ಬ್ರೇಕಿಂಗ್ ನ್ಯೂಸ್
22-05-22 03:13 pm HK News Desk ಕರ್ನಾಟಕ
ಚಿಕ್ಕಮಗಳೂರು, ಮೇ 22 : ಹೋಮ ಮಂಟಪದಲ್ಲಿ ಮಾಂಸದೂಟ, ಗುಹೆಯಲ್ಲಿ ಗೋರಿ ಪೂಜೆ ಬಳಿಕ ದತ್ತಪೀಠದ ಆವರಣದಲ್ಲಿ ನಮಾಜ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಇನಾಂ ದತ್ತಾತ್ರೇಯ ಪೀಠ ಸಮೀಪದ ಮುಂಭಾಗದಲ್ಲಿ ಮುಸ್ಲಿಂ ಸಮುದಾಯದವರು ಪ್ರಾರ್ಥನೆ ಸಲ್ಲಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದರ ಬೆನ್ನಲ್ಲೇ ವಿವಾದ ಹೊತ್ತಿಕೊಂಡಿದೆ. ಕೆಲವು ದಿನಗಳ ಹಿಂದೆ ದತ್ತಪೀಠದ ಬಳಿ ಮಾಂಸಹಾರ ಬೇಯಿಸಲಾಗುತ್ತಿದೆ, ಪವಿತ್ರ ಕ್ಷೇತ್ರ ಅಪವಿತ್ರ ಮಾಡಲಾಗುತ್ತಿದೆ ಎಂದು ಆರೋಪಿಸಿ ಹಿಂದು ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು.
ನಮಾಜ್ ವಿಡಿಯೋ ಹೊರಬರುತ್ತಲೇ ಪ್ರಾರ್ಥನೆ ಸಲ್ಲಿಸುತ್ತಿರುವ ವಿಡಿಯೋ ಹಳೆಯದ್ದು ಎಂದು ಕೆಲವರು ವಾದಿಸಿದ್ದಾರೆ. ವಿವಾದಿತ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿರುವುದು ನ್ಯಾಯಾಲಯದ ಆದೇಶ ಉಲ್ಲಂಘನೆಯಾಗಿದ್ದು ವಿಡಿಯೋ ವೈರಲ್ ಬೆನ್ನಲ್ಲೇ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಕಂದಾಯ ಮತ್ತು ಮುಜರಾಯಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಪ್ರಕರಣ ಸಂಬಂಧ ವರದಿ ಸಲ್ಲಿಸುವಂತೆ ತಹಶೀಲ್ದಾರ್‌ಗೆ ಸೂಚನೆ ನೀಡಿದ್ದಾರೆ.
ವಿವಾದಿತ ಸ್ಥಳದಲ್ಲಿ ಈಗ ಪ್ರಾರ್ಥನೆ ಸಲ್ಲಿಸಿಲ್ಲ. ಹಳೇ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ಬಗ್ಗೆ ಅನುಮಾನವಿದೆ. ಈ ಬಗ್ಗೆ ವರದಿ ಸಲ್ಲಿಸುವಂತೆ ತಹಶೀಲ್ದಾರ್‌ಗೆ ಸೂಚಿಸಲಾಗಿದೆ. ವಿವಾದಿತ ಸ್ಥಳದಲ್ಲಿ ಯಾರೇ ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಂದು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಎಚ್ಚರಿಸಿದ್ದಾರೆ.
ಪ್ರಾರ್ಥನೆ ಸಲ್ಲಿಸಿರುವ ಜಾಗ, ವಿವಾದಿತ ಪ್ರದೇಶದ ಹೊರಗಿದೆ. ಆದರೆ ಯಾವುದೇ ಕಾರಣಕ್ಕೂ ಈ ಪ್ರದೇಶದಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘನೆಗೆ ಅವಕಾಶ ಕೊಡುವುದಿಲ್ಲ. ಅಲ್ಲಿರುವ ಕೊಠಡಿಗೆ ಈ ಹಿಂದೆ ಬಳಿದಿರುವ ಬಣ್ಣ ಬೇರೆಯಾಗಿದ್ದು, ಇತ್ತೀಚೆಗೆ ಬೇರೆ ಬಣ್ಣ ಬಳಿಯಲಾಗಿತ್ತು. ಯಾವ ವ್ಯಕ್ತಿ ಈ ವಿಡಿಯೋ ಹಾಕಿದ್ದಾರೆಂಬುದನ್ನು ಪತ್ತೆಹಚ್ಚಲು ತನಿಖೆ ನಡೆಸಲಾಗುವುದು ಎಂದರು.
ಆದರೆ ಹಿಂದು ಸಂಘಟನೆಗಳ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು ಮುಜರಾಯಿ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿಲ್ಲದೆ ನಮಾಜ್ ನಡೆಯಲು ಹೇಗೆ ಸಾಧ್ಯ. ಪ್ರತಿ ಬಾರಿ ಹಿಂದು ಭಾವನೆಗಳಿಗೆ ಧಕ್ಕೆ ತರಲಾಗುತ್ತಿದೆ. ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದಾರೆ.
Chikkamagaluru Just as the controversy on cooking meat at the Datta Peeta is still afresh, another one has raised its head. It is being alleged that namaz is being offered at the disputed cave shrine in contravention of the court orders. A purported video of the Namaz being offered has gone viral on social media.
09-03-26 09:51 pm
HK News Staffer
ಕೊಡಗು ; ಹತ್ತು ದಿನ ಅಂತರದಲ್ಲಿ ಕಾಡಾನೆಗೆ ಎರಡನೇ ಬಲ...
09-03-26 08:07 pm
ಕ್ಷುಲ್ಲಕ ಕಾರಣಕ್ಕೆ ಪತಿ- ಪತ್ನಿ ಜಗಳ, ಎರಡು ವರ್ಷದ...
09-03-26 05:44 pm
ಅವಕಾಶ ಕೊಟ್ಟರೆ ಮತ್ತೆರಡು ವರ್ಷ ಬಜೆಟ್ ಮಂಡಿಸುತ್ತೇನ...
09-03-26 04:17 pm
ಬಳ್ಳಾರಿ ವಸತಿ ಶಾಲೆಯಲ್ಲೇ ವಿದ್ಯಾರ್ಥಿಗಳ ಸಂಘರ್ಷ ;...
09-03-26 03:24 pm
09-03-26 01:44 pm
HK News Staffer
ಇರಾನ್ ಮೇಲೆ ಮತ್ತೊಂದು ಭಾರಿ ದಾಳಿಗೆ ಟ್ರಂಪ್ ಸಿದ್ಧ...
07-03-26 11:58 am
ರಾಜಧಾನಿ ಟೆಹ್ರಾನಲ್ಲಿದ್ದ ಅಯತೊಲ್ಲಾ ಖಮೇನಿಗೆ ಸೇರಿದ...
06-03-26 11:04 pm
ಲವ್ ಜಿಹಾದ್ ಕಡಿವಾಣಕ್ಕೆ ಮಹಾರಾಷ್ಟ್ರದಲ್ಲಿ ಹೊಸ ಮಸೂ...
06-03-26 10:58 pm
ಹರ್ಮುಜ್ ಜಲಸಂಧಿ ಅಮೆರಿಕ ಮಿತ್ರ ರಾಷ್ಟ್ರಗಳಿಗೆ ಮಾತ್...
06-03-26 11:40 am
09-03-26 09:52 pm
HK News Staffer
ಗಲ್ಫ್ ಯುದ್ಧ ; ಮಂಗಳೂರಿನಿಂದ ದುಬೈ, ಜೆದ್ದಾ ಸೇರಿ ಹ...
09-03-26 07:29 pm
ತಲಪಾಡಿಯ ಯುವಕ ಬೆಂಗಳೂರಿನಲ್ಲಿ ಕಟ್ಟಡದಿಂದ ಬಿದ್ದು ಸ...
09-03-26 02:53 pm
ಬೇರೆ ರಾಷ್ಟ್ರಗಳಿಂದ ಬಂದವರಿಗೆ ಮಸೀದಿ, ಚರ್ಚ್ ಕಟ್ಟಲ...
09-03-26 12:50 pm
CM Siddaramaiah, Kambala Bantwal: ರಮಾನಾಥ ರೈ ಐ...
07-03-26 11:31 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm