ಬ್ರೇಕಿಂಗ್ ನ್ಯೂಸ್
14-05-22 10:39 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 14 : ರಾಜ್ಯ ವ್ಯಾಪ್ತಿಯಲ್ಲಿರುವ ಮಸೀದಿಗಳಲ್ಲಿ ಬೆಳಗಿನ ಆಝಾನ್ ಕರೆಗೆ ಧ್ವನಿವರ್ಧಕ ಬಳಸದಂತೆ ಧಾರ್ಮಿಕ ಗುರುಗಳು, ಜನಪ್ರತಿನಿಧಿಗಳು ಮೌಲಾನಗಳು ಮತ್ತು ಮಸೀದಿ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.
ಶನಿವಾರ ನಗರದಲ್ಲಿ ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ರಶಾದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೆಳಗಿನ ಜಾವದ ಆಝಾನ್ ಸಂದರ್ಭದಲ್ಲಿ ಮಾತ್ರ ಯಾರು ಸಹ ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಮಾಡದಂತೆ ತೀರ್ಮಾನ ಪ್ರಕಟಿಸಲಾಯಿತು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ರಶಾದಿ, ಸುಪ್ರೀಂಕೋರ್ಟಿನ ಆದೇಶದ ಅನ್ವಯ ಹಾಗೂ ರಾಜ್ಯ ಸರಕಾರದ ಸುತ್ತೋಲೆಯನ್ನು ಎಲ್ಲರೂ ಗೌರವಿಸುವ ಜೊತೆಗೆ, ಯಾರು ಧ್ವನಿವರ್ಧಕಕ್ಕೆ ಪರವಾನಿಗೆ ಪಡೆದಿಲ್ಲವೋ ಅವರು ಕೂಡಲೇ ಕಾನೂನು ಕ್ರಮಗಳನ್ನು ಪಾಲಿಸಿ ಎಂದರು.
ದಿನಕ್ಕೆ ಐದು ಬಾರಿ ಆಝಾನ್ ಕರೆ ನೀಡಲಾಗುತ್ತಿದೆ. ಹಾಗಾಗಿ, ಬೆಳಗಿನ ಜಾವ ಮಾತ್ರ ಬಿಟ್ಟು, ಉಳಿದ ಸಂದರ್ಭದಲ್ಲಿ ಧ್ವನಿವರ್ಧಕ ಬಳಕೆ ಮಾಡಲು ಕಾನೂನು ಮತ್ತು ಸರಕಾರವೇ ಅವಕಾಶ ನೀಡಿದೆ. ಇದು ಬರೀ ಮುಸ್ಲಿಮ್ ಸಮುದಾಯಕ್ಕೆ ಮಾತ್ರ ಸೀಮಿತವಲ್ಲ. ಬದಲಾಗಿ, ಎಲ್ಲ ಧರ್ಮದ ಧಾರ್ಮಿಕ ಸಂಸ್ಥೆಗಳು, ಕಟ್ಟಡಗಳಿಗೂ ಅನ್ವಯ ಆಗುತ್ತದೆ ಎಂದು ಹೇಳಿದ್ದಾರೆ.
ಆಮೂಲಕ ರಾತ್ರಿ 10 ರಿಂದ ಬೆಳಗ್ಗೆ 6ರ ವರೆಗೆ ಮೈಕ್ ನಿಷೇಧಿಸಿರುವ ರಾಜ್ಯ ಸರಕಾರದ ಕ್ರಮಕ್ಕೆ ತಕ್ಕಂತೆ ಮೈಕ್ ಅಳವಡಿಸದೆ ಆಝಾನ್ ಕೂಗಲು ನಿರ್ಧರಿಸಲಾಗಿದೆ.
Muslim community leaders have appealed to all mosques in Karnataka not to use loudspeakers for the early morning azaan fajr, in line with the Supreme Court order that bans the use of loudspeakers from 10:00 p.m to 6:00 a.m. For the rest of the prayers through the day, loudspeakers will be used within permitted noise levels, community leaders decided. Ameer-E-Shariat of Karnataka, Moulana Sageer Ahmed Rashadi chaired a meeting of community leaders that included the ulema, legal experts and elected representatives and announced this decision.
27-05-26 06:26 pm
HK News Staffer
ನಾಗಲಕ್ಷ್ಮಿಗೆ ಸುತ್ತಿಕೊಂಡ ಮತ್ತೊಂದು ವಿವಾದ ; ಉಡುಪ...
27-05-26 04:58 pm
ಡಿಕೆಗೆ ಪಟ್ಟ ; ಬಹುತೇಕ ಸಚಿವರಿಗೆ ಕೊಕ್- ಹೊಸಬರಿಗೆ...
27-05-26 01:41 pm
ರಾಜ್ಯ ರಾಜಕೀಯದಲ್ಲಿ ಭಾರೀ ಕ್ಲೈಮ್ಯಾಕ್ಸ್ ; ಸಿಎಂ ಸಿ...
26-05-26 11:03 pm
ದೈವಕ್ಕೆ ಅಪಮಾನ; ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ...
26-05-26 08:51 pm
27-05-26 09:17 pm
HK News Desk
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸ್ಥಾನಕ್ಕೆ ರಾಜಿನಾ...
25-05-26 08:18 pm
27-05-26 12:29 pm
HK News Desk
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
ಎಂಆರ್ ಪಿಎಲ್ ಕೋಕ್ ಸಲ್ಫರ್ ಮಾಲಿನ್ಯ ; ಆರು ತಿಂಗಳಲ್...
25-05-26 09:57 pm
‘ಲ್ಯಾಂಡ್ ಲಿಂಕ್ಸ್’ ಸಂಸ್ಥೆಯ ನಾಲ್ಕು ಸಭಾಭವನ ಏಕಕಾ...
25-05-26 04:23 pm
27-05-26 08:34 pm
HK News Staffer
ಉರ್ವ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಕೇರಳಕ್ಕೆ...
27-05-26 07:56 pm
ಬೈಜುಸ್ ಸಂಸ್ಥಾಪಕ ರವೀಂದ್ರನ್ಗೆ ಭಾರೀ ಆಘಾತ ; ಜೈಲ...
27-05-26 01:30 pm
ಪ್ರಿಯಕರನ ಕಿರುಕುಳ ; ಮುಂಬೈನಲ್ಲಿ ರೇಡಿಯೋ ಜಾಕಿಯಾಗಿ...
27-05-26 12:42 pm
ಇಸ್ರೇಲ್ನಿಂದ ರಜೆ ಮೇಲೆ ಊರಿಗೆ ಬಂದವನ ದುರಂತ ಅಂತ್ಯ...
26-05-26 02:43 pm