ಬ್ರೇಕಿಂಗ್ ನ್ಯೂಸ್
28-04-22 05:49 pm Bengalore Correspondnt ಕರ್ನಾಟಕ
ಬೆಂಗಳೂರು, ಏ 28: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೊಡ್ಡ ದುರಂತವೊಂದು ತಪ್ಪಿದೆ. ವಿಮಾನದಲ್ಲಿದ್ದ 150 ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ.
ಥಾಯ್ ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಮೊದಲೇ ಟೈರ್ ಸ್ಪೋಟಗೊಂಡಿದೆ. ಪೈಲೆಟ್ ವಿಮಾನವನ್ನು ಯಶಸ್ವಿಯಾಗಿ ಲ್ಯಾಂಡ್ ಮಾಡುವಲ್ಲಿ ಸಫಲರಾಗಿದ್ದಾರೆ.
ಟಿಜಿ 325 ಬೋಯಿಂಗ್ 787-8 ಡ್ರೀಮ್ ಲೈನರ್ ವಿಮಾನ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಆಗಮಿಸಿತ್ತು. ಏಪ್ರಿಲ್ 26ರಂದು 11.32ರ ಸುಮಾರಿಗೆ ಲ್ಯಾಂಡ್ ಆಗುವಾಗ ಟೈರ್ ಸ್ಫೋಟಗೊಂಡಿದೆ. ವಿಮಾನ ನಿಲ್ದಾಣದ ಸಿಬ್ಭಂದಿ ತಕ್ಷಣ ವಿಮಾನವನ್ನು ಸುರಕ್ಷಿತ ಪ್ರದೇಶಕ್ಕೆ ತೆಗೆದುಕೊಂಡು ಹೋದರು.
ವಿಮಾನಯಾನ ಸಂಸ್ಥೆಯ ತಾಂತ್ರಿಕ ತಂಡ ಬುಧವಾರ ಸಂಜೆ ಹೊಸ ಟೈರ್ ಜೊತೆ ಬೆಂಗಳೂರಿಗೆ ಆಗಮಿಸಿತು. ವಿಮಾನವನ್ನು ಪರಿಶೀಲನೆ ನಡೆಸಿತು. ಏಪ್ರಿಲ್ 28ರಂದು ಈ ವಿಮಾನ ಬೆಂಗಳೂರಿನಿಂದ ಬ್ಯಾಂಕಾಕ್‌ಗೆ ಹಾರಾಟ ನಡೆಸಿದೆ.
ವಿಮಾನದ ಹಿಂಬದಿಯ ಒಂದು ಟೈರ್ ಸ್ಫೋಟಗೊಂಡರೂ ಸಹ ಪೈಲೆಟ್ ಸುರಕ್ಷಿತವಾಗಿ ಲ್ಯಾಂಡ್ ಮಾಡಿಸಿದ್ದಾರೆ. ಇದರಿಂದಾಗಿ 150 ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವಿಮಾನ ಬುಧವಾರ ಬೆಳಗ್ಗೆ ಬೆಂಗಳೂರಿನಿಂದ ಬ್ಯಾಂಕಾಕ್‌ಗೆ ಹೊರಡಬೇಕಿತ್ತು. ಟೈರ್ ಸ್ಫೋಟಗೊಂಡ ಕಾರಣ ವಿಮಾನ ರದ್ದುಗೊಂಡಿತು. ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿಯೇ ಕಾಯುವಂತಾಯಿತು.
Passengers on a Thai Airways flight from Bangkok had a close call recently when the plane’s tyre burst while it was landing at the Kempegowda International Airport. The harrowing incident went unnoticed by the pilot who and it was the ground staff at the KIA who saw something was amiss. It took place on Tuesday night after the Thai national carrier flying from Bangkok.
04-08-25 01:00 pm
Bangalore Correspondent
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
04-08-25 05:11 pm
HK News Desk
ಗೆಳೆಯನೊಂದಿಗೆ ಪತ್ನಿಯ ಸರಸ ; ಪರಿ ಪರಿ ಬೇಡಿಕೊಂಡರೂ...
04-08-25 02:16 pm
ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ ; ಅಶಿಸ್ತ...
03-08-25 05:44 pm
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
04-08-25 06:05 pm
Mangalore Correspondent
VK Furniture & Electronics Launches 4th Annua...
04-08-25 04:48 pm
Dharmasthala Skeleton Mystery: ಧರ್ಮಸ್ಥಳ ಅಸ್ತಿ...
04-08-25 01:58 pm
Dharmasthala Case: ಧರ್ಮಸ್ಥಳ ಪ್ರಕರಣ ; ಆರನೇ ಪಾಯ...
04-08-25 01:24 pm
MCC Bank Inaugurates 20th Branch in Byndoor,...
04-08-25 12:40 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm