ಬ್ರೇಕಿಂಗ್ ನ್ಯೂಸ್
17-05-22 02:42 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 17: ದಪ್ಪಗಿದ್ದೇನೆಂದು ಬೊಜ್ಜು ಕರಗಿಸಲು ಹೋಗಿ ಸರ್ಜರಿಗೆ ಒಳಗಾಗಿದ್ದ ಯುವ ಕಿರುತೆರೆ ನಟಿ ಚೇತನಾ ರಾಜ್ (21) ದಾರುಣ ಸಾವು ಕಂಡ ಘಟನೆ ನಡೆದಿದ್ದು ಪೋಷಕರು ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ನವರಂಗ್ ಸರ್ಕಲ್ ನಲ್ಲಿರುವ ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಫ್ಯಾಟ್ ಸರ್ಜರಿ ವೇಳೆ ಶ್ವಾಸಕೋಶದಲ್ಲಿ ನೀರಿನಂಶ ಶೇಖರಣೆಯಾಗಿ ಸಾವು ಸಂಭವಿಸಿದೆ ಎನ್ನುವ ಆರೋಪ ಕೇಳಿಬಂದಿದೆ. ಬೆಂಗಳೂರು ಉತ್ತರ ತಾಲೂಕಿನ ಅಬ್ಬಿಗೆರೆಯಲ್ಲಿ ಚೇತನಾ ರಾಜ್ ಕುಟುಂಬ ವಾಸವಿತ್ತು. ಆಸ್ಪತ್ರೆಯಲ್ಲಿ ಅಗತ್ಯ ಸಲಕರಣೆ ಹಾಗೂ ಪೋಷಕರ ಒಪ್ಪಿಗೆ ಪಡೆಯದೆ ಈ ರೀತಿಯ ಅಪಾಯಕಾರಿ ಸರ್ಜರಿಗೆ ವೈದ್ಯರು ಮುಂದಾಗಿದ್ದರು ಎನ್ನಲಾಗಿದ್ದು, ಪೋಷಕರು ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚೇತನಾರಾಜ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರುತ್ತಿದ್ದ ಗೀತಾ, ದೊರೆಸಾನಿ, ಒಲವಿನ ನಿಲ್ದಾಣ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಳು. ಇನ್ನೂ ಬಿಡುಗಡೆಯಾಗದ ಹವಾಯಾಮಿ ಸಿನಿಮಾದಲ್ಲೂ ನಟಿಸಿದ್ದಳು. ತೂಕ ಇಳಿಸಿಕೊಳ್ಳಲು ಹೋಗಿ ಎಡವಟ್ಟು ಮಾಡಿಕೊಂಡಿದ್ದು, ದುರಂತ ಸಾವು ಕಂಡಿದ್ದಾಳೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಚೇತನಾ ತಂದೆ ವರದರಾಜು, ದಯವಿಟ್ಟು ಯಾರು ಕೂಡ ತಮ್ಮ ತೂಕ ಇಳಿಸಿಕೊಳ್ಳಲು ಹೋಗಬೇಡಿ. ದಿಢೀರ್ ಆಗಿ ಸಣ್ಣ ಆಗಲು ಹೋದರೆ ಸಾವೇ ಗತಿ. ನೀವು ಈಗ ಹೇಗಿದ್ದೀರೋ ಹಾಗೇ ಇದ್ದುಬಿಡಿ. ಮಕ್ಕಳು ಮನೆಯಲ್ಲಿ ತಿಳಿಸದೆ ಸರ್ಜರಿಗೆ ಒಳಗಾದರೆ ಇಂತಹ ಪರಿಸ್ಥಿತಿ ಬರುತ್ತದೆ. ದಯವಿಟ್ಟು ಯಾರು ಕೂಡ ಫ್ಯಾಟ್ ಸರ್ಜರಿಗೆ ಒಳಗಾಗಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
Chetana Raj, a television actress, died at the Shetty Cosmetic Hospital in Navrang Circle. Water accumulated in her lungs as a result of the fat surgery. Parents are furious that their child perished as a result of medical malpractice. Munilakshmi, the actress's mother, sobbed in front of her body. Chetana's father, Varadaraj, claimed that the fat surgery was done without the proper equipment or parental approval.
02-07-22 10:15 pm
HK News Desk
ಮಕ್ಕಳನ್ನು ಮನೆಗೆ ಕರೆಸಿ ವಿಕೃತಿ ; 40ಕ್ಕೂ ಹೆಚ್ಚು...
02-07-22 11:17 am
ನಿಮ್ಮ 17 ಎಪಿಸೋಡ್ ಸಿಡಿಗಳು ನನ್ನ ಬಳಿಯಿವೆ, ತಾಕತ್ತ...
01-07-22 05:32 pm
ಬೆಂಗಳೂರು ರಸ್ತೆ ಗುಂಡಿಗಳನ್ನು ಮುಚ್ಚಲು ನಿಮಗೇನು ಕಷ...
30-06-22 02:12 pm
ಜುಲೈ 1 ರಿಂದ ಬೆಂಗಳೂರಿನ NICE ರಸ್ತೆಯ ಟೋಲ್ ಹೆಚ್ಚಳ...
30-06-22 01:54 pm
02-07-22 10:54 am
HK News Desk
ದೇಶದಲ್ಲಿನ ಅನಾಹುತಗಳಿಗೆ ನೂಪುರ್ ಶರ್ಮಾ ಒಬ್ಬಳೇ ಕಾರ...
01-07-22 08:50 pm
ಭಾರತಕ್ಕೆ ರಷ್ಯಾ ತೈಲ ಪ್ರವಾಹ ; ಇರಾಕ್, ಸೌದಿ ಅರೇಬಿ...
01-07-22 03:14 pm
ಮೋದಿ, ಅಮಿತ್ ಷಾ, ಯೋಗಿಗೆ ಕೊಲೆ ಬೆದರಿಕೆ ಪೋಸ್ಟ್ ;...
01-07-22 02:16 pm
ಒಂದು ಕಾಲದ ಆಟೋ ಡ್ರೈವರ್, ಪ್ರಬಲ ಹಿಂದುತ್ವದ ಪ್ರತಿಪ...
30-06-22 11:06 pm
02-07-22 10:10 pm
HK News Desk
ಗೋಹತ್ಯೆಗೆ ಅವಕಾಶವೇ ಇಲ್ಲ ; ಬಕ್ರೀದ್ ವೇಳೆ ಗೋಮಾಂಸ...
01-07-22 11:25 pm
ಅಡ್ಯಾರ್, ವಳಚ್ಚಿಲ್ ನಲ್ಲಿ ಮೇಘಸ್ಫೋಟ ಆಗಿತ್ತೇ? ಜನ...
30-06-22 11:16 pm
ಮಂಗಳೂರು ನಗರ ಡಿಸಿಪಿ ಹುದ್ದೆಗೆ ಅನ್ಶು ಕುಮಾರ್ ಶ್ರೀ...
30-06-22 08:43 pm
ಮುಂದುವರಿದ ಮಳೆ ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ...
30-06-22 07:24 pm
02-07-22 10:45 pm
HK News Desk
ಸಿಮೆಂಟ್, ಸ್ಟೀಲ್ ಮೇಲೆ ಹೂಡಿಕೆ ಮಾಡಿದರೆ ಭರಪೂರ ಲಾಭ...
02-07-22 10:24 pm
ಕನ್ನಯ್ಯಲಾಲ್ ಕೊಲೆಗೂ ಮೊದಲೇ ಮಹಾರಾಷ್ಟ್ರದಲ್ಲಿ ಫಾರ್...
02-07-22 05:02 pm
ವಿದೇಶದಿಂದ ಬಂದಿದ್ದ ಕಾಸರಗೋಡಿನ ಯುವಕನ ಅಪಹರಿಸಿ ಕೊಲ...
01-07-22 07:42 pm
ಕೇಸರಿ ಶಾಲು ಹಾಕಿದವರಿಂದ ಹಲ್ಲೆಯೆಂದು ಬಿಂಬಿಸಿ ಕೋಮು...
30-06-22 10:28 pm