ಬ್ರೇಕಿಂಗ್ ನ್ಯೂಸ್
14-05-22 06:11 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 14: ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು ರಾಜ್ಯಸಭೆಯ ಖಾಲಿಯಿರುವ ಎರಡು ಸದಸ್ಯ ಸ್ಥಾನಗಳಿಗೆ ಐವರು ಅಭ್ಯರ್ಥಿಗಳ ಹೆಸರನ್ನು ಶಿಫಾರಸು ಮಾಡಲಾಗಿದೆ. ಇದೇ ವೇಳೆ, ಮೇಲ್ಮನೆಗೆ ಬಿಎಸ್ವೈ ಪುತ್ರ ವಿಜಯೇಂದ್ರ ಅವರನ್ನು ಕಣಕ್ಕಿಳಿಸಲು ಕೋರ್ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಮಲ್ಲೇಶ್ವರಂನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವಿಧಾನ ಪರಿಷತ್ ನಾಲ್ಕು ಸ್ಥಾನಗಳ ಪೈಕಿ ಒಂದಕ್ಕೆ ವಿಜಯೇಂದ್ರ ಹೆಸರು ಅಂತಿಮವಾಗಿದೆ. ಉಳಿದ ಮೂರು ಸ್ಥಾನಗಳಿಗೆ 15 ಹೆಸರು ಶಿಫಾರಸು ಮಾಡಲಾಗಿದೆ. ಈ ಹಿಂದೆ ಪರಿಷತ್ ಸದಸ್ಯರಾಗಿದ್ದ ಲಕ್ಷ್ಮಣ ಸವದಿ ಸೇರಿದಂತೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ, ಸಿದ್ದರಾಜು, ರಾಜೇಂದ್ರ, ಮಹೇಶ್ ಟೆಂಗಿನಕಾಯಿ ಹೆಸರನ್ನು ಪರಿಷತ್ ಸ್ಥಾನಕ್ಕೆ ಶಿಫಾರಸು ಮಾಡಲಾಗಿದೆ.
ರಾಜ್ಯಸಭೆಯ ಎರಡು ಸ್ಥಾನದಲ್ಲಿ ಒಂದು ಸ್ಥಾನಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರು ಅಂತಿಮಗೊಳಿಸಲಾಗಿದೆ. ಉಳಿದ ಒಂದು ಸ್ಥಾನಕ್ಕೆ ಕೆ.ಸಿ.ರಾಮಮೂರ್ತಿ ಸೇರಿ ಐವರ ಹೆಸರು ಶಿಫಾರಸು ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಪಟ್ಟಿಯಲ್ಲಿ ನಿರ್ಮಲ್ ಕುಮಾರ್ ಸುರಾನ, ಉದ್ಯಮಿ ಪ್ರಕಾಶ್ ಶೆಟ್ಟಿ, ಸಿನಿಮಾ ನಿರ್ಮಾಪಕ ಲಹರಿ ವೇಲು ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ. ಪ್ರಕಾಶ್ ಶೆಟ್ಟಿ ಹೆಸರನ್ನು ಕಳೆದ ಬಾರಿಯೂ ರಾಜ್ಯ ಬಿಜೆಪಿ ಕೇಂದ್ರಕ್ಕೆ ಕಳಿಸಿಕೊಟ್ಟಿತ್ತು.
ವಿಧಾನ ಪರಿಷತ್ ಸದಸ್ಯತ್ವ ಪಡೆಯುವ ಮೂಲಕ ವಿಜಯೇಂದ್ರ ಸಚಿವ ಸ್ಥಾನ ಪಡೆಯಲಿದ್ದಾರೆಯೇ ಎಂಬ ನಿರೀಕ್ಷೆ ಮೂಡಿದೆ. ಸಿಎಂ ಬೊಮ್ಮಾಯಿ ಮೇ 21ರ ರಾತ್ರಿ ದಾವೋಸ್ ಪ್ರವಾಸ ತೆರಳಲಿದ್ದು, 26ರಂದು ಬೆಂಗಳೂರಿಗೆ ಮರಳಲಿದ್ದಾರೆ. ಆನಂತರ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದೆ.
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮುಂತಾದವರು ಭಾಗವಹಿಸಿದ್ದರು.
Former chief minister B.S. BS Yeddiyurappa, son of Yeddyurappa It has been decided at the BJP Core Committee to make BY Vijayendra a member of the Legislative Council. A major Core Committee meeting was held today at the state BJP office in Malleswaram and it has been decided to send Vijayendra's name to the Central Election Committee as the BJP candidate for the council elections. The Central Committee has decided to send Nirmala Sitharaman to the Rajya Sabha again.
27-02-25 05:50 pm
HK News Desk
Forest Fire, Kanakapura, Bangalore: ಒಣಹುಲ್ಲು...
27-02-25 05:48 pm
ಕುಂಭಮೇಳಕ್ಕೆ ಹೋಗಿರೋದು ತಪ್ಪಾದ್ರೆ ಡಿಕೆಶಿ ಅವರನ್ನು...
27-02-25 03:28 pm
DK Shivakumar, BJP, Amit Shah, congress: ಡಿಕೆ...
27-02-25 01:46 pm
ಸಿಎಂಗೆ ಕ್ಲೀನ್ ಚಿಟ್ ಕೊಟ್ಟರೂ, ಮುಡಾ ಹಗರಣದ ಬಗ್ಗೆ...
26-02-25 10:43 pm
26-02-25 05:38 pm
HK News Desk
Corruption, Amit Shah, MK Stalin: ಕ್ಷೇತ್ರ ಪುನ...
26-02-25 05:11 pm
CBI raid, Gain Bitcoin: 6,600 ಕೋಟಿ ರೂ. ಕ್ರಿಸ್...
26-02-25 12:47 pm
Vijay Wardhan, UPSC story: Success story 35 ಬ...
24-02-25 10:14 pm
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
27-02-25 11:07 pm
Mangalore Correspondent
Kotekar Robbey case, Bhaskar Belchada, Saheb...
27-02-25 10:48 pm
Talat Gang Mangalore, Ankola Robbery case: ಅಂ...
27-02-25 10:31 pm
Mangalore News; ನಿವೃತ್ತ ಸರಕಾರಿ ನೌಕರರಿಗೆ 7ನೇ ವ...
27-02-25 10:09 pm
Yeddyurappas, Ravindra shetty, Mangalore: ಬಿಎ...
27-02-25 07:09 pm
26-02-25 10:48 pm
HK News Desk
Sirsi Crime, stabbing: ಶಿವರಾತ್ರಿ ಹಬ್ಬಕ್ಕೆ ಮನೆ...
26-02-25 01:27 pm
Urwa Police, Mangalore Crime, online Fraud: ಕ...
25-02-25 08:10 pm
Mangalore, Kotekar bank robbery, Bhaskar Belc...
25-02-25 05:18 pm
Kerala Murder, Crime, Affan: ತಿರುವನಂತಪುರ ; ಒಂ...
25-02-25 01:37 pm