ಬ್ರೇಕಿಂಗ್ ನ್ಯೂಸ್
14-08-22 07:15 pm HK News Desk ದೇಶ - ವಿದೇಶ
ಮುಂಬೈ, ಆಗಸ್ಟ್ 14: ಭಾರತೀಯ ಷೇರು ಮಾರುಕಟ್ಟೆಯ ದಿಗ್ಗಜ ಎಂದೇ ಖ್ಯಾತಿ ಎತ್ತಿರುವ ರಾಕೇಶ್ ಜುಂಜುನ್ ವಾಲಾ ವಹಿವಾಟು ನಿಲ್ಲಿಸಿ, ಚಿರನಿದ್ರೆಗೆ ಜಾರಿದ್ದಾರೆ. ಸಾಮಾನ್ಯ ಮಧ್ಯಮ ವರ್ಗದಲ್ಲಿ ಜನಿಸಿದ್ದ ರಾಕೇಶ್, ಷೇರು ಮಾರುಕಟ್ಟೆಯನ್ನೇ ಜೀವನದ ಹಾದಿಯನ್ನಾಗಿ ಸಾಧನೆಯ ಮೆಟ್ಟಿಲಾಗಿಸ್ಕೊಂಡು ಬೆಳೆದು ನಿಂತಿದ್ದೇ ರೋಚಕ. 37 ವರ್ಷಗಳಿಂದ ನಿರಂತರ ಷೇರು ವಹಿವಾಟು, ದಲ್ಲಾಳಿತನದಿಂದ ಅವರು ಗಳಿಸಿದ್ದು, ಸಾಧಿಸಿದ್ದು, ಏರಿದ್ದು ಜಗತ್ತಿನೆತ್ತರಕ್ಕೆ.
1985ರಲ್ಲಿ ಆಗಷ್ಟೇ ಸಿಎ ಪರೀಕ್ಷೆ ಪೂರೈಸಿ ಷೇರು ಮಾರುಕಟ್ಟೆಯತ್ತ ಆಸಕ್ತಿ ಬೆಳೆಸಿಕೊಂಡಿದ್ದ ರಾಕೇಶ್ ಅವರು ತಂದೆಯಲ್ಲಿ ಷೇರು ಹೂಡಿಕೆಗಾಗಿ ಹಣ ಕೇಳಿದ್ದರು. ಹಣ ಬೇಕಾದ್ರೆ ನೀನೇ ಮಾಡಿಕೊಳ್ಳು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಷ್ಟು ಹಣ ತನ್ನಲ್ಲಿ ಇಲ್ಲವೆಂದು ತಂದೆ ನಿರಾಕರಿಸಿದ್ದರು. ಒಂದ್ಕಡೆ ಉದ್ಯೋಗ ಮಾಡುತ್ತಲೇ 5 ಸಾವಿರ ರೂಪಾಯಿ ಗಳಿಸಿ, ಅದನ್ನೇ ಮೊದಲ ಬಾರಿಗೆ ಷೇರಿನ ಮೇಲೆ ಹೂಡಿಕೆ ಮಾಡಿದ್ದರು. ಮೊದಲಿಗೆ ಟಾಟಾ ಟೀ ಕಂಪನಿ ಷೇರನ್ನು 43 ರೂ.ನಂತೆ 5 ಸಾವಿರ ಷೇರು ಖರೀದಿಸಿದ್ದರು. ಕೇವಲ ಮೂರೇ ತಿಂಗಳಲ್ಲಿ 43 ರೂಪಾಯಿ ಇದ್ದ ಷೇರಿನ ಮೌಲ್ಯ 143ಕ್ಕೆ ನೆಗೆದಿತ್ತು. ರಾಕೇಶ್ ಜುಂಜುನ್ ವಾಲಾ 5 ಸಾವಿರ ಹೂಡಿಕೆ ಮಾಡಿ, ಅದರ ಮೂರು ಪಟ್ಟು ಲಾಭ ಮಾಡಿಕೊಂಡಿದ್ದರು. ಆನಂತರದ ವರ್ಷಗಳಲ್ಲಿ ಷೇರು ಮಾರುಕಟ್ಟೆಯ ಆಳ-ಅಗಲವನ್ನು ತಿಳಿಯುತ್ತಲೇ ಅದರಿಂದ ಲಾಭ ಗಿಟ್ಟಿಸಿಕೊಳ್ಳಲು ಶುರು ಹಚ್ಚಿದ್ದರು. ಹೂಡಿಕೆ ಶುರು ಹಚ್ಚಿದ ಕೇವಲ ಮೂರು ವರ್ಷದಲ್ಲಿ ಅವರು ಗಳಿಸಿದ್ದು 20ರಿಂದ 25 ಲಕ್ಷ ರೂಪಾಯಿ. ಹೀಗೆ ಶುರುವಾಗಿದ್ದ ಜುಂಜುನ್ ವಾಲಾ ಅವರ ಷೇರು ವಹಿವಾಟು ಮುಂಬೈನ ದಲ್ಲಾಲ್ ಸ್ಟ್ರೀಟನ್ನೇ ಆವರಿಸುವಂತಾಗಿತ್ತು.
ಚಾರ್ಟರ್ಡ್ ಅಕೌಂಟೆಂಟ್ ಆಗಿ ತನ್ನ ಓರಗೆಯ ಇತರರು ಅಡಿಟಿಂಗಲ್ಲಿ ಬಿಝಿಯಾಗಿದ್ದರೆ, ರಾಕೇಶ್ ಜುಂಜುನ್ ವಾಲಾ ಭಾರತದಲ್ಲಿ ಷೇರು ಮಾರುಕಟ್ಟೆ ಏನೆಂದೇ ತಿಳಿಯದ ಹೊತ್ತಲ್ಲಿ ಕೋಟ್ಯಂತರ ಗಳಿಸುವತ್ತ ಮುನ್ನಡೆದಿದ್ದರು. ನೀವು ರಿಸ್ಕ್ ತಗೊಳ್ಳದೇ ಇದ್ದರೆ, ಮುನ್ನಡೆಯಲು ಸಾಧ್ಯವಿಲ್ಲ. ರಿಸ್ಕ್ ತಗೊಂಡು ಆಳಕ್ಕಿಳಿದರೆ, ಅದರತ್ತ ಗಮನವನ್ನೂ ಅಷ್ಟೇ ಇಡಬೇಕು. ಯಾವುದೇ ಕ್ಷಣದಲ್ಲಿ ಬಾಣ ನಿಮ್ಮ ವಿರುದ್ಧ ತಿರುಗಿಬಿಟ್ಟರೆ, ಅದನ್ನು ಸಂಭಾಳಿಸುವುದೂ ಗೊತ್ತಿರಬೇಕು. ಹಾಗೆ ಮಾಡಿದರೆ, ಒಂದ್ವೇಳೆ ಒಂದಷ್ಟು ಕಳಕೊಂಡರೂ ನೀವು ಧೃತಿಗೆಡುವುದಿಲ್ಲ ಎಂದು ಹೇಳುತ್ತಿದ್ದರು ಜುಂಜುನ್ ವಾಲಾ.
ಜಗತ್ತಿನೆತ್ತರಕ್ಕೆ ಬೆಳೆದ ಐಟಿ ಕಮಿಷನರ್ ಮಗ
1960ರ ಜುಲೈ 5ರಂದು ಹುಟ್ಟಿದ್ದ ರಾಕೇಶ್ ಅವರು ಮೂಲತಃ ರಾಜಸ್ಥಾನಿ. ಅವರ ತಂದೆ ಮುಂಬೈನಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಕಮಿಷನರ್ ಆಗಿದ್ದರು. ಹಾಗಾಗಿ ರಾಕೇಶ್ ಶಿಕ್ಷಣ ಎಲ್ಲ ಮುಂಬೈನಲ್ಲೇ ನಡೆದಿತ್ತು. ಆಗೆಲ್ಲಾ ಸರಕಾರಿ ಅಧಿಕಾರಿಯಾಗಿದ್ದರೂ, ಮಧ್ಯಮ ವರ್ಗದವರೇ ಆಗಿದ್ದರು. ಹೆಚ್ಚೇನು ಸಿರಿವಂತ ಕುಟುಂಬ ಆಗಿರಲಿಲ್ಲ. ಆದರೆ ರಾಕೇಶ್ ಗಣಿತದಲ್ಲಿ ಅಪಾರ ಬುದ್ಧಿಮತ್ತೆ ಇದ್ದುದರಿಂದ ತನ್ನ ಹಾದಿಯನ್ನು ತಾನೇ ಕಂಡುಕೊಂಡಿದ್ದರು. ಷೇರು ಮಾರುಕಟ್ಟೆಯಲ್ಲೇ ಬದುಕಿನುದ್ದಕ್ಕೂ ಹೂಡಿಕೆ, ಗಳಿಕೆಯಲ್ಲೇ ತೊಡಗಿಸಿಕೊಂಡಿದ್ದ ಜುಂಜುನ್ ವಾಲಾ, ಮುಂಬೈ ಷೇರು ಮಾರುಕಟ್ಟೆಯನ್ನೇ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವಷ್ಟರ ಮಟ್ಟಿಗೆ ಬೆಳೆದಿದ್ದರು.
ದೇಶದ 48ನೇ ಅತಿ ಸಿರಿವಂತ ವ್ಯಕ್ತಿ
ಸದ್ಯಕ್ಕೆ ಅವರ ಆಸ್ತಿ ಗಳಿಕೆಯ ಮೊತ್ತ 46 ಸಾವಿರ ಕೋಟಿ ರೂಪಾಯಿಗೇರಿತ್ತು. 2021ರಲ್ಲಿ ಫೋರ್ಬ್ಸ್ ಪಟ್ಟಿಯ ಪ್ರಕಾರ ಭಾರತದಲ್ಲಿ 36ನೇ ಸಿರಿವಂತ. 2022ರಲ್ಲಿ ಸಿರಿವಂತಿಗೆಯಲ್ಲಿ 48ನೇ ಸ್ಥಾನಕ್ಕೆ ಜಾರಿದ್ದರು. ಜಗತ್ತಿನ ಸಿರಿವಂತರ ಪೈಕಿ 438ನೇ ಸ್ಥಾನ ಜುಂಜುನ್ ವಾಲಾ ಅವರದ್ದಿತ್ತು. ಇದೆಲ್ಲವನ್ನೂ ಗಳಿಸಿದ್ದು ಕೇವಲ ಷೇರು ಮಾರುಕಟ್ಟೆಯಿಂದಲೇ ಅನ್ನೋದು ರಾಕೇಶ್ ಜುಂಜುನ್ ವಾಲಾ ಅವರ ಹೆಗ್ಗಳಿಕೆ. ಅದಕ್ಕಾಗಿ ಅವರನ್ನು ಭಾರತದ ವಾರೆನ್ ಬಫೆಟ್ ಎಂದೇ ಕರೆಯುತ್ತಿದ್ದರು. ಯಾಕಂದ್ರೆ, ಭಾರತದಲ್ಲಿ ಷೇರು ಮಾರುಕಟ್ಟೆಯ ಆರಂಭದಿಂದಲೇ ಅದರಲ್ಲಿ ಹೂಡಿಕೆ ಮಾಡುತ್ತಲೇ ಅಪಾರ ಆಸ್ತಿ ಗಳಿಸಿದ್ದ ಮತ್ತು ದೇಶದ ಅತಿದೊಡ್ಡ ಮುಂಬೈ ಷೇರು ಮಾರುಕಟ್ಟೆಯನ್ನೇ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವಷ್ಟು ಬೆಳೆದಿದ್ದ ಜುಂಜುನ್ ವಾಲಾ, ಷೇರು ಹೂಡಿಕೆದಾರರಿಗೆ ಆದರ್ಶವಾಗಿದ್ದ ವ್ಯಕ್ತಿ.
ಜುಂಜುನ್ ವಾಲಾ, ಷೇರು ಮಾರುಕಟ್ಟೆಯಲ್ಲಿ ಖ್ಯಾತಿಯ ಉತ್ತುಂಗಕ್ಕೇರಿದ್ದರೂ ಹೂಡಿಕೆ ಮೇಲೆ ನಿರಾಸಕ್ತಿ ತೋರುತ್ತಿರಲಿಲ್ಲ. ತನ್ನ ಕೊನೆಗಾಲದ ವರೆಗೂ 40ಕ್ಕಿಂತಲೂ ಹೆಚ್ಚು ಕಂಪನಿಗಳಲ್ಲಿ ಷೇರು ಖರೀದಿಸಿದ್ದರು. ಟೈಟಾನ್, ಟಾಟಾ, ಟಾಟಾ ಮೋಟರ್ಸ್, ಸ್ಟಾರ್ ಹೆಲ್ತ್ ಕಂಪನಿಗಳು ಅವರ ನೆಚ್ಚಿನ ಹೂಡಿಕೆಯ ತಾಣಗಳಾಗಿದ್ದವು. 35 ವರ್ಷಗಳ ಹಿಂದೆ ಹೂಡಿಕೆ ಆರಂಭಿಸುವ ಹೊತ್ತಿಗೆ ಮುಂಬೈ ಷೇರು ಮಾರುಕಟ್ಟೆಯ ಸ್ಟಾಕ್ ಪಾಯಿಂಟ್ ಕೇವಲ 150 ಆಗಿತ್ತು. ಈಗ ಮುಂಬೈ ಷೇರು ಮಾರುಕಟ್ಟೆಯ ಸೆನ್ಸೆಕ್ಸ್ ಪಾಯಿಂಟ್ 59 ಸಾವಿರಗಳಷ್ಟಿದೆ. ಈ ಮಧ್ಯೆ, ಜುಂಜುನ್ ವಾಲಾ ಗಳಿಸಿದ್ದು ಕೋಟ್ಯಂತರ ಆಸ್ತಿ. ಷೇರು ಹೂಡಿಕೆಯ ಜೊತೆಗೆ ಡಿಜಿಟಲ್ ಮೀಡಿಯಾ ಕಂಪನಿಯನ್ನೂ ಹುಟ್ಟು ಹಾಕಿದ್ದರು. ಅಪ್ಟೆಕ್ ಲಿಮಿಟೆಡ್ ಮತ್ತು ಹಂಗಾಮಾ ಡಿಜಿಟಲ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಚೇರ್ಮನ್ ಕೂಡ ಆಗಿದ್ದರು. ಆನಂತರ, ಹಲವಾರು ಕಂಪನಿಗಳಲ್ಲಿ ನಿರ್ದೇಶಕರಾಗಿಯೂ ಸ್ಥಾನ ಗಿಟ್ಟಿಸಿಕೊಂಡಿದ್ದರು. ಹಲವು ಕಂಪನಿಗಳಿಗೆ ಷೇರು ಮಾರುಕಟ್ಟೆ ಬಗ್ಗೆ ಸಲಹೆಗಳನ್ನು ನೀಡುತ್ತಿದ್ದರು.
ವಾರ್ಷಿಕ ಗಳಿಕೆಯ 25 ಶೇ. ಸಂಪತ್ತು ದಾನ
ಜುಂಜುನ್ ವಾಲಾ ಅವರು ತಮ್ಮ ಕೋಟ್ಯಂತರ ಆಸ್ತಿ ಗಳಿಕೆಯನ್ನು ಹಾಗೇ ಕೂಡಿಡುತ್ತಿರಲಿಲ್ಲ. ತನ್ನ ವಾರ್ಷಿಕ ಗಳಿಕೆಯ 25 ಶೇಕಡಾ ಆಸ್ತಿಯನ್ನು ಹಲವು ಚಾರಿಟಿ ಸಂಸ್ಥೆಗಳಿಗೆ ದಾನ ನೀಡುತ್ತಿದ್ದರು. ಶಿಕ್ಷಣ, ಆರೋಗ್ಯ, ಔಷಧೀಯ ಉದ್ದೇಶಗಳಿಗಾಗಿ ಸಂಪತ್ತನ್ನು ದಾನ ಮಾಡುತ್ತಿದ್ದರು. ಕ್ಯಾನ್ಸರ್ ರೋಗಿಗಳಿಗೆ ನೆರವು ನೀಡುವ ಸೈಂಟ್ ಜೂಡ್, ಅಗಸ್ತ್ಯ ಇಂಟರ್ನ್ಯಾಶನಲ್ ಸಂಸ್ಥೆ, ಮಕ್ಕಳ ಲೈಂಗಿಕತೆ ಬಗ್ಗೆ ಅರಿವು ಮೂಡಿಸುವ ಅರ್ಫಾನ್ ಸಂಸ್ಥೆಗಳಿಗೆ ಅಪಾರ ಕೊಡುಗೆ ನೀಡಿದ್ದರು. ಮಹಾರಾಷ್ಟ್ರದ ಪನ್ವೇಲ್ ನಲ್ಲಿ ರಾಕೇಶ್ ಜುಂಜುನ್ ವಾಲಾ ಅವರ ಪಾಲುದಾರಿಕೆಯಲ್ಲಿ ಸಂಕರ ಕಣ್ಣಿನ ಆಸ್ಪತ್ರೆ ಸ್ಥಾಪನೆ ಮಾಡಲಾಗಿತ್ತು. 225 ಬೆಡ್ ಸಾಮರ್ಥ್ಯದ ಈ ಆಸ್ಪತ್ರೆಯಲ್ಲಿ ಉಚಿತವಾಗಿ ಕಣ್ಣಿನ ಸರ್ಜರಿ ಮಾಡಲಾಗುತ್ತಿದೆ. ಅದರ ಹೆಸರನ್ನು ರಾಕೇಶ್ ಜುಂಜುನ್ ವಾಲಾ ಸಂಕರ್ ಐ ಹಾಸ್ಪಿಟಲ್ ಎಂದೇ ಹೆಸರಿಸಲಾಗಿದೆ.
ವಾರದ ಹಿಂದಷ್ಟೇ ವೈಮಾನಿಕ ಕ್ಷೇತ್ರಕ್ಕೆ
ಇಷ್ಟೆಲ್ಲ ಸಾಧನೆ ಮಾಡಿರುವ ರಾಕೇಶ್ ಜುಂಜುನ್ ವಾಲಾ ಬಹು ಅಂಗಾಂಗ ವೈಫಲ್ಯದಿಂದಾಗಿ ತಿಂಗಳ ಹಿಂದೆಯೇ ಆಸ್ಪತ್ರೆಗೆ ದಾಖಲಾಗಿದ್ದರು. ಕಿಡ್ನಿ ಫೈಲ್ ಆಗಿದ್ದರಿಂದ ತಿಂಗಳ ಕಾಲ ಆಸ್ಪತ್ರೆಯಲ್ಲೇ ಕಳೆದು ಆನಂತರ ಡಿಸ್ಚಾರ್ಜ್ ಆಗಿದ್ದರು. ಇದರ ನಡುವೆಲ್ಲೇ ಕಳೆದ ವಾರ ವೈಮಾನಿಕ ಕ್ಷೇತ್ರಕ್ಕೂ ತಮ್ಮ ಉದ್ಯಮ ವಿಸ್ತರಣೆ ಮಾಡಿದ್ದರು. ಅಕಾಸಾ ಏರ್ ಅನ್ನುವ ಹೊಸ ಏರ್ ಲೈನ್ಸ್ ಸಂಸ್ಥೆಯನ್ನು ಹುಟ್ಟುಹಾಕಿದ್ದ ಜುಂಜುನ್ ವಾಲಾಗೆ ಜೆಟ್ ಏರ್ವೇಸ್ ಸಂಸ್ಥೆಯ ಮಾಜಿ ಸಿಇಓ ವಿನಯ್ ದುಬೆ ಮತ್ತು ಇಂಡಿಗೋ ಸಂಸ್ಥೆಯ ಮಾಜಿ ಮುಖ್ಯಸ್ಥ ಆದಿತ್ಯ ಘೋಷ್ ಸಾಥ್ ನೀಡಿದ್ದರು. ಅವರಿಬ್ಬರ ಒತ್ತಾಸೆಯಲ್ಲಿ ವೈಮಾನಿಕ ಕ್ಷೇತ್ರಕ್ಕೆ ಕಾಲಿಟ್ಟು ಅಕಾಸಾ ಏರ್ ಸಂಸ್ಥೆಯ ವಿಮಾನಗಳು ರೆಕ್ಕೆ ಬಿಚ್ಚಿ ಹಾರುವ ಹೊತ್ತಿಗೆ ಜುಂಜುನ್ ವಾಲಾ ಲೋಕವನ್ನೇ ಬಿಟ್ಟು ಹೋಗಿದ್ದಾರೆ. ಆಗಸ್ಟ್ 7ರಂದು ಅಕಾಸಾ ಏರ್ ಸಂಸ್ಥೆ ಲಾಂಚ್ ಆಗಿದ್ದು, ವಾಣಿಜ್ಯ ಉದ್ದೇಶದ ವಿಮಾನಗಳಷ್ಟೇ ಹಾರಾಟ ಆರಂಭಿಸಿದೆ. ಕೆಲವೇ ವಿಮಾನ ಸಂಸ್ಥೆಗಳ ಹಿಡಿತದಲ್ಲಿದ್ದ ವೈಮಾನಿಕ ಕ್ಷೇತ್ರದಲ್ಲಿ ಅಕಾಸಾ ಏರ್ ಹೊಸ ಧೂಳು ಎಬ್ಬಿಸುವ ಲಕ್ಷಣಗಳಿದ್ದವು. ರಾಕೇಶ್ ಜುಂಜುನ್ ವಾಲಾ ಅವರ ಪತ್ನಿ ರೇಖಾ ಅವರು ಕೂಡ ಷೇರು ಹೂಡಿಕೆದಾರರಾಗಿದ್ದು, ಹೊಸ ಕಂಪನಿಗೆ ಸಾಥ್ ನೀಡುತ್ತಾರೆಯೇ, ಅದರ ಭವಿಷ್ಯ ಹೇಗಿರುತ್ತೆ ಅನ್ನುವ ಬಗ್ಗೆ ಈಗಲೇ ಸಂಶಯಗಳು ಎದ್ದಿವೆ.
The iconic investor, Rakesh Jhunjhunwala died on August 14, the eve of India’s 75th Independence Day. The ‘Big Bull’ of the Indian market passed away at the age of 62. Jhunjhunwala also known as India’s Warren Buffet has had a tremendous journey in the Indian market. CA by qualification, Jhunjhunwala starts his journey from Rs 5000, and today as per Forbes, his net wealth is 5.8 billion. Begun with a portfolio of Rs 5000, he is the Big Bull of Dalal street now.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am