ಬ್ರೇಕಿಂಗ್ ನ್ಯೂಸ್
08-05-22 09:32 pm HK Desk News ಕರ್ನಾಟಕ
ಮಂಡ್ಯ, ಮೇ 8: ಬಿಜೆಪಿಯ ಬಡ್ಡಿ ಮಕ್ಕಳಿಗೆ ದುಡ್ಡಿನದ್ದೇ ಚಿಂತೆ. ಹಿಂದು ಹೆಸರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯವರು ಹಿಂದೂ ಕಾರ್ಯಕರ್ತರ ಮೇಲೆ ನಿರಂತರ ಕೇಸ್ ಹಾಕ್ತಿದ್ದಾರೆ. ಬರೀ ದುಡ್ಡು ತಿಂದು ತೇಲಾಡ್ತಿದ್ದಾರೆ. ಬಿಜೆಪಿಯವರನ್ನ ನಾವು ಆಯ್ಕೆ ಮಾಡಿ ಕೊಟ್ಟಿರೋದು. ಇವತ್ತು ದೇಶ, ಧರ್ಮ ಅನ್ನೋದನ್ನ ಮರೆತಿದ್ದಾರೆ. ದುಡ್ಡಿನಲ್ಲಿ ಬಿಜೆಪಿಯವರಿಗೆ ಕಣ್ಣು ಮಂಜಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.
ಭಜರಂಗ ಸೇನೆಯ ಕಾರ್ಯಕರ್ತರ ಅಭ್ಯಾಸ ವರ್ಗದಲ್ಲಿ ಮುತಾಲಿಕ್ ಈ ಹೇಳಿಕೆ ನೀಡಿದ್ದು ಹಿಂದುತ್ವ, ಗೋಮಾತೆ, ಮತಾಂತರ ಈಗ ಅವರಿಗೆ ಕಾಣಿಸ್ತಿಲ್ಲ. ಬರೀ 2 ಸಾವಿರದ ದುಡ್ಡಿನ ನೋಟೇ ಕಾಣಿಸ್ತಿದೆ ಅವರಿಗೆ. ಇರೋ ದುಡ್ಡನ್ನ ಎಲ್ಲಿಡೋದು ಅನ್ನೋದೇ ಅವರ ಚಿಂತನೆ. MLA, MP ಗೆಲ್ಲೋದೇಗೆ, ಮಂತ್ರಿ ಆಗೋದು ಹೇಗೆ ಅನ್ನೋದೇ ಚಿಂತೆ. ಬಿಜೆಪಿಯ ಬಡ್ಡಿ ಮಕ್ಕಳಿಗೆ ಅದೇ ಚಿಂತೆಯಾಗಿದೆ. ಈಗ ಹಿಂದೂ ಕಾರ್ಯಕರ್ತರು ನಿಮಗೆ ನೆನಪಾಗ್ತಿಲ್ವ ಬೋಸುಡಿ ಮಕ್ಕಳ್ರಾ.. ದೇಶ, ಧರ್ಮಕ್ಕೋಸ್ಕರ ನಿಮ್ಮನ್ನ ಆರಿಸಿ ಕಳಿಸಿದ್ದು. ಬೆವರು, ರಕ್ತ ಸುರಿಸಿದ ಕಾರ್ಯಕರ್ತರು ನೆನಪಾಗ್ತಿಲ್ವಾ? ನೀಚ, ನಿರ್ಲಜ್ಜರು, ದ್ರೋಹಿಗಳಿದ್ದೀರಿ ನೀವು ಎಂದು ಕಿಡಿಕಾರಿದ್ದಾರೆ.
ಭಿಕ್ಷೆ ಬೇಡುವ ಸ್ವಾಮೀಜಿಗಳಿಂದ ಗಂಡಾಂತರ !
ಮೀಸಲಾತಿ ಕೇಳುವ, ರಾಜಕಾರಣಿಗಳ ಬಳಿ ಭಿಕ್ಷೆ ಬೇಡುವ ಸ್ವಾಮೀಜಿಗಳಿಂದ ದೇಶಕ್ಕೆ ಗಂಡಾಂತರ ಇದೆ. ಮಠಾಧೀಶರು ಜಾತಿಗೆ ಸೀಮಿತವಾಗಿರೋದ್ರಿಂದ ಆಘಾತ, ತೊಂದರೆ ಆಗಿದೆ. ಒಂದು ಕಡೆ ನಾವು ಹಿಂದೂ ಹಿಂದೂ ಅಂತಾ ಹಿಂದೂ ಸಮಾಜ ಸೇರಿಸ್ತಿದ್ದೇವೆ. ಇನ್ನೊಂದು ಕಡೆ ಜಾತಿ ಸ್ವಾಮೀಜಿಗಳು ಜಾತಿ ಸಮಾವೇಶ ಮಾಡೋದು, ಮೀಸಲಾತಿ ಕೇಳೋದು, ರಾಜಕಾರಣಿಗಳ ಬಳಿ ಹೋಗಿ ಭಿಕ್ಷೆ ಬೇಡೋದು ಮಾಡ್ತಿದ್ದಾರೆ. ಇದು ಬಹಳ ಅಸಹ್ಯವಾದ ಪ್ರಕ್ರಿಯೆ ಪ್ರಾರಂಭವಾಗಿದೆ. ಇದರಿಂದ ದೇಶಕ್ಕೆ ಆಘಾತ, ತೊಂದರೆ, ಗಂಡಾಂತರ ಇದೆ. ಖಾವಿಧಾರಿ ಸ್ವಾಮೀಜಿಗಳು ಕೆಲಸ ಮಾಡಬೇಕಾದ ಉದ್ದೇಶ ಬಿಟ್ಟು ಉಳಿದೆಲ್ಲವನ್ನೂ ಮಾಡ್ತಿದ್ದಾರೆ.
ಮೆಡಿಕಲ್, ಎಂಜಿನಿಯರಿಂಗ್ ಕಾಲೇಜುಗಳ ಮೂಲಕ ಲೂಟಿ ಹೊಡೆಯುತ್ತಿದ್ದಾರೆ. ಅವರಿಗೆ ಕಾಲೇಜುಗಳ ಮೂಲಕ ಹಣ ಸಿಕ್ತಿದೆ. ಸರ್ಕಾರ ಬಂದ ಕಡೆ ಸ್ವಾಮೀಜಿಗಳು ಇರ್ತಾರೆ. ಯಾರೂ ಅವರ ವಿರುದ್ಧ ಮಾತಾಡುವಂಗಿಲ್ಲ. ಇದು ಬಹಳ ಆಘಾತಕಾರಿ. ಆದರೂ ಇದನ್ನ ಸ್ವಾಮೀಜಿಗಳಿಗೆ ಹೇಳುವಂತಹ ಶಕ್ತಿ, ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಇದೆಲ್ಲವೂ ಸಂಘಟನೆ ಮೂಲಕವೇ ಸಾಧ್ಯ. ಸಂಘಟನೆ ಮೂಲಕವೇ ಅವರನ್ನೂ, ರಾಜಕಾರಣಿಗಳನ್ನ, ಸಮಾಜವನ್ನ ತಿದ್ದಬೇಕಿದೆ. ಹಾಗಾಗಿ, ಸಂಘಟನೆಯೇ ನಮ್ಮ ದೊಡ್ಡ ಶಕ್ತಿ. ಸಂಘಟನೆಯೇ ನಮ್ಮ ಹೊಣೆ ಎಂದು ಕಾರ್ಯಕರ್ತರ ಅಭ್ಯಾಸ ವರ್ಗದಲ್ಲಿ ಮುತಾಲಿಕ್ ಮಾರ್ಮಿಕ ಮಾತುಗಳನ್ನು ಹೇಳಿದ್ದಾರೆ. ಮಂಡ್ಯದ ಕರ್ನಾಟಕ ಸಂಘದಲ್ಲಿ ಕಾರ್ಯಕ್ರಮ ನಡೆದಿತ್ತು.
BJP is only after money, country will have tough time with begging Swamijis slams Muthalik. Sri Rama Sene chief Pramod Muthalik on Sunday said the playing of Hanuman Chalisa or Suprabhata or Omkara or devotional songs will commence at over 1,000 temples in Karnataka at 5 AM from May 9, as he accused the state government of having failed to take action against loudspeakers installed at mosques.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 09:24 pm
HK News Desk
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
ಯುದ್ಧ ಸಮಸ್ಯೆಗೆ ಪರಿಹಾರ ಅಲ್ಲ, ಮಾತುಕತೆಯಿಂದ ಬಗೆಹರ...
09-05-25 06:49 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm