ಬ್ರೇಕಿಂಗ್ ನ್ಯೂಸ್
01-08-22 09:45 pm HK News Desk ದೇಶ - ವಿದೇಶ
ಹೈದ್ರಾಬಾದ್, ಆಗಸ್ಟ್ 1 : ನಟ ಚಂದನ್ ಕುಮಾರ್ ಅವರು ಕಿರುತೆರೆ ಮತ್ತು ಸಿನಿಮಾದಲ್ಲಿ ಗುರುತಿಸಿಕೊಂಡಿದ್ದಾರೆ. ತೆಲುಗಿನ ಧಾರಾವಾಹಿಯಲ್ಲೂ ಅವರು ನಟಿಸಿ ಫೇಮಸ್ ಆಗಿದ್ದಾರೆ. ‘ಶ್ರೀಮತಿ ಶ್ರೀನಿವಾಸ್’ ಧಾರಾವಾಹಿಯ ಶೂಟಿಂಗ್ ವೇಳೆ ಚಂದನ್ ಕುಮಾರ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ.
ಸೀರಿಯಲ್ ತಂತ್ರಜ್ಞರ ಜೊತೆ ಚಂದನ್ ಕಿರಿಕ್ ಮಾಡಿಕೊಂಡಿದ್ದು ಅವರಿಗೆ ಕಪಾಳಮೋಕ್ಷ ಮಾಡಲಾಗಿದೆ. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆ ನಡೆದು ಬಹಳ ದಿನಗಳಾಗಿದ್ದು, ಈಗ ಪ್ರಕರಣ ಬೆಳಕಿಗೆ ಬಂದಿದೆ.
ಯಾವ ಕಾರಣಕ್ಕಾಗಿ ಈ ಹಲ್ಲೆ ನಡೆದಿದೆ ಎಂಬುದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ. ಮೊದಲು ಚಂದನ್ ಅವರಿಂದ ಕ್ಯಾಮೆರಾಮ್ಯಾನ್ ಮೇಲೆ ಹಲ್ಲೆ ನಡೆಯಿತು. ಆ ಕಾರಣದಿಂದಲೇ ತಂತ್ರಜ್ಞರು ಚಂದನ್ ವಿರುದ್ಧ ತಿರುಗಿ ಬಿದ್ದರು ಎಂದು ಹೇಳಲಾಗುತ್ತಿದೆ. ಬಳಿಕ ಚಂದನ್ ಕ್ಷಮೆ ಕೇಳಿದರೂ ಕೂಡ ಅಲ್ಲಿದ್ದ ಯಾರೊಬ್ಬರೂ ಸಮಾಧಾನಗೊಂಡಿಲ್ಲ. ಪರಿಸ್ಥಿತಿ ಬಿಡಗಾಯಿಸಿದಾಗ ಕೈಕೈ ಮಿಲಾಯಿಸಿದ್ದಾರೆ.
ಹಲವು ವರ್ಷಗಳಿಂದ ಚಂದನ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಸಿನಿಮಾ ಮತ್ತು ಸೀರಿಯಲ್ ಎರಡೂ ಕ್ಷೇತ್ರದಲ್ಲಿ ಅವರು ಹೆಸರು ಗಳಿಸಿದ್ದಾರೆ. ಕನ್ನಡದ ‘ರಾಧಾ ಕಲ್ಯಾಣ’, ‘ಲಕ್ಷ್ಮೀ ಬಾರಮ್ಮ’ ಮುಂತಾದ ಧಾರಾವಾಹಿಯಿಂದ ಅವರು ಮನೆಮಾತಾಗಿದ್ದಾರೆ. ‘ಸಾವಿತ್ರಮ್ಮ ಗಾರಿ ಅಬ್ಬಾಯಿ’ ಮೂಲಕ ತೆಲುಗು ಕಿರುತೆರೆಗೂ ಚಂದನ್ ಕುಮಾರ್ ಎಂಟ್ರಿ ನೀಡಿದ್ದರು. ನಂತರ ‘ಶ್ರೀಮತಿ ಶ್ರೀನಿವಾಸ್’ ಧಾರಾವಾಹಿ ಒಪ್ಪಿಕೊಂಡರು. ಅದೇ ಸೀರಿಯಲ್ ಸೆಟ್ನಲ್ಲಿ ಅವರಿಗೆ ಕಪಾಳಮೋಕ್ಷ ಮಾಡಲಾಗಿದೆ.
ಸೀರಿಯಲ್ ಮಾತ್ರವಲ್ಲದೇ ಅನೇಕ ರಿಯಾಲಿಟಿ ಶೋಗಳಲ್ಲೂ ಚಂದನ್ ಭಾಗಿ ಆಗಿದ್ದಾರೆ. ‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’, ‘ಬಿಗ್ ಬಾಸ್ ಕನ್ನಡ ಸೀಸನ್ 3’ ಶೋಗಳಲ್ಲಿ ಸ್ಪರ್ಧಿಸಿದ ಬಳಿಕ ಅವರ ಖ್ಯಾತಿ ಇನ್ನಷ್ಟು ಹೆಚ್ಚಿತು. ‘ಲವ್ ಯೂ ಆಲಿಯಾ’, ‘ಪ್ರೇಮ ಬರಹ’ ಮುಂತಾದ ಸಿನಿಮಾಗಳಲ್ಲಿ ಚಂದನ್ ನಟಿಸಿದ್ದಾರೆ. ಕಿರುತೆರೆ ನಟಿ ಕವಿತಾ ಗೌಡ ಜೊತೆ ಅವರು 2021ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆ ಸಂದರ್ಭದಲ್ಲಿ ತೆಲುಗು ಸೀರಿಯಲ್ನಿಂದ ಅವರು ಬ್ರೇಕ್ ಪಡೆದುಕೊಂಡಿದ್ದರು.
కన్నడ సీరియల్ నటుడు చందన్ పై దాడి దృశ్యాలు#Chandankumar #srimathisrinivas pic.twitter.com/xewQ76Q4nA
— Asianetnews Telugu (@AsianetNewsTL) August 1, 2022
Kannada actor Chandan Kumar, who is the heartthrob of Kannada telly audience, was allegedly assaulted by a technician on the units of his Telugu show Srimathi Srinivas. The incident reportedly occurred on Sunday (July 31) when Chandan was shooting for the upcoming episode of his Telugu daily soap.
A video of the same has surfaced on various digital media platforms. In the video, Chandan Kumar is seen being confronted by a number of technicians on the sets of the Telugu daily soap. This eventually is seen turning into a heated verbal exchange. An individual from the sets is also seen assaulting Chandan.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am