ಬ್ರೇಕಿಂಗ್ ನ್ಯೂಸ್
05-05-22 03:37 pm HK Desk News ಕರ್ನಾಟಕ
ಮೈಸೂರು, ಮೇ 5: ಪಿಎಸ್ಐ ನೇಮಕಾತಿ ಹಗರಣದಲ್ಲಿ ಸುಮಾರು 300 ಕೋಟಿ ರೂಪಾಯಿ ಹಣ ಪಡೆಯಲಾಗಿದೆ. ಒಬ್ಬೊಬ್ಬ ಅಭ್ಯರ್ಥಿಯಿಂದ 40 ಲಕ್ಷದಿಂದ ಒಂದು ಕೋಟಿ ವರೆಗೆ ಹಣ ಪಡೆದಿದ್ದಾರೆ. ಆದರೆ ಸರಕಾರ ಇಷ್ಟೊಂದು ಗಂಭೀರ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿತ್ತು. ಈಗ ಕೆಲವು ಮಧ್ಯವರ್ತಿಗಳನ್ನು ಮಾತ್ರ ಬಂಧಿಸುತ್ತಿದ್ದಾರೆ. ಹಗರಣಕ್ಕೆ ಕಾರಣವಾದವರನ್ನು ಬಂಧಿಸುತ್ತಿಲ್ಲ. ಪ್ರಮುಖ ಆರೋಪಿಗಳ ಬಂಧನಕ್ಕಾಗಿ, ನಿಷ್ಪಕ್ಷಪಾತ ತನಿಖೆಗಾಗಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಮೂಲಕ ತನಿಖೆ ಆಗಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಈ ಪರಿ ಭ್ರಷ್ಟಾಚಾರ ನಡೆಯುತ್ತಿದ್ದರೂ, ಕೇಂದ್ರದ ನಾಯಕರು ಸರಕಾರವನ್ನು ಸಮರ್ಥಿಸುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಪರ ಮುದ್ರೆ ಒತ್ತುತ್ತಿದ್ದಾರೆ. ಇದರ ನಡುವೆ, ಭ್ರಷ್ಟಾಚಾರದ ಬಗ್ಗೆ ಮಾಹಿತಿ ಕೊಟ್ಟ ಪ್ರಿಯಾಂಕ ಖರ್ಗೆ ಅವರಿಗೆ ಸರಕಾರ ನೋಟೀಸ್ ಕೊಟ್ಟಿದೆ. ಅವರೇನು ಸಾಕ್ಷಿದಾರರಾ, ಅಪರಾಧಿಯಾ.. ಅವನ ಮೇಲೆ ಕ್ರಿಮಿನಲ್ ಪ್ರಕರಣ ಇದೆಯಾ. ಇದು ರಾಜಕೀಯ, ಜನರ ಗಮನ ಬೇರೆಡೆ ಸೆಳೆಯಲು ಸರಕಾರ ಈ ರೀತಿ ಮಾಡುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಕರಣದಲ್ಲಿ ಸಚಿವ ಅಶ್ವತ್ಥ ನಾರಾಯಣ ಕಡೆಯವರು ಇಬ್ಬರಿದ್ದಾರೆ. ಒಬ್ಬ ದರ್ಶನ್ ಗೌಡ, ಇನ್ನೊಬ್ಬ ನಾಗೇಶ್ ಗೌಡ. ಅವರಿಬ್ಬರೂ ಅಶ್ವತ್ಥ ನಾರಾಯಣ್ ಸಂಬಂಧಿಕರು. ಇವರಿಗೆ ಅಂಕಗಳನ್ನು ಜಾಸ್ತಿ ಕೊಡಲಾಗಿದೆ. ಅವರನ್ನು ವಿಚಾರಣೆಗೆ ಕರೆದು ಬಿಟ್ಟು ಬಿಟ್ಟಿದ್ದಾರೆ. ದರ್ಶನ್ ಗೌಡ ಮೊದಲ ಪತ್ರಿಕೆಯಲ್ಲಿ ಕಡಿಮೆ ಅಂಕ ಪಡೆದಿದ್ದ. ಎರಡನೇ ಪತ್ರಿಕೆಯಲ್ಲಿ ಹೆಚ್ಚು ಅಂಕ ಪಡೆದಿದ್ದಾನೆ. ಆತ ಕಿವಿಗೆ ಬ್ಲೂಟೂತ್ ಹಾಕ್ಕೊಂಡು ಪರೀಕ್ಷೆ ಬರೆದಿದ್ದಾನೆ. ಖಾಲಿ ಪೇಪರ್ ಕೊಟ್ಟು ಆಮೇಲೆ ಬರೆಸಿದ್ದಾರೆ.

ಸಿದ್ದರಾಮಯ್ಯ ಸುಳ್ಳು ಹೇಳಿಕೊಂಡು ತಿರುಗುತ್ತಾರೆ ಎಂಬ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ಬಗ್ಗೆ ಕೇಳಿದ್ದಕ್ಕೆ, ಕಳ್ಳರು ಇನ್ನೇನು ಹೇಳುತ್ತಾರೆ, ಕಳ್ಳ ಸತ್ಯ ಒಪ್ಪಿಕೊಳ್ಳುತ್ತಾನೆಯೇ.. ಸಚಿವ, ಎಂಎಲ್ಸಿಗಳು ಪತ್ರ ಬರೆದಾಗ ಏಕೆ ತನಿಖೆ ಮಾಡಲಿಲ್ಲ. ಮರು ಪರೀಕ್ಷೆ ಏಕೆ ಮಾಡಿದ್ರಿ. ಈಗ ವರ್ಗಾವಣೆ ಏಕೆ ಮಾಡಿದ್ರಿ.. ಇವರು ಮಂತ್ರಿಯಾಗಲು ಲಾಯಕ್ಕಾ.. ನಾಲಾಯಕ್ಕಾ. ಒಬ್ಬ ಸರಕಾರದ ಸಚಿವನೇ ಪತ್ರ ಬರೆದರೂ ಏನೂ ಆಗಿಲ್ಲ ಎಂದಿದ್ರು. ಈಗ ಅಕ್ರಮ ಆಗಿದೆ ಅಂದ್ರೆ ಏನರ್ಥ ಎಂದು ಪ್ರಶ್ನೆ ಮಾಡಿದರು.
The PSI recruitment scam has received nearly Rs 300 crore. 40 lakhs to one crore from a candidate. But the government has tried to cover up a serious case. Now only a few intermediaries are being arrested. Not arresting those responsible for the scam. Leader of the Opposition Siddaramaiah has demanded an investigation by the High Court Chief Justice for impartial investigation and imprisonment of the main accused.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am