ಬ್ರೇಕಿಂಗ್ ನ್ಯೂಸ್
10-08-22 08:24 pm HK News Desk ದೇಶ - ವಿದೇಶ
ನವದೆಹಲಿ, ಆಗಸ್ಟ್ 10: ಇತ್ತೀಚೆಗೆ ಮೊಹಮ್ಮದ್ ಪೈಗಂಬರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಮುಸ್ಲಿಮರ ಆಕ್ರೋಶಕ್ಕೆ ಗುರಿಯಾಗಿದ್ದ ಬಿಜೆಪಿ ನಾಯಕಿ ನೂಪುರ್ ಶರ್ಮಾ ದೇಶದ ವಿವಿಧೆಡೆ ದಾಖಲಾದ ಎಲ್ಲ ಪ್ರಕರಣಗಳನ್ನು ದೆಹಲಿಯಲ್ಲೇ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಈ ಬಗ್ಗೆ ನೂಪುರ್ ಶರ್ಮಾ ಪರ ವಕೀಲರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.
ನ್ಯಾಯಾಧೀಶ ಸೂರ್ಯಕಾಂತ್ ಮತ್ತು ಜೆಬಿ ಪಾರ್ದಿವಾಲಾ ಅವರಿದ್ದ ಪೀಠವು ಈ ಬಗ್ಗೆ ಬುಧವಾರ ಆದೇಶ ನೀಡಿದ್ದು ವಿವಾದಕ್ಕೆ ಸಂಬಂಧಿಸಿ ದೇಶದ ವಿವಿಧೆಡೆ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ದೆಹಲಿಯ ವಿಶೇಷ ಪೊಲೀಸ್ ತಂಡಕ್ಕೆ ಹಸ್ತಾಂತರ ಮಾಡಬೇಕು. ಎಲ್ಲ ಎಫ್ಐಆರ್ ಗಳನ್ನು ಕ್ಲಬ್ ಮಾಡಿ, ದೆಹಲಿ ಪೊಲೀಸರು ತನಿಖೆ ನಡೆಸಬೇಕು ಎಂದು ತಿಳಿಸಿದ್ದಾರೆ.

ಇದಲ್ಲದೆ, ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಎಫ್ಐಆರ್ ಗಳನ್ನು ರದ್ದುಪಡಿಸಲು ದೆಹಲಿ ಹೈಕೋರ್ಟ್ ಹೋಗಲು ಅನುಮತಿ ನೀಡಬೇಕೆಂದು ನೂಪುರ್ ಶರ್ಮಾ ಪರ ವಕೀಲರು ಕೇಳಿಕೊಂಡಿದ್ದಾರೆ. ಆ ಬಗ್ಗೆ ಪ್ರತಿಕ್ರಿಯಿಸಿದ ಪೀಠವು, ಯಾವೆಲ್ಲ ರೀತಿಯ ಪ್ರಕರಣಗಳು ದಾಖಲಾಗಿವೆ ಎನ್ನುವುದು ತಮ್ಮ ಗಮನಕ್ಕೆ ಇಲ್ಲ. ನೀವು ಅದರ ಬಗ್ಗೆ ಪ್ರಶ್ನೆ ಮಾಡುವುದಿದ್ದರೆ ದೆಹಲಿ ಹೈಕೋರ್ಟಿನಲ್ಲಿ ಮಾಡಬಹುದು ಎಂದಿದ್ದಾರೆ.
ಇದಕ್ಕೂ ಮುನ್ನ, ಎಲ್ಲ ಎಫ್ಐಆರ್ ಗಳನ್ನು ಕ್ಲಬ್ ಮಾಡಿ ದೆಹಲಿಯಲ್ಲೇ ವಿಚಾರಣೆ ನಡೆಸಬೇಕೆಂಬ ಕೋರಿಕೆಯ ಅರ್ಜಿ ಬಗ್ಗೆ ಗರಂ ಆಗಿದ್ದ ನ್ಯಾಯಪೀಠವು, ಈ ರೀತಿಯ ಹೇಳಿಕೆ ನೀಡುವಾಗ ನಿಮಗೆ ತಿಳಿದಿರಲಿಲ್ಲವೇ.. ಯಾರದ್ದೋ ಭಾವನೆ ಘಾಸಿಗೊಳಿಸಿ, ಇನ್ಯಾರದ್ದೋ ಜೀವ ಹಾನಿಯಾಗುವುದಕ್ಕೆ ಅವಕಾಶ ನೀಡಿದ್ದೀರಿ. ಇದಕ್ಕೆ ಕ್ಷಮೆ ಇಲ್ಲ ಎಂದು ನೂಪುರ್ ಶರ್ಮಾ ಹೇಳಿಕೆಯ ಬಗ್ಗೆ ಖಾರವಾಗಿ ಟೀಕಿಸಿತ್ತು. ಆನಂತರ, ಶರ್ಮಾ ಪರ ವಕೀಲರು ಪದೇ ಪದೇ ಕೋರಿಕೆ ಸಲ್ಲಿಸಿದ ಬಳಿಕ ಮತ್ತು ನೂಪುರ್ ಶರ್ಮಾ ಅವರಿಗೆ ಜೀವ ಬೆದರಿಕೆ ಇರುವುದರಿಂದ ಎಲ್ಲ ಕಡೆಗೂ ವಿಚಾರಣೆಗೆ ತೆರಳಲು ಸಾಧ್ಯವಾಗದು ಎಂದು ಮನವರಿಕೆ ಮಾಡಿದ ಕಾರಣ ಎಫ್ಐಆರ್ ಕ್ಲಬ್ ಮಾಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
The Supreme Court on Wednesday clubbed and transferred all FIRs lodged in several states against suspended BJP spokesperson Nupur Sharma over her remarks on the Prophet Mohammad to Delhi Police special cell’s IFSO unit. A special bench headed by Justice Surya Kant and Justice JB Pardiwala was hearing the plea filed by Sharma seeking clubbing and transfer of multiple FIRs filed against her.After hearing the arguments from all sides, the bench said, “Since this court has already taken cognisance of the threat to the life of the petitioner and specific instances have been cited, we direct that all the FIRs be transferred and clubbed to Delhi Police…
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm