ಬ್ರೇಕಿಂಗ್ ನ್ಯೂಸ್
20-05-22 10:00 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 20: ಬೆಂಗಳೂರು ಏರ್ಪೋರ್ಟಲ್ಲಿ ಬಾಂಬ್ ಇದೆಯೆಂದು ಹುಸಿ ಬಾಂಬ್ ಕರೆ ಮಾಡಿ, ತನ್ನ ಭಾವನನ್ನೇ ಜೈಲಿಗೆ ಕಳುಹಿಸಲು ಪ್ಲಾನ್ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಏರ್ಪೋರ್ಟ್ ಲ್ಯಾಂಡ್ ನಂಬರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ಬಾಂಬ್ ಇಟ್ಟಿದ್ದಾಗಿ ಹೇಳಿಕೊಂಡಿದ್ದ. ಕೂಡಲೇ ಪೊಲೀಸರು ಅಲರ್ಟ್ ಆಗಿದ್ದು ತಪಾಸಣೆ ನಡೆಸಿದ್ದಾರೆ. ಆನಂತರ ಇದು ಹುಸಿ ಕರೆ ಎನ್ನುವುದು ದೃಢಪಟ್ಟಿತ್ತು. ಪೊಲೀಸರು ಕರೆ ಮಾಡಿದ ವ್ಯಕ್ತಿಯನ್ನು ಬೆನ್ನತ್ತಿದ್ದು ವಶಕ್ಕೆ ಪಡೆದಿದ್ದಾರೆ. ಕರೆ ಮಾಡಿದ ವೇಳೆ, ಆತ ತನ್ನ ಹೆಸರನ್ನೂ ಹೇಳಿದ್ದು ಇಂಥ ಜಾಗದಿಂದ ಮಾತನಾಡುತ್ತಿರುವುದಾಗಿ ಹೇಳಿದ್ದ.
ಆದರೆ ಕರೆ ಮಾಡಿದ್ದ ಮೊಬೈಲ್ ನಂಬರ್ ಆಧರಿಸಿ ತನಿಖೆ ನಡೆಸಿದಾಗ ಸುಭಾಶಿಷ್ ಗುಪ್ತಾ ಎಂಬ ಬಿಹಾರ ಮೂಲದ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ. ವಿಚಾರಣೆ ನಡೆಸಿದಾಗ, ತಾನೇ ಕರೆ ಮಾಡಿದ್ದಾಗಿ ಒಪ್ಪಿಕೊಂಡಿದ್ದು ತನ್ನ ಅಕ್ಕನಿಗೆ ವಂಚಿಸಿ ಡೈವೋರ್ಸ್ ನೀಡಿದ್ದ ಭಾವನನ್ನು ಜೈಲಿಗೆ ಕಳುಹಿಸಲು ಪ್ಲಾನ್ ಮಾಡಿರುವ ವಿಚಾರ ತಿಳಿಸಿದ್ದಾನೆ. ಸುಭಾಶಿಷ್ ಈ ಹಿಂದೆ ಬೆಂಗಳೂರಿನ ಏರ್ಪೋರ್ಟ್ ನಲ್ಲಿ ಕೆಲಸಕ್ಕಿದ್ದು ಆನಂತರ ಕೆಲಸ ಬಿಟ್ಟಿದ್ದ.
ಹತ್ತು ವರ್ಷಗಳ ಹಿಂದೆ ತನ್ನ ಅಕ್ಕನನ್ನು ಮದುವೆಯಾಗಿದ್ದ ವ್ಯಕ್ತಿ ಆಕೆಯನ್ನು ಬಿಟ್ಟು ಬೇರೆ ಮದುವೆಯಾಗಿದ್ದ. ಈ ಬಗ್ಗೆ ದ್ವೇಷ ಹೊಂದಿದ್ದ ಸುಭಾಶಿಷ್, ಅಕ್ಕನಿಗೆ ವಂಚಿಸಿದವನನ್ನು ಜೈಲು ಪಾಲು ಮಾಡಬೇಕೆಂದು ಪ್ಲಾನ್ ಹಾಕಿ, ಏರ್ಪೋರ್ಟಿಗೆ ಕರೆ ಮಾಡಿ ಆತನ ಹೆಸರು ಹೇಳಿದ್ದ. ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ನಿಜ ವಿಷಯ ಬಾಯಿಬಿಟ್ಟಿದ್ದಾನೆ.
The security apparatus at the Kempegowda International Airport in Bengaluru went into a tizzy in the wee hours of Friday following a hoax call about the presence of a bomb. According to police, the airport police control room received a call at about 3.45 AM resulting in a vigorous drill for the security personnel deployed there. After about three and half hours of search, the officials concluded that it was a hoax call.
05-02-25 06:39 pm
HK News Desk
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
06-02-25 02:21 pm
HK News Desk
Kerala Suicide, Ragging: ಕೇರಳದಲ್ಲಿ 15ರ ಬಾಲಕ ಮ...
04-02-25 10:49 pm
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
05-02-25 10:51 pm
Mangalore Correspondent
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
Mangalore gun misfire, congress, chittaranjan...
04-02-25 07:47 pm
06-02-25 12:00 pm
HK News Desk
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm