ಬ್ರೇಕಿಂಗ್ ನ್ಯೂಸ್
16-05-22 01:07 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 16 : ಪಿಎಸ್ಐ ನೇಮಕಾತಿ ಅಕ್ರಮದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮರು ಪರೀಕ್ಷೆ ನಡೆಸಲು ಮುಂದಾಗಿರುವುದನ್ನು ವಿರೋಧಿಸಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಹುದ್ದೆ ಗಿಟ್ಟಿಸಿಕೊಂಡ ಅಭ್ಯರ್ಥಿಗಳು ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಪಿಎಸ್‌ಐ ಅಭ್ಯರ್ಥಿಗಳು ರಕ್ತದಲ್ಲಿ ಬರೆದಿದ್ದಾರೆ ಎನ್ನಲಾದ ಪತ್ರ ಜಾಲತಾಣದಲ್ಲಿ ವೈರಲ್ ಆಗಿದೆ.
ಎರಡು ಪುಟಗಳ ಪತ್ರ ಬರೆದು ನ್ಯಾಯ ಓದಗಿಸುವಂತೆ ಮನವಿ ಮಾಡಿದ್ದಾರೆ. ಆದರೆ ಈ ಪತ್ರ ಬರೆದವರು ಯಾರು ಎಂಬುದು ತಿಳಿದುಬಂದಿಲ್ಲ. ತಮ್ಮ ಹೆಸರನ್ನು ಪತ್ರದಲ್ಲಿ ನಮೂದಿಸಿಲ್ಲ. ಪಿಎಸ್‌ಐ ಪರೀಕ್ಷೆಯಲ್ಲಿ ಮೋಸ ಹೋದವರಿಗೆ ನ್ಯಾಯ ಸಿಗಬೇಕು. ಅನ್ಯಾಯ ಮಾಡಿದವರನ್ನ ಜೈಲಿಗೆ ಹಾಕಿ. ಆದರೆ ನಿಯತ್ತಿನಿಂದ ಪರೀಕ್ಷೆ ಬರೆದವರಿಗೆ ಮೋಸ ಆಗಬಾರದು. 2021ರಲ್ಲಿ ನಡೆದ ಎಫ್ಡಿಎ ಪರೀಕ್ಷೆಯಲ್ಲಿ ಅಕ್ರಮವಾಗಿದೆ ಅದನ್ನು ಕೂಡ ತನಿಖೆ ಮಾಡಿ ನ್ಯಾಯ ಕೊಡಿಸಬೇಕು ಎಂದು ಪತ್ರದಲ್ಲಿ ಬರೆದಿದ್ದಾರೆ.
ಟೆರರಿಸ್ಟ್ಗಳ ಜೊತೆ ಕೈಜೋಡಿಸುವ ಬೆದರಿಕೆ !
ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ತನಿಖೆ ಮಾಡಿ ನ್ಯಾಯ ಕೋಡಿಸುತ್ತಾರೆ ಎನ್ನುವ ನಂಬಿಕೆ ಇದೆ. ಒಂದು ವೇಳೆ ನ್ಯಾಯ ಕೊಡಿಸದಿದ್ದರೆ ನಾವು ಮುಂದೆ ಟೆರರಿಸ್ಟ್ಗಳ ಜೊತೆಗೆ ಕೈಜೋಡಿಸುತ್ತೇವೆ ಎಂದು ಪತ್ರದಲ್ಲಿ ಬೆದರಿಕೆ ಹಾಕಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳು ಹಣ ಇದ್ದವರಿಗೆ ಮಾತ್ರ ಎನ್ನುವ ವ್ಯವಸ್ಥೆ ಬಂದುಬಿಟ್ಟಿದೆ. ಸರ್ಕಾರದ ಈ ವ್ಯವಸ್ಥೆಯಿಂದ ನಾವು ಮಾನಸಿಕವಾಗಿ ಸತ್ತು ಹೋಗಿದ್ದೇವೆ. ಆದ್ದರಿಂದ ಇನ್ನು ಮುಂದೆ ಸರ್ಕಾರಿ ಹುದ್ದೆಗಳ ಪರೀಕ್ಷೆಗಳನ್ನ ಬರೆಯುವುದಿಲ್ಲ ಎಂದು ತಿಳಿಸಿದ್ದಾರೆ.
ಸರಕಾರದ ವ್ಯವಸ್ಥೆಯಿಂದಾಗಿ ಟೆರರಿಸ್ಟ್ ಅಥವಾ ನಕ್ಸಲೈಟ್ ಸಂಘಟನೆ ಸೇರಲು ಇಚ್ಛಿಸಿದ್ದೇವೆ. ಅವರ ಬಳಿ ಹಣ ಪಡೆದು ಬಡ ಕುಟುಂಬಕ್ಕೆ ನಾವು ಸಹಾಯ ಮಾಡುತ್ತೇವೆ. ನಾವು ಎಂಟು ಮಂದಿ ಇದ್ದೇವೆ, ನಾವೆಲ್ಲರು ಈ ನಿರ್ಧಾರ ಮಾಡಿದ್ದೇವೆ ಎಂದು ನೊಂದ ಪಿಎಸ್‌ಐ ಅಭ್ಯರ್ಥಿಗಳು ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಅಲವತ್ತುಕೊಂಡಿದ್ದಾರೆ.
Amid an ongoing investigation into the alleged irregularities in the examination for the recruitment of 545 police sub-inspectors (PSI), a section of candidates have written a 2-page letter to Prime Minister Narendra Modi using their blood asking him to ensure justice to them. The letter which has been doing rounds on social media also demanded a thorough investigation into the case. The candidates in their letter also threatened to join a militant group if they did not get justice.
28-11-24 09:41 pm
HK News Desk
ಲಾಕಪ್ ಡೆತ್ ; ನಾಲ್ವರು ಪೊಲೀಸರಿಗೆ ಏಳು ವರ್ಷ ಜೈಲು...
28-11-24 05:04 pm
MLA Gaviyappa, DK Shivakumar: ಯಾವುದೇ ಕಾರಣಕ್ಕೂ...
26-11-24 10:46 pm
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
28-11-24 09:58 pm
Mangalore Correspondent
Mangalore, DFYI protest, Anupam Agarwal: ಪೊಲೀ...
28-11-24 06:05 pm
VHP, Mangalore, Bangladesh: ಬಾಂಗ್ಲಾದೇಶದಲ್ಲಿ ಹ...
28-11-24 03:24 pm
Belthangady suicide, Crime, Mangalore; ನಂಬಿಸಿ...
28-11-24 02:13 pm
Mangalore, Anupam Agarwal, Ramanatha Rai: ರಸ್...
28-11-24 01:56 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm