ಬ್ರೇಕಿಂಗ್ ನ್ಯೂಸ್
04-05-22 02:23 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 4 : ಪಿಎಸ್ಐ ಅಕ್ರಮ ನೇಮಕಾತಿ ಹಗರಣದಲ್ಲಿ ಹೆಸರು ಕೇಳಿಬಂದಿರುವ ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಅನುಮಾನವೇ ಇಲ್ಲ.. ಕರ್ನಾಟಕ ರಾಜಕಾರಣದಲ್ಲಿರುವ ಮೋಸ್ಟ್ ಕರೆಪ್ಟ್ ಮಿನಿಸ್ಟರ್ ಆತ. ಅದರಲ್ಲಿ ಅನುಮಾನ ಪಡುವ ಅಗತ್ಯವೇ ಇಲ್ಲ ಎಂದು ಡಿಕೆಶಿ ಹೇಳಿದ್ದಾರೆ.
ಸುಮ್ಮನೆ ಬಂದು ನಾನು ನೋಡೋಕೆ ಬ್ರಾಹ್ಮಣ ತರ ಇದ್ದೀನಿ, ಬಹಳ ಶುದ್ಧ ರಾಜಕಾರಣಿ ಅಂತ ಹೇಳಿಕೊಳ್ಳೋದು, ಪೋಸು ಕೊಡೋದು. ಇದೆಲ್ಲಾ ಯಾಕೆ ಬೇಕು. ಇಷ್ಟು ದಿನ ಇವರೇನು ಅಂತ ಎಲ್ಲಾ ಹೊರಗೆ ಬರ್ತಿದೆ. ಇವರ ನಡವಳಿಕೆ, ಮಾತನಾಡುವ ಶೈಲಿ ನೋಡಿದರೆ ಸಂಸ್ಕೃತಿ ಇರುವ ಯಾರು ಕೂಡ ಆ ಕೆಲಸ ಮಾಡುವುದಿಲ್ಲ ಎಂದಿದ್ದಾರೆ.
ಅದೇನೋ ಎಲ್ಲವನ್ನೂ ಬಿಚ್ತೀನಿ ಅಂತ ಹೇಳಿದ್ದಾರಲ್ಲ, ಎಲ್ಲವನ್ನು ಬಿಚ್ಚಿಡಲಿ. ಯಾರು ಬೇಡ ಎಂದವರು. ತಡ ಮಾಡೋದು ಯಾಕೆ, ಬಿಚ್ಚುವುದನ್ನು ಬಿಚ್ಚಿಡಲಿ ಎಂದು ಅಶ್ವತ್ಥ ನಾರಾಯಣ ಹೆಸರೇಳದೆ ಡಿಕೆಶಿ ಟಾಂಗ್ ನೀಡಿದ್ದಾರೆ. ಇವರೆಲ್ಲ ನಮ್ಮ ಜಿಲ್ಲೆಯನ್ನು ಶುದ್ಧೀಕರಣ ಮಾಡೋಕೆ ಬಂದವರು. ಹಿಂದೆ ದೇವೇಗೌಡರು, ಆನಂತರ ಕುಮಾರಸ್ವಾಮಿ, ಆಮೇಲೆ ನಾವು ಬಂದು ಏನೂ ಮಾಡೋಕ್ಕಾಗಿಲ್ಲ. ಈಗ ಇವರು ಬಂದಿದ್ದಾರಲ್ಲಾ, ಕ್ಲೀನ್ ಮಾಡಲಿ ಬಿಡಿ. ರಾಮನಗರದ ಜನ ಗಂಡಸ್ತನ ಇಲ್ಲದವರು ಎಂದಿದ್ರು. ಇದಕ್ಕೆ ಅನಿತಕ್ಕ, ಬಿಜೆಪಿ ಮಿನಿಸ್ಟರ್ ಗಳು ಸಾಕ್ಷಿ. ನಾವೆಲ್ಲ ಯಾರೂ ಗಂಡಸರಲ್ಲ, ಟೆಸ್ಟ್ ಮಾಡ್ಕೋಬೇಕು. ಸೀರೆ ಕೊಟ್ಟರೆ ಉಟ್ಕೋತೀವಿ ಎಂದು ವ್ಯಂಗ್ಯ ಧಾಟಿಯಲ್ಲಿ ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಕಿಡಿಕಾರಿದರು.
