಯಲ್ಲಿ ನಡೆದಿದೆ.

ಕಾರ್ಕಳ, ಎ.20: ಬಾಯ್ ಫ್ರೆಂಡ್ ತನ್ನ ಕರೆ ಸ್ವೀಕರಿಸಿಲ್ಲ ಎಂದು ನೊಂದ 19 ವರ್ಷದ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ರಿ ಸಂತೆಕಟ್ಟೆಯಲ್ಲಿ ನಡೆದಿದೆ.

ಚಿಕ್ಕಮಗಳೂರಿನ ಮೂಡಿಗೆರೆ ಮೂಲದ ಕುಸುಮಾ(19) ಮೃತ ಯುವತಿ. ಆಕೆ ಹೆಬ್ರಿಯ ಸಂತೆಕಟ್ಟೆಯಲ್ಲಿ ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಕುಸುಮಾ, ಹೆಬ್ರಿಯ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಎ.19ರಂದು ಯುವಕನಿಗೆ ಫೋನ್ ಕರೆ ಮಾಡಿದ್ದು, ಆತ ಕರೆ ಸ್ವೀಕರಿಸುತ್ತಿರಲಿಲ್ಲ ಎನ್ನಲಾಗಿದೆ.

ಅಷ್ಟಕ್ಕೇ ನೊಂದ ಯುವತಿ ಮನೆಯಲ್ಲಿದ್ದ ಕೀಟನಾಶಕ ಸೇವಿಸಿ ಸಾವಿಗೆ ಶರಣಾಗಿದ್ದಾಳೆ. ವಿಷ ಸೇವಿಸಿದ್ದನ್ನು ತಿಳಿದ ಸ್ಥಳೀಯರು ಯುವತಿಯನ್ನು ಕೂಡಲೇ ಉಡುಪಿಯ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

A 19-year-old girl committed suicide by consuming poison because her boyfriend did not respond to her call at Hebri, Santhekatte here on April 19. The Deceased has been identified as Kusuma (19), a native of Mudigere in Chikkamagaluru District. She was working as a home nurse at Hebri, Santhekatte.