ಬ್ರೇಕಿಂಗ್ ನ್ಯೂಸ್
21-04-22 04:01 pm HK Desk news ಕರ್ನಾಟಕ
ಬೆಳಗಾವಿ, ಎ.21: ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿನ ವಿಚಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿರುವಾಗಲೇ ಮತ್ತೊಂದು ಕಡೆ ಆತ ನಡೆಸಿದ್ದ ಕಾಮಗಾರಿಗಳಿಗೆ ಪಂಚಾಯತ್ ರಾಜ್ ಇಲಾಖೆಯಿಂದ ಅನುಮತಿ ನೀಡಲಾಗಿತ್ತೇ ಎಂದು ಅನುಮಾನ ಮೂಡಿಸುವ ದಾಖಲೆ ಲಭ್ಯವಾಗಿದೆ. ಈ ಹಿಂದೆ ಜಿಪಂ ಅದ್ಯಕ್ಷೆಯಾಗಿದ್ದ ಆಶಾ ಐಹೊಳೆ ಎಂಬವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಬರೆದಿದ್ದ ಪತ್ರಕ್ಕೆ ಇಲಾಖಾ ಕಾರ್ಯದರ್ಶಿ ಅನುಮೋದನೆ ನೀಡಿರುವ ದಾಖಲೆ ಲಭ್ಯವಾಗಿದ್ದು, ರಾಜ್ಯ ಸರಕಾರ ಮತ್ತು ಅನುಮತಿ ನೀಡಿರಲಿಲ್ಲ ಎಂದು ವಾದಿಸಿದ್ದ ಸಚಿವ ಈಶ್ವರಪ್ಪ ಅವರಿಗೆ ಇರಿಸುಮುರಿಸು ತಂದಿದೆ.
2021ರ ಫೆಬ್ರವರಿ 15ರಂದು ಜಿಪಂ ಅಧ್ಯಕ್ಷೆ ಪತ್ರ ಬರೆದಿದ್ದು, ಹಿಂಡಲಗಾ ಗ್ರಾಮದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಪತ್ರ ಬರೆದಿದ್ದರು. ಅದರಲ್ಲಿ ಸಂತೋಷ್ ಪಾಟೀಲ್ ಕಾಮಗಾರಿ ನಿರ್ವಹಿಸಿದ್ದ 108 ಕಾಮಗಾರಿಗಳ ಬಗ್ಗೆಯೂ ಉಲ್ಲೇಖ ಇದೆ. ಕಾಂಗ್ರೆಸ್ ನಾಯಕಿ ಬರೆದಿದ್ದ ಪತ್ರಕ್ಕೆ ಫೆ.26ರಂದು ಇಲಾಖೆ ಕಾರ್ಯದರ್ಶಿ ಅನುಮೋದಿಸಲಾಗಿದೆ ಎಂದು ಬರೆದಿದ್ದಲ್ಲದೆ, ಮಾರ್ಚ್ 5ರಂದು ಆದೇಶದ ಪ್ರತಿಗಳನ್ನು ನೀಡಲಾಗುವುದು ಎಂದು ಪಚ್ಚೆ ಶಾಯಿಯಲ್ಲಿ ಅಧಿಕಾರಿಗಳು ಬರೆದು ಸೀಲ್ ಹಾಕಲಾಗಿದೆ. ಈ ಪತ್ರದ ಪ್ರತಿ ಮಾಧ್ಯಮಕ್ಕೆ ಲೀಕ್ ಆಗುತ್ತಲೇ ರಾಜ್ಯ ಸರಕಾರಕ್ಕೆ ತೀವ್ರ ಹಿನ್ನಡೆಯಾಗಿದ್ದು, ಕಾಮಗಾರಿಗೆ ಅನುಮೋದನೆ ಕೊಟ್ಟಿರಲಿಲ್ಲ ಎಂದು ವಾದಿಸುತ್ತಿದ್ದವರಿಗೆ ಇರಿಸು ಮುರಿಸು ಆಗಿದೆ. ಇದರ ಜೊತೆಗೆ ಪತ್ರದ ಅಸಲಿತನದ ಬಗ್ಗೆ ಅನುಮಾನವೂ ವ್ಯಕ್ತವಾಗಿದೆ.
