ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿ ಕಡೆಗೂ ಪೊಲೀಸ್ ಬಲೆಗೆ ; ಸ್ವಾಮೀಜಿ ವೇಷದಲ್ಲಿ ತಲೆಮರೆಸಿಕೊಂಡಿದ್ದ ಧೂರ್ತ ! 

13-05-22 07:40 pm       Bangalore Correspondent   ಕರ್ನಾಟಕ

ಹಾಡಹಗಲೇ ಯುವತಿ ಮೇಲೆ ಆಸಿಡ್​ ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿ ನಾಗೇಶ್​ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸ್ವಾಮೀಜಿ ವೇಷ ಧರಿಸಿ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನ ಶುಕ್ರವಾರ ಬಂಧಿಸಲಾಗಿದೆ. 

ಬೆಂಗಳೂರು, ಮೇ 13 : ಹಾಡಹಗಲೇ ಯುವತಿ ಮೇಲೆ ಆಸಿಡ್​ ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿ ನಾಗೇಶ್​ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸ್ವಾಮೀಜಿ ವೇಷ ಧರಿಸಿ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನ ಶುಕ್ರವಾರ ಬಂಧಿಸಲಾಗಿದೆ. 

ಪ್ರೀತಿಸಲು ನಿರಾಕರಿಸಿದ 24 ವರ್ಷದ ಯುವತಿ ಮೇಲೆ ಏ.28ರಂದು ಬೆಳಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್​ ಠಾಣೆ ವ್ಯಾಪ್ತಿಯ ಸುಂಕದಕಟ್ಟೆಯ ಮುತ್ತೂಟ್ ಫೈನಾನ್ಸ್ ಬಳಿ ನಾಗೇಶ್​ ಆಸಿಡ್​ ಹಾಕಿ ಪರಾರಿಯಾಗಿದ್ದ. ನೋವಲ್ಲಿ ನರಳಾಡುತ್ತಿದ್ದ ಆಕೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಸಾವು-ಬದುಕಿನ ನಡುವೆ ಯುವತಿ ಹೋರಾಡುತ್ತಿದ್ದು, ಚಿಕಿತ್ಸೆ ಮುಂದುವರಿದಿದೆ. ಇತ್ತ ತಲೆಮರೆಸಿಕೊಂಡಿದ್ದ ಆರೋಪಿ ಪತ್ತೆಗಾಗಿ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಹುಡುಕಾಟ ನಡೆಸಿದ್ದರು. 

16 ದಿನದ ಬಳಿಕ ತಿರುವಣ್ಣಾಮಲೈನ ಆಶ್ರಮವೊಂದರಲ್ಲಿ ಯುವಕನೊಬ್ಬ ಸ್ವಾಮೀಜಿ ವೇಷದಲ್ಲಿ ಇರುವುದು ಮಾಹಿತಿ ತಿಳಿದ ಪೊಲೀಸರು ಭಕ್ತರ ಸೋಗಲ್ಲಿ ಆಶ್ರಮಕ್ಕೆ ತೆರಳಿದ್ದರು. ಆರೋಪಿ ಎನ್ನುವುದು ಖಚಿತವಾಗುತ್ತಿದ್ದಂತೆ ನಾಗೇಶ್​ನನ್ನು ಬಂಧಿಸುವಲ್ಲಿ ಕರೆತಂದಿದ್ದಾರೆ.

27-year-old Nagesh, accused of carrying out the shocking acid attack on 24-year-old Aasha (name changed) in broad daylight in the city recently, reportedly stalked many women, including his neighbour in Tamil Nadu. According to sources, Nagesh, a native of Kodiyalam in Krishnagiri district of Tamil Nadu, had harassed a woman neighbour at his native. The incident was reported to the police there, who summoned him and let him off with a warning as the woman did not file a complaint.