ಸಾಕಷ್ಡು ಜನ ಮೊದಲ ರ್ಯಾಂಕ್ ಪಡೆದಿದ್ದಾರೆ. ನಮ್ಮ ಜಿಲ್ಲೆಯವರೇ ನಾಲ್ಕೈದು ಜನ ಇದ್ದಾರೆ. ಈಗ ಅವರು ಒಳಗೆ ಹೋಗಿದ್ದಾರೆ. ನಮಗೆ ಬೇಕಾದವರೇ ಅವರೆಲ್ಲ. ಸಹಾಯ ಮಾಡಿದವರಲ್ಲಿ ಮಂತ್ರಿಗಳಿರಬಹುದು ಅಥವಾ ಬೇರೆ ಯಾರಾದ್ರೂ ಆಗಿರಲು ಬಹುದು. ಅಂಗಡಿ ಓಪನ್ ಮಾಡಿದ್ರೆ ವ್ಯಾಪಾರಕ್ಕೆ ಬರ್ತಾರೆ. ಅಂಗಡಿಯೇ ಓಪನ್ ಇಲ್ಲದೆ ಇದ್ದರೆ ಖರೀದಿಗೆ ಬರ್ತಾ ಇದ್ರಾ..? ಈ ರೀತಿ ಮಾಡಬಹುದು ಅಂತ ಪ್ರಭಾವಿಗಳು ತಿಳಿಸಿರುವ ಕಾರಣ ಮನೆ ಮಠ, ಆಸ್ತಿ ಪಾಸ್ತಿ ಮಾರಿ ಕೆಲವರು ತಗ್ಲಾಕೊಂಡಿದ್ದಾರೆ. ಈಗ ಲಂಚ ಕೊಟ್ಟಚನು ನಾನು ಕೊಟ್ಟೆ ಅಂತ ಯಾರು ಹೇಳಲ್ಲ. ತೆಗೆದುಕೊಂಡವನು ಹೇಳಲ್ಲ ಎಂದು ಪಿಎಸ್‌ಐ ಹಗರಣದ ಬಗ್ಗೆ ಡಿಕೆಸಿ ಶಿವಕುಮಾರ್ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.
KPCC president DK Shivakumar on Monday made a serious allegation against higher education minister CN Asawath Narayan that his relative was involved in the police sub-inspector recruitment scam and accepted money from three candidates from Magadi taluk to ensure their selection.
01-02-25 05:12 pm
HK News Desk
ಕಾಂಗ್ರೆಸ್ ನಿಂದ ಬಿಜೆಪಿ ಹೋದವರಿಗೆ ಅಲ್ಲಿ ಯಾವ ಸ್ಥಾ...
31-01-25 10:10 pm
Sriramulu, BJP, B. Y. Vijayendra: ವಿಜಯೇಂದ್ರ ಸ...
31-01-25 08:03 pm
SC directive for patients, Karnataka Health D...
31-01-25 06:07 pm
Cheque bounce, Snehamahi Krishna: ಮುಡಾ ಹಗರಣ ಹ...
31-01-25 02:02 pm
01-02-25 09:51 pm
HK News Desk
ಎರ್ನಾಕುಲಂ ಜಿಲ್ಲೆಯಲ್ಲಿ ಒಂದೇ ದಿನ 27 ಬಾಂಗ್ಲಾ ದೇಶ...
01-02-25 09:35 pm
2025ರ ಕೇಂದ್ರ ಬಜೆಟ್ ಗುಂಡಿನ ಗಾಯಕ್ಕೆ ಹಾಕಿದ ಬ್ಯಾಂ...
01-02-25 05:51 pm
ಕೇಂದ್ರ ಬಜೆಟ್ ಮಂಡನೆ ; ಕೃಷಿಕರು, ಮಧ್ಯಮ ವರ್ಗಕ್ಕೆ...
01-02-25 02:10 pm
Sonia Gandhi, president Murmu: ರಾಷ್ಟ್ರಪತಿ ಬಗ್...
31-01-25 09:10 pm
01-02-25 07:47 pm
Mangalore Correspondent
Kotekar Bank Robbery, Murgan D Devar: ಕೋಟೆಕಾರ...
01-02-25 02:32 pm
Mangalore builder Jitendra Kottary, prasanna...
31-01-25 11:05 pm
Mangalore Prasad attavar, RTI Snehamayi Krish...
31-01-25 10:49 pm
Ullal Panchyath, Mangalore; ಉಳ್ಳಾಲ ನಗರಸಭೆ ಸೀಲ...
31-01-25 09:49 pm
01-02-25 10:11 pm
Mangalore Correspondent
Attack on Bus, Hassan, Crime: ಬೆಂಗಳೂರಿನಿಂದ ಮಂ...
31-01-25 10:22 am
Mangalore court, Rape, Crime: 15 ವರ್ಷದ ಬಾಲಕಿ...
30-01-25 11:37 am
Ankola, Mangalore Car, Cash, Crime: ಅಂಕೋಲಾದಲ್...
29-01-25 04:12 pm
Mangalore News, Crime, Court: 14 ವರ್ಷದ ಬಾಲಕಿಯ...
28-01-25 05:17 pm