ಸಹಿ ಪೋರ್ಜರಿ ಮಾಡಲಾಗಿದೆ- ಜಿಪಂ ಸಿಇಓ
ಈ ಬಗ್ಗೆ ಬೆಳಗಾವಿ ಜಿಪಂ ಸಿಇಓ ದರ್ಶನ್ ಎಚ್.ವಿ. ಅವರಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ಕೇಳಿದಾಗ, ಪತ್ರದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ. ಪತ್ರದಲ್ಲಿ ಮೊದಲು ಮತ್ತು ಕೊನೆಯಲ್ಲಿ ಗ್ರೀನ್ ಅಕ್ಷರದಲ್ಲಿ ಸಹಿ ಮಾಡಿರುವುದು ನಾನಲ್ಲ ಎಂದು ಆಶಾ ಐಹೊಳೆ ತಿಳಿಸಿದ್ದಾರೆ. ನಾರ್ಮಲೀ ಕಾಮಗಾರಿಗೆ ಅನುಮೋದನೆ ಕೊಡಬೇಕಾದ್ರೆ ಪಟ್ಟಿ ಮಾಡೋದಿಲ್ಲ. ಅದಕ್ಕೇ ಆದಂತಹ ಸರಕಾರದ ನಿಯಮಗಳಿವೆ. ಫೈಲ್ ನೋಟಿಂಗ್ ಆಗಬೇಕು, ಇಲಾಖೆ ಮುಖ್ಯಸ್ಥರು, ಸಂಬಂಧಿಸಿದವರು, ಜಿಲ್ಲಾ ಮಟ್ಟದಲ್ಲಿಯೂ ಅನುಮೋದನೆ ನೀಡಬೇಕು. ತನಿಖೆ ಹಂತದಲ್ಲಿ ಈ ಬಗ್ಗೆ ಹೆಚ್ಚೇನು ಹೇಳೋದಿಲ್ಲ. ಯಾರು ಏನು ಮಾಡಿದ್ದಾರೆ ಅನ್ನೋದು ಪೊಲೀಸರು ತನಿಖೆ ಮಾಡಿಸಲಿ. ಪೋರ್ಜರಿ ಮಾಡಿದ್ದರೆ ಸತ್ಯ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ಆದರೆ ಸಂತೋಷ್ ಪಾಟೀಲ್ ಮಾಡಿರುವ 108 ಕಾಮಗಾರಿ ಪೂರ್ತಿಯಾಗಿರುವುದು, ವರ್ಕ್ ಆರ್ಡರ್ ಇಲ್ಲದೇ ಇಷ್ಟೆಲ್ಲಾ ಕಾಮಗಾರಿ ಆಗಿದೆ ಅನ್ನೋದೇ ಅಚ್ಚರಿಯಾಗಿದೆ. ಬಿಲ್ ಬಂದಿಲ್ಲ ಎಂದಾಗ, ಗುತ್ತಿಗೆದಾರರು ನಮ್ಮನ್ನು ಸಂಪರ್ಕಿಸುವುದು ಸಹಜ. ಆದರೆ ಯಾವುದೇ ಗುತ್ತಿಗೆದಾರ ನನ್ನ ಭೇಟಿ ಆಗಲು ಬಂದಿಲ್ಲ. 15ನೇ ಹಣಕಾಸು ಆಯೋಗದಲ್ಲಿ ಹೆಚ್ಚಂದ್ರೆ 50ರಿಂದ 60 ಲಕ್ಷ ಅನುದಾನ ಬರುತ್ತದೆ. ಇಲ್ಲಿ ಪಂಚಾಯಿತಿ ಮಟ್ಟದಲ್ಲಿ ನಾಲ್ಕು ಕೋಟಿ ಕಾಮಗಾರಿ ಆಗಿರುವ ಬಗ್ಗೆ ತೋರಿಸಲಾಗಿದೆ. ಪಂಚಾಯಿತಿಗೆ ಇಷ್ಟೊಂದು ಹಣ ಬರಲು ಸಾಧ್ಯವಿಲ್ಲ. ಏನಿದ್ದರೂ, ಲೆಟರ್ ಬರೆದಿದ್ದು ನಿಜ. ಅನುಮೋದನೆ ಅಂತಾ ಬರೆದಿದ್ದು ನಿಜವಲ್ಲ. ಈ ಕುರಿತು ತನಿಖೆ ಆಗಬೇಕು. ಪೋರ್ಜರಿ ಮಾಡಿದ್ದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ ಎಂದು ಜಿಪಂ ಸಿಇಓ ದರ್ಶನ್ ಹೇಳಿದ್ದಾರೆ.
ಇವತ್ತಷ್ಟೇ ಗೊತ್ತಾಗಿದೆ – ಆಶಾ ಐಹೊಳೆ
ಪತ್ರದ ಬಗ್ಗೆ ಗೊಂದಲ ಎದ್ದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಪಂ ನಿಕಟಪೂರ್ವ ಅಧ್ಯಕ್ಷೆ ಆಶಾ ಐಹೊಳೆ, 2020ರಲ್ಲಿ ಹಿಂಡಲಗಾ ಗ್ರಾಮದಲ್ಲಿ ಲಕ್ಷ್ಮಿದೇವಿ ಜಾತ್ರೆ ಇತ್ತು. ಜಾತ್ರೆಯ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರು ನನ್ನ ಬಳಿ ಬಂದಿದ್ದರು. ಗ್ರಾಮದ ಅಭಿವೃದ್ಧಿ ವಿಷಯದಲ್ಲಿ ಗ್ರಾಪಂ ಅಧ್ಯಕ್ಷರಿಗೆ, ಸದಸ್ಯರಿಗೆ ಲೆಟರ್ ಕೊಟ್ಟಿದ್ದು ನಿಜ. ಲೇಟರ್‌ಗೆ ಏನು ಆಕ್ಷನ್ ಆಗಿದೆ ಎಂಬುದು ನನಗೆ ಗೊತ್ತಿಲ್ಲ. ಇಲಾಖೆ ಅನುಮೋದನೆ ನೀಡಿರುವುದು ನನಗೆ ಇವತ್ತಷ್ಟೇ ಗೊತ್ತಾಗಿದೆ ಎಂದು ಹೇಳಿದ್ದಾರೆ.
The suicidal case of Santosh Patil is getting a twist. The Udupi Police, who are conducting an investigation into the case, are getting significant evidence (Important Evidence). The Udupi police team is investigating the same incident in Belagavi. On April 20, Udupi police interrogated Hindalaga village arbitration chairman Nagesh. Some important records have been seized, including a letter from Sikkir, which turns to the Santosh Patil suicide case.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
10-05-25 01:58 pm
HK News Desk
ಯುದ್ಧ ಸಮಸ್ಯೆಗೆ ಪರಿಹಾರ ಅಲ್ಲ, ಮಾತುಕತೆಯಿಂದ ಬಗೆಹರ...
09-05-25 06:49 pm
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm