ಬ್ರೇಕಿಂಗ್ ನ್ಯೂಸ್
30-04-22 08:23 pm HK Desk News ಕರ್ನಾಟಕ
ವಿಜಯಪುರ, ಎ.30: ಜಮೀರ್ ಅಹ್ಮದ್ ಖಾನ್ ಯಾವಾಗಲೂ ಹಿಂದೂ ವಿರೋಧಿ ಕೆಲಸ ಮಾಡ್ತಾನೆ, ಸರ್ಕಾರದ ವಿರುದ್ಧವೇ ಇದ್ದಾನೆ. ಪೊಲೀಸ್ ಠಾಣೆ ಹಾಗೂ ದೇವಸ್ಥಾನದ ಮೇಲೆ ಕಲ್ಲು ಒಗೆಯೋರು ಬಂಧನವಾದರೆ ಅಂಥವರನ್ನು ಜೈಲಿಗೆ ಹೋಗಿ ಸನ್ಮಾನ ಮಾಡುತ್ತಾನೆ. ಅವರ ಮನೆಗಳಿಗೆ ಫುಡ್ ಕಿಟ್ ಕೊಟ್ಟು ಬೆಂಬಲ ಹೇಳ್ತಾನೆ. ಇಂಥ ಕ್ರಿಮಿನಲ್ ಮೈಂಡ್ ಗಳಿಂದಲೇ ವ್ಯವಸ್ಥೆ ಹಾಳಾಗುತ್ತಿದೆ. ಇಷ್ಟೆಲ್ಲ ನಡೀತಿದ್ರೂ ಗೃಹ ಸಚಿವರು ಏನು ಮಾಡುತ್ತಿದ್ದಾರೆ ಎಂದು ಸ್ವಪಕ್ಷದ ಸಚಿವರ ಬಗ್ಗೆಯೇ ರೆಬಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಇವರಿಗೆಲ್ಲ ನಮ್ಮವರದ್ದೇ ಸಲುಗೆಯಿದೆ, ಎಲ್ಲಾ ಅಡ್ಜೆಸ್ಟಮೆಂಟ್ ಇರೋ ಕಾರಣ ಹೀಗಾಗುತ್ತಿದೆ. ಇಂಥವರನ್ನು ಒದ್ದು ಒಳಗೆ ಹಾಕಬೇಕು. ಗಲಾಟೆ ಮಾಡಿದವರನ್ನು ಹೇಗೆ ಒಳಗೆ ಹಾಕಲಾಗಿದೆಯೋ ಹಾಗೇ ಜಮೀರ್ ನನ್ನೂ ಬಂಧಿಸಿ. ಈ ವಿಚಾರದಲ್ಲಿ ಸಿದ್ದರಾಮಯ್ಯ ಉತ್ತರ ನೀಡದೇ ಜಮೀರನ್ನ ಕೈಬಿಟ್ಟಿದ್ದಾರೆ. ಯುಪಿಯಲ್ಲಿ ಅಜಂಖಾನ್ ನನ್ನು ಒಳಗೆ ಹಾಕಿದಂತೆ ಜಮೀರ್ ಖಾನ್ ನನ್ನೂ ಒಳಗೆ ಹಾಕಿ. ಇವರೆಲ್ಲಾ ದೇಶ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ. ಇವರನ್ನು ಹಾಗೇ ಬಿಟ್ಟರೆ ಇಂಥವರಿಗೆ ಸ್ಕೋಪ್ ಕೊಟ್ಟಂತಾಗುತ್ತದೆ ಎಂದು ಯತ್ನಾಳ್ ಹೇಳಿದರು.
ಬಿಜೆಪಿ ನಾಯಕರದ್ದೇ ಬೆಂಬಲ !
ಜಮೀರನಿಗೆ ಬಿಜೆಪಿಯ ಒಬ್ಬ ಮಹಾನ್ ನಾಯಕರ ಬೆಂಬಲವೂ ಇದೆ. ಅವರ ಹಾಗೂ ಇವರ ನಡುವೆ ಬಿಸಿನೆಸ್ ಇದ್ದಾವೆ ಎಂದು ಹೊಸ ಬಾಂಬ್ ಸಿಡಿಸಿದ ಯತ್ನಾಳ್, ಎಲ್ಲದರ ಬಗ್ಗೆ ತನಿಖೆ ಮಾಡಿ ಜಮೀರ್ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಸಂಪುಟದಲ್ಲಿ ಬದಲಾವಣೆ ಖಚಿತ
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಳಿದ ಪ್ರಶ್ನೆಗೆ, ವಿಸ್ತರಣೆಯೋ ಅಥವಾ ಪುರ್ಣ ಪುನರ್ ಸಂಘಟಿಸುತ್ತಾರೋ ಗೊತ್ತಿಲ್ಲ. ಅದರ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಪಕ್ಷದ ಹೈಕಮಾಂಡ್ ನಿರ್ಧಾರವನ್ನು ಎಲ್ಲರೂ ಒಪ್ಪಬೇಕು. ಒಟ್ಟಾರೆ ಸಚಿವ ಸಂಫುಟದಲ್ಲಿ ಬದಲಾವಣೆಯಾಗಬೇಕೆಂದು ಹೈಕಮಾಂಡ್ ನಿರ್ಧಾರ ಮಾಡಿದೆ. ಆದಷ್ಟು ಬೇಗನೆ ಆಗುತ್ತದೆ ಎಂದು ಹೇಳಿದರು.
ಈಗಾಗಲೇ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಯಾರನ್ನೂ ಭೇಟಿಯಾಗಲ್ಲಾ ಎಂದು ಸಿಎಂ ಹೇಳಿದ್ದಾರೆ. ಅಮಿತ್ ಶಾ ಅವರು ಬಸವ ಜಯಂತಿ ವೇಳೆ ರಾಜ್ಯಕ್ಕೆ ಬರಲಿದ್ದಾರೆ. ಧರ್ಮೇಂದ್ರ ಪ್ರಧಾನ್ ಅವರೂ ಎರಡು ದಿನಗಳಿಂದ ರಾಜಧಾನಿಯಲ್ಲಿದ್ದಾರೆ. ಒಂದು ಒಳ್ಳೆಯ ಸಚಿವ ಸಂಪುಟ ಮಾಡಲು ಕೇಂದ್ರ ಹೈಕಮಾಂಡ್ ಚಿಂತನೆ ಮಾಡುತ್ತಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
BJP MLA Basanagowda Patil Yatnal said Congress MLA zameer Ahmad Khan, who distributed the food kit to the families responsible for the Hubli riots, should be kicked inside. After his arrest at the police station and the temple, he goes to work and pays homage. The Home Minister then asked what was being done. They have our own, all the Adjustment is due to Ero. Jameer should be put in the same manner as the rioters.
06-02-25 07:55 pm
Bangalore Correspondent
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
06-02-25 05:37 pm
HK News Desk
ಅಮೆರಿಕದಲ್ಲಿ ಅಕ್ರಮ ವಲಸಿಗರ ಗಡೀಪಾರು ; ಪ್ರಧಾನಿ ಮೋ...
06-02-25 02:21 pm
Kerala Suicide, Ragging: ಕೇರಳದಲ್ಲಿ 15ರ ಬಾಲಕ ಮ...
04-02-25 10:49 pm
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
06-02-25 10:16 pm
Mangalore Correspondent
Prasad Attavar, Saloon Attack, Mangalore: ಮಸಾ...
05-02-25 10:51 pm
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
06-02-25 09:32 pm
HK News Desk
Kalaburagi, Reels,weapons, Crime: ಕಲಬುರಗಿ ; ಶ...
06-02-25 04:35 pm
Raichur Rape, Crime: ರಾಯಚೂರಿನಲ್ಲಿ ಎರಡನೇ ಕ್ಲಾಸ...
06-02-25 12:00 pm
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm
Ullal Police Station, Mangalore, Crime: ಪಿಎಸ್...
03-02-25 05:46 pm